ಹೊಟ್ಟೆ ನೋವು ಬರ್ತಿದೆ/ ಹೊಟ್ಟೆ ನೋಯ್ತಾ ಇದೆ.ಮೊದಲು ನಿಮ್ಮ ಹಲ್ಲುಗಳನ್ಬು ತೆಗೆಯಬೇಕು...ನಂತರ ಹತ್ತು ದಿನ ನಾಲ್ಕು ಹೊತ್ತು ನಾನು ಕೊಟ್ಟ
ಔಷಧಿ ತಪ್ಪದೇ ತೆಗೆದುಕೊಳ್ಳಬೇಕು... ಆಮೇಲೆ ಡೈನೋಸಾರ್ ಹೊರಗೆ ಬರುತ್ತದೆ..."
"ನನ್ನ ಹಲ್ಲುಗಳು!!!??"
"ದಿನಕ್ಕೊಂದು ಬಾಳೆಹಣ್ಣು ತಿಂದರೆ ಕೆಲ ದಿನಗಳ ನಂತರ ಬಂಗಾರ/ಬೆಳ್ಳಿಯ
ಹಲ್ಲುಗಳು ಬರುತ್ತವೆ".
ಇದು ನನ್ನ ತಂಗಿಯ ಮೊಮ್ಮಗಳ
'ದವಾಖಾನೆ'ಯ ವರದಿ...ಅಪ್ಪನೊಂದಿಗೆ
ಆಡುತ್ತ ಆರೋಗ್ಯ ತಪಾಸಣೆ ಮಾಡುತ್ತಿದ್ದಾಗ ಇನ್ನೂ ಮೂರು ತುಂಬದ
ಅಸ್ಮಿ ಯ diagnose ಮತ್ತು ತುರ್ತು treatment...
ವಿಡಿಯೋ ನೋಡಿ ನಕ್ಕು ನಕ್ಕು
ಸಾಕಾದ ಮೇಲೆ ಒಂದು ಕ್ಷಣ ಮನಸ್ಸನ್ನೇ
ಕುಟುಕಿದ ವಿಷಾದ...ಈ ಮುಗ್ಧತೆ/ಕಲ್ಪನೆ/
ನಗು/ಮಕ್ಕಳೊಂದಿಗೆ ಮಕ್ಕಳಾಗಿ ವೇಳೆ
ಕಲಿಯುವ ಅನುಕೂಲ ಯಾವವೂ ಇಲ್ಲದೇ ನಿದ್ದೆಗಣ್ಣಿನಲ್ಲಿ ಕಣ್ಣುಜ್ಜುತ್ತ ಶಾಲೆ ಯ ಬಸ್ಸನ್ನೋ/ಕಾರನ್ನೋ ಏರಿ ನಸುಕಿನಲ್ಲಿಯೇ ಕಣ್ಮರೆಯಾಗುವ ಮುದ್ದು ಮಕ್ಕಳು+ ಒತ್ತಡದಲ್ಲಿಯೇ ಕಳಿಸಿಕೊಡುವ ಪಾಲಕರು- ಇವರನ್ನು
ನೋಡುತ್ತಾ ನಿಟ್ಟುಸಿರು ಚಲ್ಲಿ ಹತಾಶ ರಾಗುವ ನಾವು- ಅಜ್ಜ- ಅಜ್ಜಿಯರು... ಸಮಸ್ಯೆ ಗೊತ್ತಿದ್ದೂ ಪರಿಹಾರ ಕಂಡರಿಯದ ಹತಾಶ ಭಾವ...
No comments:
Post a Comment