Friday, 20 November 2026

ಒಳಗು...

ವೃದ್ಧ್ಯಾಪ್ಯ- ಅಂದರೆ 'ಮರು ಬಾಲ್ಯ'- ಅಂತ ಕೇಳಿದ್ದೆ/ನೋಡಿದ್ದೆ/ನಕ್ಕಿದ್ದೆ.ಈಗ
ಅನುಭವಿಸುತ್ತಿದ್ದೇನೆ...ಓದಬೇಕು-ನನ್ನಣ್ಣ ಆಗುವುದಿಲ್ಲ.ಬರೆಯಬೇಕು- ಏನು? - ಎಂಬುದರ ಗೊಂದಲ.,.ಹೊರಗೆ ಹೋಗಲು ಇಚ್ಛೆ- ಯಾರಾದರೂ ಜೊತೆ- ಗಿರಬೇಕು, ಬರಿ ಇಚ್ಛೆಯಿಂದ ಏನೂ 
ಸಾಧಿಸಲಾಗುವುದಿಲ್ಲ ಎಂದು ಗೊತ್ತು...
ವಯಸ್ಸಿನ ವ್ಯತ್ಯಾಸವಿದ್ದರೆ ವಿಷಯಗಳ- ಅಭಿರುಚಿಗಳ ಸಾಮ್ಯತೆ ಕಡಿಮೆ...ಮಾತು ಗಳು ಮೊಟಕಾಗುತ್ತವೆ.ಎರಡು ಭೇಟಿಗಳ
ನಡುವಿನ ವ್ಯತ್ಯಾಸ ಜಾಸ್ತಿಯಾದಷ್ಟು
ಆಪ್ತಭಾವ ಲುಪ್ತವಾಗುತ್ತದೆ.

              ಇದು ನಿಜವೋ/ಕೇವಲ ನನ್ನ  ಅನಿಸಿಕೆಯೋ - ಇನ್ನೂ ಅರ್ಥವಾಗಿಲ್ಲ...
ಹೀಗಾಗಿ ಮಾತು- ಮನನ- ಚಿಂತನೆ-
ಅಭಿವ್ಯಕ್ತಿ ಬೇಗನೇ ಗಟ್ಟಿಗೊಳ್ಳದೇ ಒಳತೋಟಿ ಹೆಚ್ಚುತ್ತದೆ.ಕಾರಣವಿಲ್ಲದೇ
ಚಿಂತನೆ ತುಂಡಾಗುತ್ತದೆ...ನಮ್ಮನೆಯ
ಬಳಗ ಹೆಚ್ಚು- ಎಂಬತ್ತು ದಾಟಿದವರೂ
ಸಾಕಷ್ಟು ಇದ್ದಾರೆ.ಆದರೆ ಓದು- ಹಿನ್ನೆಲೆ-
ಬೆಳೆದ ರೀತಿ- ಒಪ್ಪಿದ ವಿಚಾರಗಳು- ಬದುಕಿನ ನೆಲೆಗಳು ವಿಭಿನ್ನ...ಏಕನಾಡಿ
ಆಗಲು ಸಾಧ್ಯವಿಲ್ಲ.ಸಾಕಷ್ಟು ಪ್ರಜ್ಞೆಯಲ್ಲೇ ಇದ್ದರೂ ಪರಿಹಾರ ದೂರ...

               ವಯಸ್ಸಿನ/ಮನಸ್ಸಿನ ಸ್ಥಿತಿ
ಹದಗೆಡುವ ಮುನ್ನ ಒಂದು ಗತಿ ಕಲ್ಪಿಸಿ ಕೊಳ್ಳಬೇಕು- ಗಟ್ಟಿಯಾಗಬೇಕು-ನನ್ನಣ್ಣ
ನಂತೆ- ಇದು ಸದಾ‌ ನನ್ನನ್ನು ಕಾಡುತ್ತಿದೆ...

ಸಾಧ್ಯವಾಗಬೇಕಷ್ಟೇ...
 

Tuesday, 17 November 2026

ಮೊಮ್ಮಗನ foot ball/second PU
Classes/regular schooling ಇವೆಲ್ಲವುಗಳಿಗಾಗಿ ದೂರವಾಗುತ್ತಿದೆ-- ಎಂಬ ಕಾರಣಕ್ಕೆ Electronic city ಯಿಂದ ಕೋರಮಂಗಲಕ್ಕೆ ಮೂರು ವರ್ಷಗಳ ಹಿಂದೆ ಬಂದಿದ್ದೆವು-ಮೊದಲ ಬಾರಿ apartment ಬದುಕಿಗೆ ಹಾಗೂ ಹೀಗೂ ಹೊಂದಿಕೊಂಡೂ ಆಯಿತು.ಈಗ ಮನೆ ಮಾಲಿಕರೇ ಬರುತ್ತಿರುವುದರಿಂದ
ಮನೆ ಖಾಲಿ ಮಾಡಿದೆವು-ಅದೇ apartment ನಲ್ಲಿ ಬೇರೆ ಮನೆಗೆ...

Saturday, 7 November 2026

Dear Professor Maiti,

I recently read your VECTOR+ paper and found it quite interesting.

I’ve been working on a project where I use pre-1950 materials data to try and generate relevant compounds that were discovered much later. I use different generation methods and rank candidates based on novelty and feasibility.

I found some similarities with VECTOR+, particularly in exploring chemical space while balancing property optimization and novelty. I was curious whether the activity guided embeddings could limit the generation of genuinely novel structures, and how you approach this trade off.

Attatching a short summary of my understanding of the vector+ paper and what ive been working on.

Vector+ summary - https://drive.google.com/file/d/1fdkQpz2eD_zN_4cd2ie7FQOMPs94ZBnl/view?usp=sharing

My project - https://drive.google.com/file/d/18QVPd_zITamtg6ky60rujaLiRQ2KuEWw/view?usp=sharing



I’d love to learn more about your work. Would it be possible to visit your lab sometime?

Regards,  
Pranjal

26B2718

Thursday, 5 November 2026

ಜೀವೇತ್ ಶರದಃ ಶತಮ್...   
       
          ಅಮ್ಮ ಅಪ್ಪನಿಗೆ ನಾವು ಏಳು ಜನ‌ ಮಕ್ಕಳು.( ಬದುಕು ಬೆಳಗುವ ಮುನ್ನವೇ  ನಂದಿ ಹೋದ ಇಬ್ಬರು ಮೂವರ ಲೆಕ್ಕ ಬಿಟ್ಟು.) ನಮ್ಮೆಲ್ಲರ ಮಕ್ಕಳ ಸಂಖ್ಯೆ ಹತ್ತೊಂಬತ್ತು. ಹತ್ತು ಜನ ಹೆಣ್ಣು ಮಕ್ಕಳು, ಒಂಬತ್ತು ಗಂಡು. ಅವರ ನಂತರದ ಪೀಳಿಗೆಯ ಸಧ್ಯದ ಲೆಕ್ಕ, ಮೂವತ್ತರ ಸಮೀಪ. ಮನೆಯಲ್ಲಾದ ಮದುವೆ/ ಬಸಿರು/ ಬಯಕೆ /ತೊಟ್ಟಿಲು / ಜವಳ/ ಉಪನಯನ/ ಗೃಹ ಪ್ರವೇಶ ಅಂತ ಆದ ಚಿಕ್ಕ- ಪುಟ್ಟ ಕಾರ್ಯಕ್ರಮ ಗಳನ್ನು ಲೆಕ್ಕ ಹಾಕಲು ಚನ್ನಾಗಿ  ಗಣಿತ ಬಲ್ಲವರೇ ಆಗಬೇಕು.ಆದರೂ ಅವು ಆಗಾಗ ನೆನಪಿನಂಗಳಕ್ಕೆ ನುಗ್ಗಿ, ನೆನಪಿನಾಳವ ಕೆದಕಿ ಅಲ್ಪಕಾಲವಾದರೂ
ಸರಿಯೇ ಖುಶಿಕೊಟ್ಟು
ಮರೆಯಾಗುವಂಥವು. 
                   
                     ಆದರೆ ಹಿರಿ ಕಿರಿಯರು /ಬಂಧು- ಬಳಗ/ ಶಿಷ್ಯ- ಸ್ನೇಹಿತ ವರ್ಗ ಎಂಬ ಭೇದವೇ ಇಲ್ಲದೇ ಪ್ರತಿಯೊಬ್ಬರೂ ತಮ್ಮದೇ ಎನ್ನುವಂತೆ ಸಂಭ್ರಮಿಸಿದ  ಒಂದು ಕಾರ್ಯಕ್ರಮ ಎಂದರೆ ನಮ್ಮ ಎರಡನೇ ಅಣ್ಣನ ೮೦ ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಏನೂ ಮಾಡುವದು ಬೇಡವೇ ಬೇಡ-ಎನ್ನುವ ಅವನಿಂದ ಒತ್ತಾಯದ ಒಪ್ಪಿಗೆ ಪಡೆದು ಮೂರು ದಿನಗಳ ಒಂದು ಕಾರ್ಯಕ್ರಮವನ್ನು ಆಯೋಜಿಸಿ/ ಅಹುದಹುದೆನ್ನುವಂತೆ ನಡೆಸಿಕೊಟ್ಟು ಮಕ್ಕಳು/ ಮೊಮ್ಮಕ್ಕಳು ಗೆದ್ದದ್ದು ಎಲ್ಲರಿಗೂ ಒಂದು ಸಮಾಧಾನ/ ಸಂಭ್ರಮ/ ಸಡಗರ... 
        
             ಎಂಬತ್ತರಲ್ಲಿ ಅಖಂಡ ಅರವತ್ತು ವರ್ಷಗಳನ್ನು ಕಲಿಸುವದ ರಲ್ಲೇ ಕಳೆದು/ ಸ್ವಂತಕ್ಕಿಂತ ಇತರರ ಬಗ್ಗೆಯೇ ಹೆಚ್ಚು ಚಿಂತಿಸಿ/ ಸಂಪಾದಿಸಿದ್ದರ ಲ್ಲೂ ಸ್ವತಃ ಅನುಭವಿಸಿದ್ದ ಕ್ಕಿಂತಲೂ ಹೆಚ್ಚು ಭಾಗ    ಇತರರಿಗೆಂದೇ ವ್ಯಯಿಸಿ 'ಬದುಕಿನಲ್ಲಿ ಕೊಂಡದ್ದ
ಕ್ಕಿಂತ ಕೊಟ್ಟಿದ್ದೇ ಹೆಚ್ಚಾಗ ಬೇಕೆಂಬುದನ್ನು' ಅಕ್ಷರಶಃ  ಪಾಲಿಸಿದ ವ್ಯಕ್ತಿಗೆ  ಧನ್ಯವಾದಗಳನ್ನು ಹೇಳಿ ಕಿಂಚಿತ್ತಾದರೂ 'ಋಣ ಸಂದಾಯ' ಮಾಡಲೇ ಬೇಕು ಎಂದು ಮನಸಾ ಕಾಯುತ್ತಿದ್ದವರಿಗೊಂದು ಅಪರೂಪದ ಅವಕಾಶ...

           ಮೊದಲ ದಿನ-
 *A small family get together at home.

*ಮರುದಿನ Pearl Ocean Resort ನಲ್ಲಿ   ಅಭಿನಂದನಾ ಗ್ರಂಥ
" ಜೀವೇತ್ ಶರದಃ ಶತಮ್"- ಪುಸ್ತಕದ ಬಿಡುಗಡೆ ಹಾಗೂ
ಆಹ್ವಾನಿತರಿಗಾಗಿ ವಿಶೇಷ ಕಾರ್ಯಕ್ರಮ.

*ಮೂರನೇ ದಿನ ಕುಲದೇವರಾದ ಆಂಜನೇಯನಿಗೆ / ಸತ್ಯ ನಾರಾಯಣನಿಗೆ ವಿಶೇಷ ಪೂಜೆ...
             ಹೀಗೆ ಮೂರು ಹಂತಗಳ ಕಾರ್ಯಕ್ರಮ
ಗಳು ಮನೆಮಂದಿಗೆಲ್ಲ ಮುಂದೆ ಒಂದು ವರ್ಷ ಕಾಲ ನೆನಪಿನ ಬುತ್ತಿಯಂತೆ  ಕೆಲಸ ಮಾಡುವದರಲ್ಲಿ ಸಂಶಯವಿಲ್ಲ.

   ‌‌          ಇದೇ ವೇಳೆಗೆ ಪಲ್ಲಣ್ಣನ ದೀರ್ಘಕಾಲದ
ಸಾಧನೆಯ ಹಾದಿಯ ಬಗ್ಗೆ ಒಂದು ಕಿರು ಚಿತ್ರ/ ಬಂಧು- ಬಳಗ/ ಸ್ನೇಹಿತ-  ಹಿತೈಷಿ ವರ್ಗದವರ ಅನಿಸಿಕೆಗಳನ್ನು  ಬರಹಗಳ ರೂಪದಲ್ಲಿ ದಾಖಲಿಸಿದ ಪುಸ್ತಕದ ಬಿಡುಗಡೆ/ ಕೊನೆಗೊಂದು ಭೋಜನ ಕೂಟ - ಇವು ಕಾರ್ಯಕ್ರಮದ high lights ಗಳು...

   ‌‌‌‌‌‌     ಎಂಬಂತ್ತೊಂದರ ವಯಸ್ಸಿನಲ್ಲೂ ಅವನ ಉತ್ಸಾಹ ಕಿಂಚಿತ್ತೂ  ಬತ್ತಿಲ್ಲ. ಕನಸುಗಳು ಎಳ್ಳಷ್ಟೂ ಮಸುಕಾಗಿಲ್ಲ. ಒಂದರ ಹಿಂದೆಒಂದರಂತೆ ಬಂದ ಕಷ್ಟಗಳ ಲೆಕ್ಕವನ್ನು ಅವನೆಂದೂ ಇಟ್ಟಿಲ್ಲ, ಇಡುವದೂ ಇಲ್ಲ... ಆದರೂ 'ಮಾಡಬೇಕಾದು ದು ಇನ್ನೂ ತುಂಬಾನೇಯಿ ದೆ 'ಎನ್ನುವಭಾವವೊಂದು ಸದಾಕಾಲ ಕಾಡುತ್ತಲೇ
ಇರುವದು ಮಾತ್ರ ಸತ್ಯ.

       ಅವನವು ಎನ್ನುವ ಎಲ್ಲ ಕನಸುಗಳು ನನಸಾಗಬೇಕು -

*ಅವನಿಗಾಗಿ,
 
*ಅವನನ್ನು ನಂಬಿದ ವಿದ್ಯಾರ್ಥಿಗಳಿಗಾಗಿ, 

*ಬದುಕಿಗೆ ಅವನನ್ನೇ ಅವಲಂಬಿಸಿದ  ಸಂಸಾರಗಳಿಗಾಗಿ,

     ಇದು ನಮ್ಮೆಲ್ಲರ ಮನದ ಹರಕೆ, ಹಾರೈಕೆ. ಇದಕ್ಕಾಗಿ ಅವನು ನೂರು ವರ್ಷಗಳ ಕಾಲ ಬದುಕಿ ಬಾಳಬೇಕು.

"ಜೀವೇತ್ ಶರದಃ ಶತಮ್."

Monday, 2 November 2026

Jeevan Pranam Patra...

[02/11, 7:19 pm] Krishna Koulagi: Thank you for successfully submitting your digital life certificate. Your Pramaan id is 7358140871. You may view life certificate online at https://jeevanpramaan.gov.in/v1.0/ppouser/login. Your Digital life certificate shall be processed by your pension Disbursing Agency for release of pension. NICSI
[02/11, 7:19 pm] Krishna Koulagi: Thank you for successfully submitting your digital life certificate. Your Pramaan id is 4485004001. You may view life certificate online at https://jeevanpramaan.gov.in/v1.0/ppouser/login. Your Digital life certificate shall be processed by your pension Disbursing Agency for release of pension. NICSI

Saturday, 24 October 2026

ನೆಪವು ಸಿಕ್ಕಿತು ಸಾವಿಗೆ...

          " ನನ್ನ ಮೇಲೆ ಮೂರು ಜನ ಹಿರಿಯರಿದ್ದಾರೆ...ನಾನಿನ್ನೂ ಸಣ್ಣವನು...
ಇನ್ನು ಕೆಲ ದಿನಗಳಲ್ಲಿ ಕಾಲೇಜಿನ ಕೆಲಸದಲ್ಲಿದ್ದು,ಎಪ್ಪತ್ತಕ್ಕೆ retire ಆಗಿ ಸಣ್ಣವರಿಗೆ ಜವಾಬ್ದಾರಿ ವಹಿಸಿಕೊಟ್ಟು
ಬೇಕೆಂದಷ್ಟಕ್ಕೇ ಆಯ್ಕೆ ಮಾಡಿಕೊಂಡು
ಇರುತ್ತೇನೆ...ಇನ್ನು ನಿನ್ನ ಮೊಮ್ಮಗನ
ಮದುವೆಯವರೆಗೂ ಅಂಥ ಪ್ರಮುಖ ಕಾರ್ಯಕ್ರಮಗಳೂ ಇಲ್ಲ-" ಸದಾ ಇವೇ ಮಾತನಾಡುತ್ತಿದ್ದೆ ನೀನು-ಅಂದೂ ಅದನ್ನೇ ಮಾತನಾಡಿ ಮುಗಿಸಿ ಪೇಟೆಯ ಕಡೆ ಹೋಗಿ ಬರುತ್ತೇನೆ-ಎಂದು ಹೋದವನು- ನೀನು...

ಬರಲೇ ಇಲ್ಲ...

               ಇನ್ನೂ ಕಾಯುತ್ತಿದ್ದೇವೆ...' ಚಿಟ್ಟೀ ನ ಕೋಯಿ ಸಂದೇಶ...ಜಾನೇ‌ ಓ ಕೌನ್ ಸಾ ದೇಶ...ತುಮ್ ಚಲೇಗಯೇ'-
ಈ ಹಾಡು ಎಲ್ಲೇ/ ಯಾವಾಗಲೇ ಕೇಳಲಿ
ನೆನಪಾಗುತ್ತೀಯಾ ಸುಧಿ ನೀನು ನನಗೆ...
ನನ್ನ ನಂತರದ ಒಬ್ಬನೇ ತಮ್ಮ ನೀನು...
ಕೂಡಿಯೇ ಧಾರವಾಡಕ್ಕೆ ಬಂದೆವು. ಅಲ್ಲಿಯೇ ಬಹಳ ವರ್ಷಗಳ ವರೆಗೆ ಇಬ್ಬರೂ ಇದ್ದುದರಿಂದ ಹತ್ತಿರವಾದೆವು... ನನ್ನ ಕಷ್ಟದ ದಿನಗಳಲ್ಲಿ ಕೇವಲ ಒಂದು ಫೋನ್ call ಅಂತರದಲ್ಲಿದ್ದು ನನ್ನನ್ನು
ಕಾಪಿಟ್ಟವನು ಸದಾ...ನೀನು ಇರುವ ವರೆಗೂ ಧಾರವಾಡಕ್ಕೆ ಬಂದಾಗ ಎಷ್ಟು ನಿಶ್ಚಿಂತಳಾಗಿ ಇರುತ್ತಿದ್ದೆ ನನಗೆ ಮಾತ್ರ ಗೊತ್ತು...

       ಇಂದಿಗೂ ಒಂದೊಂದು ದಿನ ಏಕೋ
ತುಂಬ ನೆನಪಾಗಿ ನನ್ನನ್ನು ಕಾಡುತ್ತೀಯಾ-
ಸುಧಿ...ಫೋನಿನಲ್ಲಿ ಮಾತನಾಡಬೇಕು/ಏನನ್ನೋ ಹಂಚಿಕೊಳ್ಳಬೇಕು ಎಂಬ  ಒತ್ತಡ ಉಂಟಾಗುತ್ತದೆ...ಆ ದಿನವೆಲ್ಲ ನಿನ್ನದೇ  ಹೆಸರಲ್ಲಿ ಕಳೆಯುತ್ತದೆ...

      ‌‌‌       ಖಾಲಿ ಇದ್ದೆ- ನೀನಿದ್ದಿದ್ದರೆ ಎಂದೆನಿಸಿ ಇಷ್ಟೆಲ್ಲ ನೆನಪಾಯ್ತು ಸುಧಿ..


Wednesday, 23 September 2026

೧)ಸ್ವಾಮಿರಾಚಾರ್ಯ ಕೌಲಗಿ....

ಕೃಷ್ಣಾಬಾಯಿ...

೨) ಬಾಳಾಚಾರ್ಯ ಕೌಲಗಿ...

ಎಂಕೂಬಾಯಿ

೩) ನಾರಾಯಣಾಚಾರ್ಯ ಕೌಲಗಿ...

ರಮಾಬಾಯಿ...

೪) ವೆಂಕಟೇಶಾಚಾರ್ಯ ಕೌಲಗಿ...

ಪದ್ಮಾಬಾಯಿ.

Friday, 31 July 2026

Nagamma Maid...

Nagamma Maid-- Money matters...

july---( June Salary)-3000/-

August- (July salary)...3000/-/- July)

September-(August)...3000./-

October---( September) 3000/-

November- took full money.
(1500+3000) No cut this month...

Chetana Maid money matters...

Chetana maid ---Money matters.

June---5000/- in Julu.

July--- 5000/-in August.

August--5000/-in September.

September- 5000/-October...

October- 5000/- October-29-10-26.

Monday, 6 April 2026

Dr ,Raju' s prescriptions...

Raju' s prescription...

Morning - 18 units

Start at 4 units and increase until fasting reaches 100-110

Food constitent 
160-180

1 to 1.5 chapati
Sarina battla anna
jolada muddi


Gastroantologist
Haemoglobin

Thursday, 27 November 2025

pension certificate copy...

Pension certificate copy

Thank you for successfully submitting your digital life certificate. Your Pramaan id is 8447230304. You may view life certificate online at https://jeevanpramaan.gov.in/v1.0/ppouser/login. Your Digital life certificate shall be processed by your pension Disbursing Agency for release of pension. NICSI

Thank you for successfully submitting your digital life certificate. Your Pramaan id is 8447230304. You may view life certificate online at https://jeevanpramaan.gov.in/v1.0/ppouser/login. Your Digital life certificate shall be processed by your pension Disbursing Agency for release of pension. NICSI

Sunday, 16 November 2025

cough allergy treatment...

Josh Raju... Medical

Tab. Abiways/ Pulmoclear N 1-0-1

Syp. Brozodex S/F 5ml thrice a day after food 

Tab. Allegra M 0-0-1

All after food 
For 5 Days

Friday, 19 July 2024

Kundali of all from Koulagi

Ravi : Kanya Rashi/Hasta Nakshatra..
 
Vaiju : Kanya Rashi/ Chitta 

Tejas : Makara Rashi :
Uttarashada Nakshatra:

 Tanmay : Vrishick Rashi and Jeshta

Monday, 25 December 2023

M Y MEDICAL KIT...

 A.
Emergency medicines...

*Tofisopam( toficalm)-50 mg.
30. (Relaxation+ anxiety free)

*Pantodac DSR 1-0-0 ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ.(Acute Acidity...)

*Cough syrup -Ascoril SF .
( Allergy cough)

*Ketorol- DT- 10 mg (toothache.)

B.
Regular prescription medicines

*1) Glycomet SR - 500 mg.- 60.
SUGAR PILLS.

2) Mixtard 30- penfills-INSULIN
A box - set of Five.

3) Telma AM - 40/5.( B.P. tablets)

4) Rozavel- 10 mg.( Blood thinner).

6) Mouth wash-Dentin 91.
7) METROHEX- Gum- gel...
8) Stolin- (Astringent...Gum Lotion)

9) Thyronorm-75 mg.( Thyroid).

10) Neurobion Forte.( General
Prescription for Nerves.).

11) sterile Lancets.

12) Blood testing strips.

13) ಹೊಟ್ಟೆಯುಬ್ಬರ- ಗ್ಯಾಸ್...

Tab. Sompraz 40 mg 1-0-1 (empty stomach)

Cap. Ganaton 50 mg 1-1-1 (before food)

Syp. Mucaine Gel 10 ml thrice a day before food 

All for 3 days

14 - 
COld-- cough- Allergies... ( Raju)

Tab. Abiways/ Pulmoclear N 1-0-1
Syp. Brozodex S/F 5ml thrice a day after food 

Tab. Allegra M 0-0-1

All after food 
For 5 Days

For leg pain..
Tolfen P    one strip 10 tablets

Sunday, 20 November 2022

ಪ್ರೀತಿ ಅಂದರೆ...

ಒಂದು 
ಮೃದು ಮಧುರ ಕಾಳಜಿ ,
ಎದೆಗೂಡಿನಲ್ಲಡಗಿದ
ಸುಪ್ತ ಸಹಾನುಭೂತಿ,
ಪ್ರತಿನಿಮಿಷ, ಪ್ರತಿಗಳಿಗೆ, 
ಪ್ರತಿಕ್ಷಣದ ಅನುಭೂತಿ...

ಎರಡು ಹೃದಯಗಳ
ದೈವಾಲಿಂಗನ...
ಕೈಯ ಬಿಸುಪು,
ಬಿಸಿ-ಬಾಹುಬಂಧನ...

ಎರಡು ಬುದ್ಧಿ /ಹೃದಯ/ 
ಆತ್ಮಗಳ ಭಾವ ವಿನಿಮಯ...
ಸದಾ ಇರುವ,ಮೊಳೆವ, 
ಚಿಗುರುವ ಬೀಜ ತಳಿ..
ಈ ಭುಮಿಯನ್ನೇ ಸಗ್ಗವಾಗಿಸುವ 
ಇಬ್ಬರು ಸಂತೃಪ್ತ  ಜೀವಿಗಳಿಗೆ
ಆ ಭಗವಂತನಿತ್ತ 
ಅಮೃತ ಸದೃಶ ಬಳುವಳಿ...

ಮೂಲ:Patricia Waiter...

Saturday, 19 November 2022

ಜಯಶ್ರೀ ದೇಶಪಾಂಡೆಯವರ ಮುನ್ನುಡಿ...

*ಭಾವವೆಂಬ ಹೂವು ಅರಳಿ*

ಕವಿತೆ ಎಂದರೆ ಹೃದಯದ ಆತ್ಮನಿವೇದನೆ. ಭಾವನೆಗಳ ಉಸಿರಾಟ!
ವಿಶ್ವಾದ್ಯಂತದ ಹೃದಯಗಳು ಮಿಡಿದು ಹೊರಹೊಮ್ಮಿಸಿದ ಭಾವನೆಗಳು ಪದ್ಯವಾಗಿ ತೆರೆದುಕೊಂಡಾಗ ಅದು ಬಿಡಿಸುವ ಅಸಂಖ್ಯ ಚಿತ್ರಗಳನ್ನು ನಮ್ಮ ಭಾಷೆಯಲ್ಲಿಟ್ಟು ಅಲಂಕರಿಸಿ ನಮ್ಮೆದುರು ತಂದು ಹರವಿದ್ದಾರೆ ಶ್ರೀಮತಿ ಕೃಷ್ಣಾ ಕೌಲಗಿ. 
"ಕವಿತೆ ಕಣ್ಣಿಗೆ ಬಿದ್ದೊಡನೆ ನನ್ನ  ಮನಸ್ಸಿನಲ್ಲಿ ಅದರ ರೂಪಾಂತರದ ಚಲನೆಯೊಂದು ಆರಂಭವಾಗಿಬಿಡುತ್ತಿತ್ತು.auto translate ಆಗಿಬಿಡುವ ಥರದಲ್ಲಿ. ಇನ್ನೊಬ್ಬರ ಲೇಖನಿಯ ಸಾಲುಗಳು ನನ್ನ ಬಳಿ ಬಂದು ನಿಂತಂತೆ  ಅನಿಸುತ್ತಿತ್ತು'' ಎನ್ನುವ ಈ ಪುಸ್ತಕದ ಲೇಖಕಿ ತಮ್ಮ ಅನುವಾದ/ಪುನರ್ರೂಪಣದ ಬಹಳಷ್ಟು ಕವಿತೆಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. 

"ನಮ್ಮ ದಾರಿಗೆ ಇರಲಿ 
ನಿಮ್ಮ ಟಾರ್ಚಿನ ಬೆಳಕು,
ಸರಿರಾತ್ರಿಗಿರುವಂತೆ ಚಂದ್ರಗಿಂಡಿಯ ತುಳುಕು"
         ಎಂದು ಕವಿ  ಗೋಪಾಲಕೃಷ್ಣ ಅಡಿಗರು ಉದ್ಗರಿಸಿದ್ದನ್ನು ಇಲ್ಲಿ ನೆನಪಿಸಿಕೊಂಡರೆ ಇಲ್ಲಿರುವ ಐವತ್ತು ಆಂಗ್ಲ ಕವಿತೆಗಳನ್ನು ಕೃಷ್ಣಾ ಅವರು ಇಂಗ್ಲಿಷ್ ನಿಂದ  ಕನ್ನಡಕ್ಕೆ ತಂದಿರುವುದು ಅವರ 'ಚಂದ್ರಗಿಂಡಿಯ ತುಳುಕಿ'ನಂಥ  ಮರುನಿರ್ಮಿತ ಕವನಗಳ ಬೆಳಕಿನ ಸ್ವರೂಪದಲ್ಲಿ! 

ಅನುವಾದ ಅಥವಾ ಭಾಷಾಂತರಕ್ಕಿರುವ ಮಿತಿಗಳು‌ trans creation ಅಥವಾ ಪುನರ್ರಚನೆಯಲ್ಲಿ ಅಷ್ಟಾಗಿ ಕಡ್ಡಾಯವಾಗಲಾರದು ಎನ್ನಬಹುದು.‌ ಮೂಲಪದಗಳಿಗಿರುವ ಹಲವು  ಅರ್ಥವ್ಯತ್ಯಾಸವನ್ನು ಇಲ್ಲಿ ತಮ್ಮ ರೂಪಾಂತರಣಕ್ಕೆ ಬೇಕಿರುವ ವಿನ್ಯಾಸದಲ್ಲಿ ಬಳಸಿದ್ದಾರೆ. 

ಇಲ್ಲಿನ ಐವತ್ತೂ ಕವನಗಳು ಹೊಮ್ಮಿಸುವ ಅರ್ಥ, ಭಾವ, ಲಯ, ಕಾಲಮಾನ, ಸಂವೇದನೆಗಳೆಲ್ಲ ಬೇರೆ ಬೇರೆ ಸ್ತರಗಳಿಂದ, ವ್ಯಕ್ತಿಗಳಿಂದ ಬಂದಿವೆ.
'ಅಸ್ಮಿತೆ' -ಬದುಕಿನ ನಿರೀಕ್ಷೆಗಳು , (ಸ್ಟೆಫಾನೀ ಬೆನೆಟ್ ಹೆನ್ರಿ)
 'ಪ್ರೀತಿ' ಯಾನೆ ಅನುಭಾವ,(ಗಾರ್ನೆಟ್ ಮಾತ್ಸೆರ) 
'ಮುಖಾಮುಖಿ'- ಜೀವಭಾವಗಳ ದ್ವಂದ್ವ, 'ಮಿಲನ'-(ಖಲೀಲ್ ಗಿಬ್ರಾನ್) 'ಬದುಕೆಂದರೆ'- ತೃಪ್ತಿಯಿಂದ ತುಂಬಿರುವ ಕೊನೆಗಳಿಗೆ(ರಾಲ್ಫ್ ರಾಡೋ ಎಮರ್ಸನ್)
'ಅಂತರ್ಮುಖಿ'- ಎರಿನ್ ಹ್ಯಾನ್ಸನ್. ಇವರೆಲ್ಲರ ಹಾಗೂ ಇನ್ನೂ ಅನೇಕರ ಭಾವಪ್ರಧಾನತೆಯ ಸಾಲುಗಳಿಗೆ ಕನ್ನಡದ ರೇಷ್ಮೆ ಹೊದಿಸಿದ್ದಾರೆ.
ಅಲ್ಲದೆ ರೊಮ್ಯಾಂಟಿಕ್ ಕವಿ ಎಂದು ಜನಜನಿತನಾಗಿದ್ದ ಲಾರ್ಡ್ ಬೈರನ್ನನ 'ಶೀ ವಾಕ್ಸ್ ಇನ್ ಬ್ಯೂಟಿ' ಕವಿತೆಯನ್ನು  ಬೆಳದಿಂಗಳ ಬಾಲೆಯಾಗಿಸಿ ಕಾವ್ಯದ ರಮಣೀಯತೆಗೆ ಹೊಳಪಿತ್ತಿದ್ದಾರೆ. 

ಐವತ್ತು ವಿಭಿನ್ನ ಕವಿತೆಗಳ ವೈವಿಧ್ಯಮಯ ರೂಪಗಳನ್ನು ಹೀಗೆ ಅವುಗಳದ್ದೇ ಇನ್ನೊಂದು ಸ್ವರೂಪಕ್ಕೆ ಮಾರ್ಪಡಿಸುವುದು ಒಂದು ಸಾಹಿತ್ಯಿಕ ಸಾಹಸವೇ ಹೌದು. 
ಇದನ್ನು ಮಾಡಿ ತೋರಿಸಿದ್ದಾರೆ ಕೃಷ್ಣಾ ಕೌಲಗಿ.
-ಜಯಶ್ರೀ ದೇಶಪಾಂಡೆ

Wednesday, 16 November 2022


ಬದುಕಿನಲ್ಲಿ,
ನೀನು ನಿರೀಕ್ಷಿಸುವಷ್ಟು
ನಿನ್ನನ್ನು ಯಾರೂ ಪ್ರೀತಿಸಲಾರರು...
ನಿನ್ನ ಒಳಗನ್ನು ತಾವಾಗೇ ಅರಿತು
ನಿನಗೆ ಬೇಕಾದಾಗ ಗಗನಕ್ಕೆ ನೆಗೆದು,  ನಕ್ಷತ್ರಗಳ ಹೆಕ್ಕಿ ತಂದು
ಕೈ-ಯಲ್ಲಿಡಲಾರರು...

ನೀ ಕಳೆದುಕೊಂಡ ಪಾದರಕ್ಷೆಯೊಂದ
ಹಿಡಿದು ಕುದುರೆ ಏರಿ
ನಿನ್ನ ಬಾಗಿಲಿಗಾವ 
ರಾಜಕುಮಾರನೂ ಬರುವನೆಂದು 
ನಿರೀಕ್ಷಿಸಬೇಡ...

ತಿಳಿದು ಕೋ...

ಅದಕ್ಕೆಂದೇ
ನಿನ್ನನ್ನು ನೀನು
ಅಗಾಧವಾಗಿ ಪ್ರೀತಿಸು...
ಸುದೈವದಿಂದ ಬದುಕಿನಲ್ಲಿ ಹೆಚ್ಚೇನಾದರೂ 
ಪ್ರೀತಿ ದಕ್ಕಿದ್ದೇ ಆದರೆ , 
ಅದು ನಿನ್ನ -
ಸುಂದರ ಕಿರೀಟಕ್ಕೆ
ಮತ್ತೊಂದು ಗರಿಯಷ್ಟೇ-
ಎಂದು ಭಾವಿಸು...

Tuesday, 15 November 2022

ಪ್ರೀತಿ -

ಅಂದರೇನು?
ಅದೊಂದು ಅನುಭವವಾ? ಅನುಭಾವವಾ?

ಬದುಕಿನ ಭಾಗವಾ?
ಕೊಡು- ಕೊಳ್ಳುವಿಕೆಗೆ,-
ನೋವು-ನಲಿವಿಗೆ,-
ನೆನಪು- ನಿಂದನೆಗೆ,-

ಮೃದುವಾ? ಕಠೋರವಾ?
ಧ್ವನಿಯ ಏರಿಳಿತಗಳಂತೆ-
ಬಿಸುಪಾ? ತಂಪು- ತಂಪಾ?
ಮಳೆ ಧರೆಗಿಳಿದಂತೆ...

ನಾವು ಹೆಣೆದಿಟ್ಟ ಸಿಹಿ ನೆನಪುಗಳಾ?
ನಿನ್ನ  ಮೋಹಕ ಮುಗುಳ್ನಗೆಯಂತೆ..

ನಾನೇನೇ ನಾನಂದುಕೊಂಡರೂ
ಅದು ಬೆರಳು ತೋರಿಸುವದು
ನಿನ್ನ ಕಡೆಗೇನೇ...

ಏಕೆಂದರೆ,

ನಾನು ಕಂಡದ್ದು ನಿನ್ನನ್ನೇ...ನಿನ್ನೊಬ್ಬಳನ್ನೇ
ನದಿಯಂತೆ ಹರಿಯುವ,
ಮಳೆಯಂತೆ ಸುರಿಯುವ,
ಸರ್ವ ನೋವು ನಿವಾರಕಿಯಾದ ನಿನ್ನನ್ನೇ...ಆ ಕಾರಣಕ್ಕೇ
ನೀನು, 
ನೀನು ಮಾತ್ರ ನನ್ನವಳು...

Monday, 14 November 2022

ಬೇಕಾಗಿದೆ ಒಂದು ಹಳೆಯ ಮಾಡೆಲ್...

ಕಂಡೊಡನೆ ತೊಡೆಯೇರುವ,
ಇಳಿಸಿದರೆ ಕಾಲ್ಗಳನಪ್ಪಿ ನಿಲ್ಲುವ,
'ಬೇಡ'- ಎಂದರೆ ಬಿಡದೇ ಕಾಡುವ
ಮಗುವೊಂದು ಬೇಕಾಗಿದೆ...

ಮಣ್ಣಿನಲಿ ಆಡುವ, ಬೀದಿಯಲಿ ಓಡುವ, ಕಣ್ಣರಳಿಸಿ ನೋಡುವ,
ಕನಸಿನಲೂ ಕಾಡುವ 
ಮಗುವೊಂದು ಬೇಕಿದೆ...

ಅಜ್ಜಿಯ ಕಥೆ ಕೇಳುವ, ಅಪ್ಪನ
ಹೆಗಲೇರುವ, ಸದಾ. ಅಮ್ಮನ ಸೆರೆಗೆಳೆಯುವ ಮಗುವೊಂದು
ಬೇಕಾಗಿದೆ...

ಕಂಡಲ್ಲಿ ಮರವೇರಿ
ಕಸುಗಾಯಿ ಕಚ್ಚಿ ಹಂಚಿಕೊಳ್ಳುವ, ಮಳೆಯಲ್ಲಿ ತಾ ನೆಂದರೂ
ಗೆಳೆಯನಿಗೆ ಕೊಡೆ ಹಿಡಿವ ಮಗುವೊಂದು ಬೇಕಾಗಿದೆ...

ಮುಗ್ಧತೆಯೇ ಮಗುವಾಗಿ 
ದಗ್ಧಮನಕೆ ತಂಪೆರೆದು, 
ಸ್ನಿಗ್ಧ ಮನವರಳಿಸುವಂಥ
ಮಗುವೊಂದು ಬೇಕಾಗಿದೆ...

ಬಾಲ್ಯ ಹರಯವಾಗದ,
ಹರಯ ಮುಪ್ಪೆನಿಸದ,
ಬೆಳೆದ ಮೇಲೂ ಮಗು ಮನದ
ಮಗುವೊಂದು ಬೇಕಾಗಿದೆ...








Friday, 11 November 2022

ಅಂತರ್ಮುಖಿ...

ಗಾಳಿಯಲ್ಲಿ ತೇಲುವ 
ತರಗೆಲೆಯಂತೆ,
ನಾನು ಜನರ ಬದುಕಿನಿಂದ
ಒಳ- ಹೊರಗೆ ಆಗುತ್ತಲೇ ಇರುತ್ತೇನೆ,
ಹಲವುಬಾರಿ ಯಾರಿಗೂ
ಅರಿವಾಗದಂತೆ...
ಬಂಧ ಬಿಗಿಯಾಗುವ
ಮತ್ತೆ ಅದನು ಕಳೆದುಕೊಳ್ಳುವ  ನಿರಂತರ ಭಯ ನನಗೆ...
ಯಾರೊಂದಿಗೂ ಸ್ಪರ್ಧೆಗಿಳಿಯುವ
ಮನಸ್ಸಲ್ಲ ನನ್ನದು,
ಯಾವುದೇ ವಿಶೇಷ
ಗಮನ ನನ್ನ 'ಕಣ್ಣು ಕುಕ್ಕಿ'ಸುತ್ತದೆ...
ಯಾವಾಗಲೂ ಒಂದು 
ಮುಗುಳ್ನಗೆಯ ಮುಸುಕಿನಲ್ಲಿ
ಒಂದು ಪಕ್ಕಕ್ಕೆ ಸರಿದು 
ನನ್ನ ಪಾಡಿಗೆ ನಾನಿರುವದೇ
ನನ್ನ ಆಯ್ಕೆ.
ದಟ್ಟ ಸಂದಣಿಯಲ್ಲೂ
ಯಾರಿಗೂ ತಿಳಿಯದಂತೆ 
ನಾನೇ 'ನಾನಾಗಿರಬಲ್ಲೆ'-
ನಾ ಬಂದು ಹೋದದ್ದೇ
ಲೆಕ್ಕಕ್ಕಿಲ್ಲದಂತೆ...
ನಾನು ಹೋದದ್ದೂ ಯಾರನ್ನೂ ಕಿಂಚಿತ್ತೂ ಬಾಧಿಸದಂತೆ...
ಹೋದಮೇಲೂ
ಯಾರೊಬ್ಬರೂ ನೆನೆಸದಂತೆ,
ಒಂದೆರಡು ದಿನಗಳಲ್ಲೇ
ನೆನಪಿನಂಗಳದಿಂದ
ಜಾರಿ ಬಿಡುವಂತೆ...

ಒಳಗು... ವೃದ್ಧ್ಯಾಪ್ಯ- ಅಂದರೆ 'ಮರು ಬಾಲ್ಯ'- ಅಂತ ಕೇಳಿದ್ದೆ/ನೋಡಿದ್ದೆ/ನಕ್ಕಿದ್ದೆ.ಈಗ ಅನುಭವಿಸುತ್ತಿದ್ದೇನೆ...ಓದಬೇಕು- ನನ್ನಣ್ಣ  ಆಗುವುದಿಲ್ಲ.ಬರೆಯಬೇಕು...