Saturday, 7 February 2026

ಎಂಬತ್ತು+ ???   
  
     ನಿವೃತ್ತಿಯ ನಂತರ 2006 ರಲ್ಲಿ ಬೆಂಗಳೂರಿಗೆ ಬಂದೆ.ಇಪ್ಪತ್ತು ವರ್ಷಗಳಾದವು.ಮೊಮ್ಮಕ್ಕಳನ್ನು ಬೆಳೆಸುತ್ತಾ ಜೊತೆಜೊತೆಗೆ ನಾನೂ ಬೆಳೆದೆ.ಕೊನೆಯ ಮೊಮ್ಮಗನೂ adult list ಗೆ ಬಂದ ಮೇಲೆ ನಾನೂ ಹಿರಿಯರ ಪಟ್ಟಿಗೆ ಈಗ ದಾಖಲಾಗಿದ್ದೇನೆ.ಮಕ್ಕಳು, ಮೊಮ್ಮಕ್ಕಳು ನನ್ನನ್ನು ನೋಡಿಕೊಳ್ಳು ತ್ತಿದ್ದಾರೆ.ಇದಕ್ಕಿಂತ ಹೆಚ್ಚು ಬೇರೇನು ಬೇಕು...?!

             Smart phone ದಲ್ಲಿ ಕಲಿಯ ಬೇಕಾದುದಕ್ಕೆ ಅನೇಕರ ಸಹಾಯವನ್ನು
ಪಡೆದೆ- ಪುಸ್ತಕಗಳನ್ನು ಬರೆದೆ-ಅನುವಾದ ಗಳನ್ನು ಮಾಡಿದೆ...ನನಗಾಗಿಯೇ, ವೇಳೆ ಕಳೆಯಲೆಂದು- ಅದು ನನ್ನನ್ನು busy ಯಾಗಿಟ್ಟಿತು-ಅಸಂಖ್ಯ ಗೆಳತಿಯರನ್ನೂ
ಕೊಟ್ಟಿತು...

           ಎಲ್ಲ ಸುಖ- ದುಃಖದ ಗಳಿಗೆಗಳ ನ್ನೂ ದಾಖಲಿಸಿದ್ದೇನೆ.ಅವು ಮುಂದಿನ ಬದುಕಿನಲ್ಲಿ ನೆನಪಾದಾಗಲೊಮ್ಮೆ ಹಿಂದಕ್ಕೆ ಹೋಗಿ ಅನುಭವಿಸಲಿಕ್ಕಾಗಿ ಅಷ್ಟೇ...

              ಈಗ ಸಾಕೆನಿಸಿದೆ- ಇನ್ನು ಆದಷ್ಟು- ಆದಾಗ..ಆದರೆ...ಮಾತ್ರ.
    ‌          
             

No comments:

Post a Comment

'80'- years...           ಕಳೆದು ಹೋದವು- ಹೇಗೆ? ಏಕೆ?  ಯಾವಾಗ ಅಂತ ಗೊತ್ತಾಗದೇ...!!ಹಲವು ಆಶೆಗಳು- ನಿರಾಶೆಗಳು- ಅಷ್ಟಿಷ್ಟು ಕೆಲಸ ಗಳು- ಬಹಳಷ್ಟು ಯೋಜನೆ-...