ಉಣ್ಣುವದೂ ಒಂದು ಕಲೆ...
" ಅಡಿಗೆ ಮಾಡುವದು ಒಂದು ಕಲೆ"_ ಇದನ್ನು ಸಾಕಷ್ಟು ಸಲ ಕೇಳಿ ಆಗಿದೆ...ಆದರೆ ನನ್ನ ಮಟ್ಟಿಗೆ ಉಣ್ಣುವದು ಅದನ್ನೂ ಮೀರಿದ ಕಲೆ...ಅಡಿಗೆ ಮಾಡುವವರಿಗೆ ಪರ್ಯಾಯವಿದೆ..ನಮ್ಮೂಟವನ್ನು ಬೇರೆಯವರು ಮಾಡಲಾಗದು.ಅದು ನಮ್ಮದೇ ಕೆಲಸ...ಅಂದಮೇಲೆ ಅದರ ಬಗ್ಗೆ ತಿಳಿದು ಕೊಂಡಷ್ಟೂ ಕಡಿಮೆಯೇ..
ತಟ್ಟೆಯಲ್ಲಿ ಪ್ರತಿಯೊಂದು ವ್ಯಂಜನಕ್ಕೂ ನಿರ್ದೇಶಿತ ಸ್ಥಾನಗಳಿರುತ್ತವೆ..ಗಡಿಯಾರದ ಹತ್ತು ಹೊಡೆದಾಗ ಇರುವ ಮುಳ್ಳಗಳ ಸ್ಥಾನದಲ್ಲಿ ಉಪ್ಪು, ನಂತರ ಉಪ್ಪಿನಕಾಯಿ/ ಚಟ್ನಿ/ ಕೋಸಂಬರಿ/ ಪಲ್ಯಗಳು/ ರಸಗಳು/ ಕೆಳಗೆ ಬಲಗಡೆಗೆ ಪಾಯಸ,ಅದರೆಡಭಾಗಕ್ಕೆ ಅಂದರೆ ಎಲೆಯ ಮಧ್ಯದಲ್ಲಿ ಅನ್ನ,ಅದರ ಎಡಭಾಗಕ್ಕೆ ಅಂದರೆ ಎಡತುದಿಯಲ್ಲಿ ಹಪ್ಪಳ/ ಸಂಡಿಗೆ/ ಚಿತ್ರಾನ್ನ ಉಳಿದವು..ಪದಾರ್ಥದ ಸ್ಥಾನಗಳೂ ಆಯಾ ಪದಾರ್ಥಗಳ ಉಪಯೋಗದ frequency ಆಧರಿತ..ಅನ್ನ ,ರೊಟ್ಟಿ ಚಪಾತಿಗಳು main course ನಲ್ಲಿ ಬರುವದರಿಂದ ಅವು ಕೈಗೆಟಕುವಂತೆ ಮಧ್ಯ ಭಾಗಕ್ಕೆ...ಅದಕ್ಕಾಗಿಯೇ ಪಾಕಶಾಸ್ತ್ರಕ್ಕೆ ಅಷ್ಟೊಂದು ಮಹತ್ವ...
ನಾವು ಚಿಕ್ಕವರಿದ್ದಾಗ ನಮ್ಮ ಊಟ,ಅದರ ವೇಳೆ,ವೇಗಮಿತಿ,ಆಹಾರದ ಆಯ್ಕೆಯ ಮೇಲೆ ಹಿರಿಯರ ಪೂರ್ತಿ ನಿಯಂತ್ರಣವಿರುತ್ತಿತ್ತು...ಯಾವಾಗ ಕೂಡಬೇಕು,ಏಳಬೇಕು,ಹೇಗೆ ಉಣ್ಣಬೇಕು ಇದಕ್ಕೆಲ್ಲ ನಿರ್ದೇಶಕರೊಬ್ಬರು ಇರುತ್ತಿದ್ದರು..." ಅನ್ನ ಚಲ್ಲಬ್ಯಾಡ...ಚಲ್ಲಿದ್ರ ನಿನ್ ತಲೀಗೆ ಹಾಕಿ ಕಟ್ತೇನಿ" ಎಂದು ಬರುವ ಗುಟುರಿಗೆ ಮಕ್ಕಳ ಚಡ್ಡಿ ಹಸಿಯಾಗುತ್ತಿತ್ತು..ದಾರಿಯಲ್ಲಿ ಚಲ್ಲಿದ ಧಾನ್ಯಗಳು ಕಂಡರೆ ನಾಲ್ಕಾದರೂ ತೆಗೆದುಕೊಂಡು ಕಣ್ಣಿಗೆ ಒತ್ತಿಕೊಳ್ಳುವ ಪರಿಪಾಠವಿತ್ತು..
ಇಂದಿಗೂ ಊಟದ ವಿಷಯಕ್ಕೆ ಹತ್ತಾರು ನಿಬಂಧನೆಗಳನ್ನು ಆರೋಗ್ಯ ಶಾಸ್ತ ಹೇಳುತ್ತದೆ..
_ ಸರಿಯಾಗಿ ಹಸಿದಿರಲೇಬೇಕು
_ ಊಟಕ್ಕೆ ಮೊದಲು ಕೈಕಾಲು ತೊಳೆಯಲೇ ಬೇಕು
_ ಉಣ್ಣುವಾಗ TV, Mobile ಗಳ ಬಳಕೆ ಸರ್ವಥಾ ಕೂಡದು
_ ಊಟದ ಮಧ್ಯ ಎದ್ದು ಅಡ್ಡಾಡುವ ಹಾಗಿಲ್ಲ..
_ ಊಟಕ್ಕೆ ಮೊದಲು ಜಗಳ,ವಾದ_ ವಿವಾದ,ಸಿಟ್ಟು ಸೆಡವು ಬಿಲ್ಕುಲ್ ಸಲ್ಲದು...
_ ಊಟಕ್ಕೆ ಮೊದಲು ಮನಸ್ಸು ಉಲ್ಲಸಿತವಾಗಿರಬೇಕು
_ ಪ್ರತಿ ಪದಾರ್ಥವನ್ನೂ ಚನ್ನಾಗಿ ನುರಿಸಿ,ಆಸ್ವಾದಿಸಿ ,ಹಾಸ್ಯ,ನಗೆಗಳ ಮಧ್ಯ ಸೇವಿಸಿದರೆ ಅರ್ಧ ಪಚನವಾದಂತೆಯೇ..
_ ಆರೋಗ್ಯ ಸಮಸ್ಯೆ ಹೊರತು ಪಡಿಸಿ ,ಒಂದೇ ರುಚಿಗೆ ಅಂಟಿಕೊಳ್ಳದೇ ಎಲ್ಲ ಪದಾರ್ಥಗಳ ರುಚಿಯನ್ನೂ ಸವಿಯಬೇಕು..ಅದಕ್ಕಾಗಿಯೇ ಕಹಿ,ಒಗರುಗಳೂ ಸಹ ' ನವರಸ' ಗಳಲ್ಲಿ ಸ್ಥಾನ ಪಡೆದಿವೆ..
_ ಊಟದ ಜಾಗದಲ್ಲಿ ಸಾಕಷ್ಟು ಗಾಳಿ ಬೆಳಕುಗಳಿರಬೇಕು..
_ ಆದಷ್ಟೂ ಇತರರೊಂದಿಗೆ ಹಂಚಿಕೊಂಡು ಆಹಾರ ವ್ಯರ್ಥವಾಗದಂತೆ ಸಮತೋಲನದ ಊಟ ಮಾಡಿದಾಗ ಆರೋಗ್ಯ ಸಮಸ್ಯೆಗಳು ಕಡಿಮೆ...
ಒಮ್ಮೆ ನಾವೇ ಚನ್ನಾಗಿ ಅವಲೋಕಿಸಿಕೊಂಡರೆ ನಾವು ಮೇಲಿನ ಯಾವುದರ ಮೇಲೂ ಗಮನ ಕೊಡದಿದ್ದುದನ್ನು ಸ್ಪಷ್ಟವಾಗಿ ಕಾಣಬಹುದು..ತರಾತುರಿಯ ಊಟ,ಅಸಮತೋಲನದ ಊಟ, ವೇಳೆ ಸಿಕ್ಕಾಗ,ಎಲ್ಲಿ ಸಿಗುತ್ತೋ ಅಲ್ಲಿಯ ಅಂದರೆ ಹೊರಗಿನ ಊಟ, ಇವೆಲ್ಲವುಗಳಿಂದಾಗಿ ಇಂದಿನ ಪೀಳಿಗೆಯ ಆರೋಗ್ಯ ಕೆಟ್ಟು ದುಡಿದದ್ದರ ಬಹುಭಾಗ ಆರೋಗ್ಯಸರಿಪಡಿಕೊಳ್ಳಲೆಂದೆ ಖರ್ಚಾಗುತ್ತದೆ..
"ಎಲ್ಲವೂ ಇದ್ದೂ ಏನೂ ಇಲ್ಲದ ದಾರಿದ್ರ್ಯ ಎಂದರೆ ಇದೇ ಇರಬಹುದಲ್ಲವೇ???
Saturday, 20 April 2019
ಹಾಗೇ ಸುಮ್ಮನೇ
Subscribe to:
Post Comments (Atom)
Manoj Hanchinamani...
1) 12.07.2025 ಶನಿವಾರದಂದು ಧರ್ಮೋದಕ ಬೆಳಿಗ್ಗೆ 10.30 ಸ್ಥಳ ಜನಾರ್ಧನ್ ಸೇವಾ ಸಮಿತಿ, ಹೊಸಾಯಲ್ಲಾಪುರ ಊಟ ವ್ಯವಸ್ಥೆ ಹಲಗಣೇಶ್ ವಿದ್ಯಾಪೀಠ, ವಿದ್ಯಾಗಿರಿ 2) 14.7.202...
-
'ಹಬ್ಬ'ಗಳೇ 'ಹುಟ್ಟಿದ ದಿನ' ಗಳಾಗುತ್ತಿದ್ದ 'ಕಾಲಮಾನ' ನಮ್ಮದು... ಒಮ್ಮೆ ಒಬ್ಬ ಹಿರಿಯ ಸಾಧಕರಿಗೆ ನೂರು ತುಂಬಿದ ಸಂದರ್ಭದಲ್ಲಿ ...
-
ನಮ್ಮ ಊರು ರಟ್ಟೀಹಳ್ಳಿ. ಇನ್ನೊಬ್ಬ ಅಜ್ಜಿಯ ಊರು ಸರ್ವಜ್ಞನ ಮಾಸೂರು.ಎರಡರ ನಡುವೆ ಕೇವಲ ಐದು ಮೈಲುಗಳಷ್ಟು ಅಂತರ.ಆದರೂ ಒಂದೋ/ಎರಡೋ ಯಾವುದೋ ಊರಿಗೆ ಹೋಗುವ ...
-
ಮೊದಲಿನ ಹತ್ತು ವರ್ಷಗಳು ಅಮ್ಮಾ ಅಪ್ಪನ ಎಂಟು ಜನ ಮಕ್ಕಳಲ್ಲಿ ಒಬ್ಬಳಾಗಿ... ನಂತರದ ಹತ್ತು ವರ್ಷಗಳು ಓರಗೆಯ ಸಖಿಯರನ್ನು ಸೇರಿಕೊಂಡು... ಆಮೇಲಿನ ಹತ್ತು ವರ್ಷಗಳು ಧಾರವಾಡದ...
No comments:
Post a Comment