ಹನಿಗಳು_೨
೬)
ದೀರ್ಘ ಬೇಸಿಗೆ ರಜೆ ಕಳೆದು ಪುನಃ ಶಾಲೆ ಪ್ರಾರಂಭವಾಗುವದಿತ್ತು..ಆ ಪುಟ್ಟ ಹುಡುಗಿಗೆ ಇನ್ನಿಲ್ಲದ ಹಿಗ್ಗೋ ಹಿಗ್ಗು...ಈಗ ಅವಳು ಶಾಲೆಯ ಹೊರಗೆ ನಿಂತು
ಪುನಃ ಅದೂ ಇದೂ ಮಾರಿ ಮನೆ ಮಂದಿಯ ಹೊಟ್ಟೆ ಅಷ್ಟಿಷ್ಟಾದರೂ ತುಂಬಿಸ ಬಹುದಾಗಿತ್ತು..
೭)
ಅವಳೋ ಒಬ್ಬ ಸುಪ್ರಸಿದ್ಧ ಹಾಗೂ ಅತಿ ಶಿಸ್ತಿನ ಕಲಾವಿದೆ...ನೇರವಾದ ಚಂದದೊಂದು ಗೆರೆ ಎಳೆಯಲೂ ಬರುವದಿಲ್ಲ ಎಂದು ತನ್ನ ಆರು ವರ್ಷದ
ಮಗನಿಗೆ ದಿನಾಲೂ ಬಯ್ಯುತ್ತಿದ್ದಳು..ಇಂದು I C U ದ ventilator ನ ಸಹಾಯದಿಂದ ಉಸಿರಾಡುತ್ತಿರುವ ಅವನಿಗೆ ಇದೊಂದೇ ಸಲ ECG ಯಲ್ಲಿ ಮಾತ್ರ ಸರಳ ರೇಖೆ ಬೇಡ ,ವಕ್ರರೇಖೆ ಮೂಡಿಸು ಎಂದು ಒಂದೇ ಸವನೆ ಪ್ರಾರ್ಥಿಸುತ್ತಿದ್ದಳು..
೮)
ಎಲ್ಲರೂ ಪ್ರವಾಹದೊಂದಿಗೇನೆ ಈಸಲು ಬಯಸುತ್ತಾರೆ..
ಅದರ ವಿರುದ್ಧ ಈಸುವದೂ ಒಂದು ಸಾಹಸ ಎಂಬುದನ್ನು ,traffic inspector ಗೆ ತಿಳಿಸ ಬೇಕು ಅಂತಿದ್ದ ಹಾಗೇ ಅವನು ನನಗೆ ದಂಡ ಹಾಕಿಯೇಬಿಟ್ಟ..
೯)
"ಇನ್ನು ಮುಂದೆ ನನ್ನೆಲ್ಲ ಚಂದದ ಆಟಿಕೆಗಳೂ ನಿನಗೇ "
ಸಾಯುವ ಮೊದಲು ಅಣ್ಣ ಬರೆದಿಟ್ಟ ಪತ್ರದ ಸಾಲುಗಳು ಅವಳಿಗೆ ಖುಶಿ ಕೊಡಲೇಯಿಲ್ಲ.
೧೦)
ಅವರು ಅವಳ ಅಪ್ಪನ ಮೇಲೆ ಹೊದಿಸಿದ
ಭಾರತದ ಧ್ವಜವನ್ನಷ್ಟೇ ಮರಳಿಕೊಟ್ಟು ಅಪ್ಪನನ್ನು
ಕೊಂಡೊಯ್ದರು...
( ಇಂಗ್ಲಿಷ ಹನಿಗತೆಗಳ ಕನ್ನಡ ಅನುವಾದ_ ಶ್ರೀಮತಿ, ಕೃಷ್ಣಾ ಕೌಲಗಿ)
No comments:
Post a Comment