Monday, 9 February 2026

Cheers to 80 years!
To a woman who has turned pain into purpose and struggle into strength...your strength,  positivity and courage inspire everyone around you...feeling proud to look at your journey...Happiest birthday Atya🎊may god bless you with health n happiness .....
ಪಲ್ಲಣ್ಣ, 
      ‌  ಇವತ್ತು ನಿನ್ನ ಆಶೀರ್ವಾದ ನನಗೆ ಬೇಕು.ಅಲ್ಲಿಗೆ ಹುಟ್ಟುಹಬ್ಬ ಮುಗಿದಂತೆ. ಬಾಕಿಯದು ಆ ದಿನದ ನೆವವಷ್ಟೇ!!!🙏🙏🙏 ನಿನ್ನ ಸಹನ ಶಕ್ತಿಯಲ್ಲಿ ಸ್ವಲ್ಪಷ್ಟೇ ನನಗೂ ದೊರಕಿ ಮುನ್ನಡೆಸಲಿ.🙏ಅಷ್ಟೇ  ಸಾಕು...

Saturday, 7 February 2026

ಎಂಬತ್ತು+ ???   
  
     ನಿವೃತ್ತಿಯ ನಂತರ 2006 ರಲ್ಲಿ ಬೆಂಗಳೂರಿಗೆ ಬಂದೆ.ಇಪ್ಪತ್ತು ವರ್ಷಗಳಾದವು.ಮೊಮ್ಮಕ್ಕಳನ್ನು ಬೆಳೆಸುತ್ತಾ ಜೊತೆಜೊತೆಗೆ ನಾನೂ ಬೆಳೆದೆ.ಕೊನೆಯ ಮೊಮ್ಮಗನೂ adult list ಗೆ ಬಂದ ಮೇಲೆ ನಾನೂ ಹಿರಿಯರ ಪಟ್ಟಿಗೆ ಈಗ ದಾಖಲಾಗಿದ್ದೇನೆ.ಮಕ್ಕಳು, ಮೊಮ್ಮಕ್ಕಳು ನನ್ನನ್ನು ನೋಡಿಕೊಳ್ಳು ತ್ತಿದ್ದಾರೆ.ಇದಕ್ಕಿಂತ ಹೆಚ್ಚು ಬೇರೇನು ಬೇಕು...?!

             Smart phone ದಲ್ಲಿ ಕಲಿಯ ಬೇಕಾದುದಕ್ಕೆ ಅನೇಕರ ಸಹಾಯವನ್ನು
ಪಡೆದೆ- ಪುಸ್ತಕಗಳನ್ನು ಬರೆದೆ-ಅನುವಾದ ಗಳನ್ನು ಮಾಡಿದೆ...ನನಗಾಗಿಯೇ, ವೇಳೆ ಕಳೆಯಲೆಂದು- ಅದು ನನ್ನನ್ನು busy ಯಾಗಿಟ್ಟಿತು-ಅಸಂಖ್ಯ ಗೆಳತಿಯರನ್ನೂ
ಕೊಟ್ಟಿತು...

           ಎಲ್ಲ ಸುಖ- ದುಃಖದ ಗಳಿಗೆಗಳ ನ್ನೂ ದಾಖಲಿಸಿದ್ದೇನೆ.ಅವು ಮುಂದಿನ ಬದುಕಿನಲ್ಲಿ ನೆನಪಾದಾಗಲೊಮ್ಮೆ ಹಿಂದಕ್ಕೆ ಹೋಗಿ ಅನುಭವಿಸಲಿಕ್ಕಾಗಿ ಅಷ್ಟೇ...

              ಈಗ ಸಾಕೆನಿಸಿದೆ- ಇನ್ನು ಆದಷ್ಟು- ಆದಾಗ..ಆದರೆ...ಮಾತ್ರ.
    ‌          
             

Cheers to 80 years! To a woman who has turned pain into purpose and struggle into strength...your strength,  positivity and courage inspire ...