Tuesday, 16 April 2019

ಹಾಗೇ ಸುಮ್ಮನೇ...

ಹಾಗೇ ಸುಮ್ಮನೇ...

"ಆಗದು ಎಂದು ಕೈ ಕಟ್ಟಿ ಕುಳಿತರೆ..."

       ‌‌‌          I.B.S ಎಂಬ ಪಚನಕ್ರಿಯೆಗೆ ಸಂಬಂಧಿಸಿದ  ಒಂದು ಆರೋಗ್ಯದ ತಕರಾರಿದೆ..Irritatable Bowel
syndrome_ ಅದರ ಪೂರ್ಣ ಹೆಸರು...ಒಂದು ಪ್ರಮಾಣದ ಕೆಲ ನಿರ್ದಿಷ್ಟ ವಿಶಿಷ್ಟ ಆಹಾರಗಳನ್ನು ಹೊರತು ಪಡಿಸಿ ಉಳಿದವುಗಳನ್ನು ಹೊಟ್ಟೆ ಮಾನ್ಯ ಮಾಡುವದಿಲ್ಲ...ಅದು ಅತಿ ಗಂಭೀರ ತಕರಾರೇನೂ ಅಲ್ಲ...gas form ಮಾಡುವ,ಹೆಚ್ಚು ಮಸಾಲೆಯಿರುವ, ಹೆಚ್ಚು ಪ್ರೊಟೀನ್ಯುಕ್ತ ಕಾಳುಗಳ,ಕರಿದ ಪದಾರ್ಥಗಳನ್ನು ಅದು ಒಪ್ಪಿಕೊಳ್ಳುವದಿಲ್ಲ...ಅದನ್ನು ಅಲಕ್ಷಿಸುವ,ಅಮಾನ್ಯ ಮಾಡುವ ಪ್ರಮೇಯವೇಯಿಲ್ಲ...ಹಾಗೇನಾದರೂ ಮಾಡಿದಿರೋ ಎರಡೇ ದಿನಗಳಲ್ಲಿ ಮಂಡೆಯೂರಿಸಿ ಕಿವಿ ಹಿಡಿಸಿ ಬಿಡುತ್ತದೆ..ಮುಂದೆ ಅದನ್ನು ಎಚ್ಚರತಪ್ಪಿಯೂ ಮರೆಯುವ ಹಾಗೇಯಿಲ್ಲ....
                           ನನಗೂ ಎರಡುತಿಂಗಳುಗಳಿಂದ I.B.S problem....but B stands for  BRAIN...not BOWEL...
ಅತಿ ಹೆಚ್ಚು  ಸಾರವಿದ್ದು strong ,ಗಂಭೀರ ವಿಷಯಗಳುಳ್ಳ ಲೇಖನಗಳು ತಲೆಯೊಳಗೆ ಹೋಗಲು stike ಮಾಡುತ್ತಿವೆ..ಒತ್ತಾಯಿಸಿದರೆ ತಲೆ ನೋವು ಶುರುವಾಗುತ್ತದೆ....ಇಲ್ಲವೇ ಕಣ್ಣುಗಳು ಓದುತ್ತವೆ...ಬುದ್ಧಿ ಗ್ರಹಿಸುವದೇಯಿಲ್ಲ....ಇಂಥ ಆಗ್ರಹದೋದು ಖುಶಿ ತರುವದೇಯಿಲ್ಲ...ಕಿರಿಕಿರಿ ಎನಿಸುತ್ತದೆ...ಓದಬೇಕೆಂದು ಖರೀದಿಸಿದ ಪುಸ್ತಕರಾಶಿ ದಿನಾಲೂ  ಅಣಕಿಸುತ್ತದೆ..." ನಿನ್ನ ಯೋಗ್ಯತೆ ಗೊತ್ತಾಯಿತೇ" ಎಂದು ಛೇಡಿಸತೊಡಗುತ್ತವೆ....ತಲೆದಿಂಬಿನ ಹತ್ತಿರದ ಪುಸ್ತಕ ಒತ್ತತೊಡಗುತ್ತದೆ...ಇದು ತಾತ್ಕಾಲಿಕ ಎಂದುಕೊಂಡು ಸಮಾಧಾನ ಮಾಡಿಕೊಳ್ಳುತ್ತಿದ್ದೇನೆ...ದಿನಕ್ಕೊಂದು ಪುಸ್ತಕ ಜಿದ್ದಿಗೆ ಬಿದ್ದು ಓದಿದವಳು ನಾನು...ಈಗೀಗ ಒಂದು ವಾರವಾದರೂ ಅರ್ಧ ಮುಗಿಯುವದಿಲ್ಲ...
                          ‌ಒಂದು ಕಣ್ಣು ದೋಷಯುಕ್ತವಾಗಿದ್ದು ಒಂದೇ ಕಣ್ಣಿನ ಮೇಲಿನ pressure  ದಿಂದ ಹಾಗಾಗಿರಬಹುದು ಎಂದುಕೊಂಡರೂ ನನ್ನ ಅತಿ ಮೆಚ್ಚಿನ ಹವ್ಯಾಸ ನನಗೆ ಕೈಕೊಡುತ್ತಿರುವದು ಸಹಿಸಲಾಗುತ್ತಿಲ್ಲ..
ಮಧುಮೇಹ,ಏರುತ್ತಿರುವ ವಯಸ್ಸು added woes....ಆದರೆ ಅಷ್ಟು ಸುಲಭವಾಗಿ ಸೋಲೊಪ್ಪಿಕೊಳ್ಳುವದಾದರೂ ಹೇಗೇ?? ಒಪ್ಪಿಕೊಂಡದ್ದೇ ಆದರೆ ವೇಳೆ ಕಳೆಯುವದಾದರೂ ಹೇಗೆ? ಬೆಂಗಳೂರಿನಲ್ಲಿ ಹೀಗೆ ಕಾಲಾಡಿಸಿಕೊಂಡು ,ಕೆಲವರಿಗೆ Hi, Bye  ಹೇಳಿ ಅರ್ಧಗಂಟೆ ಕಳೆಯುವ ಮಾರ್ಗಗಳಿಲ್ಲ...ಪಕ್ಕದವರದೇ ಒಂದೊಂದು ವಾರ ಕಳೆದರೂ ಮುಖ ದರ್ಶನವಾಗುವ ಮಾತಿಲ್ಲ...ಎಲ್ಲ ಸುದ್ದಿಗಳೂ ಗುಂಪಿನ WhatsApp ಮೂಲಕ....ಮನೆಯಲ್ಲಿ ನನ್ನಂತೆ ಒಂದು extra ಆಳು ಲಭ್ಯವಿದ್ದರೆ ಆಗಾಗ ಫೋನ್ ಮಾಡಬಹುದಾದ ಮಹತ್ ಅವಕಾಶ ಸಿಗುವದುಂಟು...ಹೀಗಾಗಿ ಬಹಳಷ್ಟು ಜನ TV ಮೊರೆಹೋಗುತ್ತಾರೆ...ನನಗದು ತೀವ್ರ ಅಲರ್ಜಿ...ಕಥೆಯ ಗುಂಗು ಹಿಡಿಸಿಕೊಂಡು,ನೋಡಲು ಸಿಗದಾಗ ಏನೋ ಕಳೆದುಕೊಂಡಂತೆ  ವ್ಯಥೆ ಹಚ್ಚಿಕೊಂಡು ವರ್ಷಗಟ್ಟಲೇ ಮರುಗುವ ಜಾಯಮಾನ ನನ್ನದಲ್ಲ...ಹೀಗಾಗಿ ಆ ದಾರಿಯೂ ನನಗೆ ಬಂದ್...
My never failing friends are they...
With whom I converse day by day...
         _ ಎಂಬಂತೆ  ಓದೇ ನನ್ನ all time favourite ಆಗಿದ್ದು, ಆ ಹವ್ಯಾಸ  ಈಗ ನನ್ನ ಚಾಳಿ ಠೂ ಬಿಡಲು ಹೊಂಚು ಹಾಕುತ್ತಿದೆ....ಅಷ್ಟು ಸುಲಭವಾಗಿ ಕೈ ಚಲ್ಲಲು ಪುಸ್ತಕಗಳೇನು ಚುನಾವಣೆಯ ರಾಜಕೀಯ ವಿದ್ಯಮಾನಗಳನ್ನೊಳಗೊಂಡ ಕಲಸು ಮೇಲೋಗರದ ಪತ್ರಿಕೆಗಳೇ??...
       ‌‌‌        ಕೆಲಕಾಲ ನನ್ನನ್ನು ಸೋಲಿಸಿದ  ಭ್ರಮೆಯ  ಸುಖವನ್ನು ಮನಸ್ಸು ಅನುಭವಿಸಲಿ...ನಾನೂ ನೋಡುತ್ತೇನೆ...ಎಷ್ಟು ದಿನ ಹೂಂಕರಿಸೀತು ಈ IBS_ Irritatable  Brain Syndrome...( ಮೆದುಳಿನ ಆಲಸ್ಯ ರೋಗ)...ಹ..ಹ..ಹ.

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...