ಎಂಬ ನಿತ್ಯ ರಗಳೆಗಳನ್ನು ಬದಿಗೆ ಸರಿಸಿ
ಬೇಸಿಗೆಯ ರಜಾ ದಿನಗಳ ಮಧ್ಯದಲ್ಲಿ ಯೇ ಕೊಂಚ ಬದಲಾವಣೆಯಾಯಿತು ಈ ದಿನ....
ಮಕ್ಕಳ ಪರೀಕ್ಷೆಗಳು ಮುಗಿದು ಉದ್ವೇಗದ ಉಸಿರಾಟಕ್ಕೆ ಸಿಕ್ಕ
ಕೊಂಚ ಬಿಡುವನ್ನು ಬಳಸಿಕೊಂಡು, ಸಾಧ್ಯವಿದ್ದವರೆಲ್ಲ ಸೇರಿ ಅಕ್ಕನ ಮಗನ ಮನೆಯಲ್ಲಿ ವಾರ್ಷಿಕ ಕಾರ್ಯಕ್ರಮವಾಗಿ
ಸತ್ಯನಾರಾಯಣ ಪೂಜೆಯ ಆಚರಣೆ ಯಾಯ್ತು ಇವತ್ತು...ಧಾರವಾಡ/ಬೆಂಗಳೂರು/ಅಮೇರಿಕಾದಿಂದ ಬಂದ
ಅಕ್ಕತಂಗಿಯರ/ ಅಣ್ಣತಮ್ಮಂದಿರ ಭೇಟಿಯೂ ಆ ಪೂಜೆಯಷ್ಟೇ ಅಲಭ್ಯ
ಲಾಭ...ಪೂಜೆ+ ಹರಟೆ+ ಊಟ+ ಫೋಟೋ ಇತ್ಯಾದಿ ಎಲ್ಲವೂ ಲಾಭ.ಎಲ್ಲ ವಯಸ್ಸಿನವರ ಮೇಳವಾದ ಕಾರಣ ಹಿರಿಯರ ಆಶೀರ್ವಾದ/ಎಳೆಯರ ಸಂಭ್ರಮ/ನಡುವೈಯಸ್ಸಿಗರ ತುರ್ತು ಪರಿಸ್ಥಿತಿಯ ಕಾರ್ಯನಿರ್ವಹಣೆ/ ಉದ್ಯೋಗ ವಲಯದ ನಿರಂತರ ಚರ್ಚೆಗಳು/ರುಚಿಕಟ್ಟಾದ ಊಟ ಏನೆಲ್ಲ
ಸೇರಿದ ಕಾರಣಗಳು ಇಂದಿನ ನೆನಪನ್ನು
ಬಹಳ ಕಾಲ ನೆನಪಿಗೆ ಬರುವಂತೆ ಭದ್ರ
ವಾಗಿಸಿವೆ...
No comments:
Post a Comment