ಆಗ ಪರಿಚಯದವರಿಂದ ಕವಿತಾ ಪರಿಚಯವಾದಳು.ಸತತ ಕೃಷಿಯಲ್ಲಿ
ಹಾನಿ/ಮಗಳ ಮದುವೆ/ಭಾಗಾದಿಗಳ+
ಮನೆಮಂದಿಯ ತಕರಾರು ಇದರಿಂದಾಗಿ
ಅತಿಯಾದ ಸಾಲವಾಗಿ ಇಡಿ ಕುಟುಂಬ
ಸಂಕಷ್ಟದಲ್ಲಿತ್ತು.ನಮ್ಮಲ್ಲಿಗೆ ಬಂದಾಗ
ಸಂಪೂರ್ಣ ಸೋತು ಹತಾಶಳಾದ ಕವಿತಾ
ವಿಧೇಯಳಾಗಿ/ಕೆಲಸ,ಹಣವೇ ಎಲ್ಲವಾಗಿ
ದುಡಿಮೆಯಲ್ಲಿ ಲೀನವಾಗಿ ಬದುಕು ಎತ್ತಿ
ಹಿಡಿದಳು.ಅವಳ ಪ್ರಾಮಾಣಿಕತೆಗೆ ನಾವು
ಮಾಡಿದ ಸಹಾಯವನ್ನೆಲ್ಲ ಪರಿಗಣಿಸಿ
ನಮ್ಮ ಮನೆಯಲ್ಲಿ ನಾವು ಹೇಳದೇ ಎಲ್ಲ
ಜವಾಬ್ದಾರಿ ಹೊತ್ತು ನೆರವಾಗಿ/ತನ್ನ ಚಾಕ ಚಕ್ಯತೆಯಿಂದ ಸಾಲವನ್ನೆಲ್ಲ ಪೂರ್ತಿಯಾ ಗಿ ತೀರಿಸಿಕೊಂಡು ಒಂದೆಕರೆ ಜಮೀನು/ ಮಗಳ ಮದುವೆ/ ಕಳೆದುಕೊಂಡ ಬಂಗಾರ ಖರೀದಿ ಎಲ್ಲವನ್ನೂ ಮರಳಿ
ಪಡೆದು/ಇಬ್ಬರೂ ಗಂಡುಮಕ್ಕಳನ್ನು ಬೆಂಗಳೂರಿಗೇನೇ ಕರೆಸಿಕೊಂಡು cab
ಖರೀದಿಸಿ ನೆಲೆಗೆ ಹಚ್ಚಿದಳು..ಅವಳ ಪ್ರಾಮಾಣಿಕ ಪ್ರಯತ್ನಕ್ಕೆ ಯಶಸ್ಸು ಸಿಕ್ಕು
ಇದೀಗ ತಮ್ಮೂರಲ್ಲಿ ನಾಲ್ಕು bedrooms
ಇರುವ ಎರಡಂತಸ್ತಿನ ಮನೆ ಕಟ್ಟಿದ್ದಾಳೆ.
ಇದರಿಂದ ಖುಶಿಯಾದ ಗಂಡ+ ಮಕ್ಕಳು
ಅವಳೊಂದಿಗೆ ಸೇರಿ ಅಷ್ಟಭುಜಳನ್ನಾಗಿ
ಮಾಡಿ ಅಚ್ಚರಿಯ ರೀತಿಯಲ್ಲಿ ಸತತವಾಗಿ ಮೇರೇರುತ್ತಿದ್ದಾರೆ.
ನಾವು ಕೋರಮಂಗಲಕ್ಕೆ ಬಂದಿದ್ದರೂ ಒಂದೇ ಒಂದು ಫೋನ್
Callನಿಂದ ನಮಗೆ ಹತ್ತಿರವಾಗಿದ್ದಾರೆ. ಪ್ರತಿ ಸಂತಸದ ಗಳಿಗೆಗಳನ್ನೂ ಹಂಚಿಕೊಳ್ಳುತ್ತಾರೆ...ಒಂದು ಅನುಕೂಲ
ಮುಗಿದಕೂಡಲೇ ಎಲ್ಲರೂ ಹೊಸದರಲ್ಲಿ
ತೊಡಗುತ್ತಾರೆ...
ಹಿಂದೆ ಕಾಡಿದವರು ಕರುಬು ತ್ತಿದ್ದಾರೆ.ಬದುಕು ಸರಿದಾರಿಯಲ್ಲಿದೆ...
No comments:
Post a Comment