ಕಳೆದು ಹೋದವು- ಹೇಗೆ? ಏಕೆ?
ಯಾವಾಗ ಅಂತ ಗೊತ್ತಾಗದೇ...!!ಹಲವು ಆಶೆಗಳು- ನಿರಾಶೆಗಳು- ಅಷ್ಟಿಷ್ಟು ಕೆಲಸ ಗಳು- ಬಹಳಷ್ಟು ಯೋಜನೆ- ಯೋಚನೆ ಗಳು- ಕನಸುಗಳ ಗೋಪುರಗಳು- ಎಲ್ಲವುಗಳನ್ನು ಬೇಕೋ ಬೇಡವೋ ಸದಾ ಅನುಭವಿಸಿ 'ಹಣ್ಣಾದೆ'...
ಈ ' ಮಹಾಯಾನ'ದಲ್ಲಿ ಪ್ರತ್ಯೇಕ ವಾಗಿ/ಪರೋಕ್ಷವಾಗಿ ಭಾಗಿಯಾದವರ
ಪಟ್ಟಿಯನ್ನು ಕಂಡು ಕರಗಿಹೋದೆ.ನನ್ನದು
ಜ್ಞಾನ ಕೋಶಕ್ಕಿಂತ ಭಾವಕೋಶದಲ್ಲಿ
ನಂಬಿಕೆ ಹೆಚ್ಚು.ಅದು ನಿನ್ನೆ ಇನ್ನಷ್ಟೂ ಗಟ್ಟಿ
ಗೊಂಡಿತು...
ಅಸಂಖ್ಯಾತ ಗೆಳತಿಯರು- ಸಂಭಂಧಿಗಳೂ-ಪರಿಚಯಸ್ಥರು-ಮುಖ ಪುಟದ ಸಂಬಂಧಿಗಳು- ವಿದ್ಯಾರ್ಥಿಗಳು-
ನ್ನ ಸಹೋದ್ಯೋಗಿಗಳು ಯಾರೆಲ್ಲ ನಿನ್ನೆ
ನನಗೆ ಹಾರೈಸಿದ್ದಾರೆ- ಇಡೀದಿನ ಫೋನ್
ಕರೆಗಳು ಸಾಥ್ ಕೊಟ್ಟವು- ಇದು ಮಧ್ಯರಾತ್ರಿಯವರೆಗೂ ಜಾರಿಯಿತ್ತು. ಹೊರದೇಶದಲ್ಲಿರುವವರ Time Zone ಗೆ ಅನುಗುಣವಾಗಿ...
ಮೊದಮೊದಲು ಸ್ವತಃ ತಕ್ಷಣವೇ
ಪ್ರತಿಕ್ರಿಯೆಗಳನ್ನು ಬರೆದೆ..ಹೊತ್ತು ಕಳೆದಂತೆ ಅದು ಸಾಧ್ಯವಾಗದೇ ಬರಿ
Acknowledge ಮಾಡಿದೆ.ನಾನು ಕೆಲಸದಲ್ಲಿದ್ದಾಗ ಬಂದವುಗಳಿಗಾಗಿ...
ಅಮೇರಿಕಾದಿಂದ ಮಗನಿಗೆ
ಕೊನೆಗಳಿಗೆಯಲ್ಲಿ ಬರಲಾಗದೇ ಮೊದಲೇ ಮಾಡಿದ plan ಬದಲಾಗಿ ಸೊಸೆ - ಇಲ್ಲಿಯ ಮಗಳ ಕುಟುಂಬದ ಜೊತೆಯಲ್ಲಿ ಚಿಕ್ಕದಾಗಿ- ಚೊಕ್ಕವಾಗಿ ದಿನ
ಕಳೆಯಿತು,ನೀವೆಲ್ಲ ಜೊತೆಗಿದ್ದಿರಿ ನಿಮ್ಮ
ಹಾರೈಕೆಗಳು- ಸಂದೇಶಗಳು-ಫೋನ್ ಕರೆಗಳ ರಿಂಗಣ- ಒಬ್ಬ ಮೊಮ್ಮಗನ ಸಾಂಗತ್ಯ -ಏನೆಲ್ಲ ಇದ್ದವು ಸಂಭ್ರಮ ಹೆಚ್ಚಿಸಲು!!!
ಹುಟ್ಟುಹಬ್ಬದ ಸಂಭ್ರಮ ನಮಗೆ ಇತ್ತೀಚೆಗೆ ಬೆಳೆದು ಬಂದದ್ದು- ಮಕ್ಕಳು- ಮೊಮ್ಮಕ್ಕಳ ಕಾಲದಲ್ಲಿ.ಆದರೆ ನಮ್ಮನ್ನು ಇಡಿಇಡಿಯಾಗಿ ಮೀಯಿಸುತ್ತಿ ವೆ...ತೋಯಿಸುತ್ತಿವೆ...ಮೆರೆಸುತ್ತಿವೆ... ಇರಲಿ...ಹಾಗೇ ಅದರ ಅಮಲು ಇನ್ನೂ ಕೆಲ ದಿನ- ಜೊತೆಗೆ...
ಇನ್ನೂ ಅದರಲ್ಲೇ ಇದ್ದೇನೆ-ಹಾಗೇ ಇನ್ನೂ ನೀವೂ ಜೊತೆಗಿದ್ದೀರಿ...ಸದಾ ಇರಿ...
Thank you everyone...
No comments:
Post a Comment