1) ಹಲೋ ಚೇತು,
ಐವತ್ತು ವರ್ಷಗಳನ್ನು ದಾಟಿ ಐವತ್ತೊಂದಕ್ಕೆ ಕಾಲಿಡುತ್ತಿರುವ ನಿನ್ನ ಹುಟ್ಟು ಹಬ್ಬದ ಶುಭ ದಿನದಂದು ನನ್ನ ಮನದಾಳದ ಅಭಿನಂದನೆಗಳು. ಕಾಲದ ಜಿಗಿತ ಆಶ್ಷರ್ಯ ಮಾಡ್ತದ. ಮೊನ್ನೆ ಮೊನ್ನೆಯಷ್ಟs ಹೊಸಯಲ್ಲಾಪುರದ ಹೆಮ್ಲೀ ಓಣಿಯೊಳಗ ನಿನ್ನನ್ನು ಹದಿನೈದು ಇಪ್ಪತ್ತು ವರ್ಷದವಳಿದ್ದಾಗ ನೋಡಿದ್ದ ಚಿತ್ರವಿನ್ನೂ ಕಣ್ಮುಂದಿದೆ. ನಿನ್ನ ಸಾಧನೆಗಳನ್ನು ನನ್ನ ಮಕ್ಕಳಿಗೆ ತೋರಿಸಲು ಅಲ್ಲಿಗೆ ಬರುತ್ತಿದ್ದೆವು. ಮೊದಲಿನಿಂದಲೂ ನಿನ್ನದು outstanding performance.
ಮನೆತನದಲ್ಲಿ ಮೊದಲ PhD, ರಾಜ್ಯ ಸರಕಾರದ NGO ದ ಮೊದಲ ಉದ್ಯೋಗಿ ಸ್ವಂತ enterprunership ಹಿಂಗ ಎಷ್ಟೋ ಕ್ಷೇತ್ರದೊಳಗ ಮೊದಲಿಗಳು ನೀನು. ಬಹಳ ಸಂತೋಷ. ಸಂಸಾರ, ಕೆರಿಯರ್ ಎರಡನ್ನೂ ಅದ್ಭುತವಾಗಿ ಸಮತೋಲನದಲ್ಲಿ ತೂಗಿದ, ಸುತ್ತಲಿನ ಜನರನ್ನು ಅಂತಃಕರಣದಿಂದ ಕಂಡ ಸಹೃದಯಿ. ಇನ್ನಷ್ಟು ಹೊಸ ಸಾಹಸಗಳಿಗೆ ಮುನ್ನುಡಿ ಬರಿ, ಸುಖ ಸಂತೋಷದ ಜೀವನ ಕಳಿ. ನೀನು ಬಯಸಿದ್ದೆಲ್ಲವನ್ನೂ ದೇವರು ಕರುಣಿಸಲಿ, Happy birthday.
ವಿನುತಾ ಮಾಮಿ
29/04/2026
No comments:
Post a Comment