ಇದ್ದದ್ದು ಹದಿನೆಂಟು ವರ್ಷಗಳು ಮಾತ್ರ...ಅದು ಅಮ್ಮ ಅಪ್ಪನ ಮನೆಯಾಗಿತ್ತು. ಹತ್ತೊಂಬತ್ತಕ್ಕೆ ಓದಲು ಬಂದಾಗಿನಿಂದ ಅಣ್ಣನ ಮನೆಯೇ ನನ್ನ
ಮನೆಯಾಯಿತು...ಮದುವೆಯಾದ ನಂತರ ಧಾರವಾಡವೇ ಅತ್ತೆಮನೆಯಾದ
ಕಾರಣ ತವರು ನೆನೆದಾಗ ನನ್ನದಾಗುತ್ತಿತ್ತು
ಮನೆಗಳು ಕಾಲಾಂತರದಲ್ಲಿ ಬದಲಾಗುತ್ತ
ಹೋದರೂ ಅದರೊಳಗಿನ ಮನಸ್ಸುಗಳು
ಬದಲಾಗಲಿಲ್ಲ... ಅದೇ ಪ್ರೀತಿ, ಅದೇರೀತಿ
ಆ ಕಾರಣಕ್ಕೆ ನಮ್ಮ ಇತ್ತೀಚಿನ ಹೊಸ 'ತೊಟ್ಟಿಮನೆ'- ಅಂದರೆ ನಮ್ಮ ಮೈಯಲ್ಲಾ ರೋಮಾಂಚನ...
No comments:
Post a Comment