Monday, 23 February 2026

      ಅಣ್ಣನ post graduation ಮುಗಿದು, ನೌಕರಿ ಸಿಕ್ಕು ಧಾರವಾಡದಲ್ಲಿ ಮನೆಮಾಡಿ, ನಾವು ಧಾರವಾಡಕ್ಕೆ ಬಂದದ್ದು ೧೯೬೫ರಲ್ಲಿ...ನಾವಿದ್ದ ಮನೆ 
ಹತ್ತು ಕೋಣೆಗಳ ಬಹು ದೊಡ್ಡ ಮನೆ.
ಎರಡು ಕಿಚನ್ ಗಳು/ಎರಡು ಅಟ್ಟಗಳು
ಎರಡು ರೂಮುಗಳು ಒಂದೊಂದು ಕುಟುಂಬದ ಲೆಕ್ಕಕ್ಕೆ.ಅವುಗಳ ಮಧ್ಯದಲ್ಲಿ ಯ ಪಡಸಾಲೆ/ನಡುಮನೆ/ಹಿತ್ತಲಕ್ಕೆ ಹೋಗುವ ಹಾಸುದಾರಿ - ಎಲ್ಲರ ಬಳಕೆಕೆ.
ಲಭ್ಯವಿದ್ದಾಗ- ಲಭ್ಯವಿದ್ದಷ್ಟು...
         ಮೊದಲು ಬಾಡಿಗೆದಾರಳಾಗಿ/ ಮನೆಯೊಡತಿಯಾಗಿ/ಮೂರುಮಕ್ಕಳ 
ತಾಯಿಯಾಗಿ/ಒಂಟಿಯಾಗಿ ಆ ಮನೆಯಲ್ಲಿದ್ದುದು ೪೨ ವರ್ಷಗಳು...
ನಂತರ ಮಕ್ಕಳ ಬಳಿ ಸುತ್ತುತ್ತ ಆಗಾಗ ಅಲ್ಲಿಗೆ ಹೋಗುತ್ತ ಕಳೆದ ಕೆಲ ವರ್ಷಗಳು.
ಯಾವುದಕ್ಕೂ ಮಹದಂತರವಿಲ್ಲದೇ ಇದ್ದು ಬದುಕಿನ ಅಂಚಿಗೆ ಬಂದು ತಲುಪಿದ್ದೇನೆ...ಎರಡೂ ಕುಟುಂಬಗಳು/
ಬರುವವರು+ ಹೋಗುವವರು -ಎಲ್ಲ ಸೇರಿ ೧೫-೨೦ ಜನರಿದ್ದುದು ಸಾಮಾನ್ಯ...
ಆದರೂ ಒಬ್ಬರ ಜೊತೆಗೂ ನ್ಯಾಯ, ಜಗಳವಿಲ್ಲದೇ ಅನುಕೂಲಕ್ಕಾಗಿ ಕೂಡಿ ಕೊಂಡು ಇದ್ದಂತೆ ೪೨ ವರ್ಷಗಳನ್ನು ಕಳೆದು,ಅವರೆಲ್ಲರೊಂದಿಗೂ ಇಂದಿಗೂ
ನೇರ ಸಂಪರ್ಕದಲ್ಲಿದ್ದದ್ದು ನನಗೆ ಅಚ್ಚರಿಯೇನೂ ಇಲ್ಲ.ಇಂದಿಗೂ ಮೂರನೇ ತಲೆಮಾರಿಗೂ ಅದು ಹಾಗೇ
ನಡೆದುಕೊಂಡು ಬಂದದ್ದೇ ಒಂದು ಹೆಗ್ಗಳಿಕೆ...
 ‌‌‌‌ ‌‌           ಈ ನಾಲ್ಕು ದಶಕಗಳ ಬದುಕು
ನನಗೆ ಕಲಿಸಿದಷ್ಟು ಬೇರಾವುದೂ ಕಲಿಸಿಲ್ಲ

No comments:

Post a Comment

      ಅಣ್ಣನ post graduation ಮುಗಿದು, ನೌಕರಿ ಸಿಕ್ಕು ಧಾರವಾಡದಲ್ಲಿ ಮನೆಮಾಡಿ, ನಾವು ಧಾರವಾಡಕ್ಕೆ ಬಂದದ್ದು ೧೯೬೫ರಲ್ಲಿ...ನಾವಿದ್ದ ಮನೆ  ಹತ್ತು ಕೋಣೆಗಳ ಬಹು ದೊಡ್...