Sunday, 1 March 2026

     ನಾನು ಹುಟ್ಟಿ ಬೆಳೆದ ರಟ್ಟೀಹಳ್ಳಿ/ ವಿದ್ಯಾಭ್ಯಾಸ+ಸಂಸಾರ ಮಾಡಿದ ಧಾರವಾಡ/ಸಂಧ್ಯಾಸ್ಥಾನ ಬೆಂಗಳೂರು
ಎಲ್ಲವೂ ಬದಲಾಗಿವೆ...ನನ್ನ ನೆನಪಿನಲ್ಲಿ
ಭೂತ/ಕಣ್ಣೆದುರು ವರ್ತಮಾನ/ಕಲ್ಪನೆಯಲ್ಲಿ ಭವಿಷತ್ ಅಕ್ರರಶಃ ಕಂಗಾಲಾಗಿಸಿವೆ...ಸಹಜವೇ...ಎಂಬತ್ತು ಸಣ್ಣ ಅಂಕೆಯಲ್ಲ...ಬೆಳವಣಿಗೆಯ ಪರಿಯೂ ಚಿಕ್ಕದಿಲ್ಲ...ಹಾಗಿದ್ದಾಗ ದೂರು
ದಾಖಲಿಸುವ ಬದಲು ಸ್ವೀಕರಿಸುವುದೇ
ಮೇಲು...

          ನಿನ್ನೆ ಧಾರವಾಡಕ್ಕೆ ಬಂದಿದ್ದೇನೆ. ಹದಿನೈದು ದಿನಗಳ ಚಿಕ್ಕ ಅವಧಿ ಸಿಕ್ಕಿದೆ. ಏನಾಗುತ್ತೋ/ಎಷ್ಟಾಗುತ್ತೋ ಅಷ್ಟೇ ಲಭ್ಯ...ಅಷ್ಟೇ ಸಾಕು...

             ಕೈಯಲ್ಲಿ ಹಾಳೆ ಹಿಡಿದುಕೊಂಡು ಮೊದಲಿನಂತೆ ಕಾರ್ಯಕ್ರಮಗಳ ಯಾದಿ ತಯಾರಿಸಿ ಆನಂದಿಸುವ ವಯಸ್ಸೂ+ ಮನಸ್ಸು ಎರಡೂ ಈಗ ಇಲ್ಲ...ಆದರೆ ಯಾವುದೋ ಒಂದು ನೆನಪನ್ನು ನೆನೆದುಕೊಂಡು ಅದರ ಬಗ್ಗೆ ನಾಲ್ಕು ಸಾಲುಗಳನ್ನು ಬರೆಯುತ್ತ ಬಂದಿರುವ ಸದಾಕಾಲದ ಹವ್ಯಾಸವನ್ನು ಆದಷ್ಟೂ
ಜೀವಂತವಾಗಿ ಉಳಿಸಿಕೊಳ್ಳುವ ಆಸೆ
ನನ್ನದು...

ಕಾಲಾಯ ತಸ್ಮೈ ನಮಃ...
   

          

     ನಾನು ಹುಟ್ಟಿ ಬೆಳೆದ ರಟ್ಟೀಹಳ್ಳಿ/ ವಿದ್ಯಾಭ್ಯಾಸ+ಸಂಸಾರ ಮಾಡಿದ ಧಾರವಾಡ/ಸಂಧ್ಯಾಸ್ಥಾನ ಬೆಂಗಳೂರು ಎಲ್ಲವೂ ಬದಲಾಗಿವೆ...ನನ್ನ ನೆನಪಿನಲ್ಲಿ ಭೂತ/ಕಣ್ಣೆದುರು ವರ್ತಮ...