Tuesday, 16 June 2026

     ಮುಪ್ಪು ಬಂದಿದೆ- ಸಡನ್ ಆಗಿ ಅಲ್ಲ.
ನನಗೆ ಹೇಳಿ, ಹಂತಹಂತವಾಗಿಯೇ ಬಂದಿದೆ...ಕಣ್ಣು/ಕಾಲು/ಕಿವಿಗಳಿಂದ ಹಿಡಿದು ಕೈ- ಗಳ ವರೆಗೂ ಪರಿಣಾಮವಾ ಗಿದೆ...ನನ್ನ ತಕರಾರೂ ಇಲ್ಲ...ಒಂದೇ
ಸಮಸ್ಯೆ- ನನ್ನ ದೇಹದ ಸಮಸ್ಯೆಯನ್ನು
ಮನಸ್ಸಿಗೆ ಮುಟ್ಟಿಸುವುದು...
           Fb ಯಲ್ಲಿ ಏನು ಕಂಡರೂ ಇನ್ನೂ
ಹೋಗಬೇಕು ಅನಿಸುತ್ತದೆ.ಆದರೆ ದೇಹಕ್ಕೆ ತನ್ನದೇ ವ್ಯಸನಗಳು...ಬೇರೆ ಸಹಾಯವಿಲ್ಲದೇ ಅದು ಸಾಧ್ಯವಿಲ್ಲ.
ಸದಾ ಪರ್ಯಾಯ ವ್ಯವಸ್ಥೆ ಪರಿಹಾರವ ಲ್ಲ- ಹೀಗಾಗಿ ನಾನೀಗ online ಪ್ರೇಕ್ಷಕಿ...
   ‌‌‌ ‌   ‌  ‌‌‌    ಜಯಲಕ್ಷ್ಮಿ ನನ್ನ ಮೊದಲ ಪುಸ್ತಕದ ಬಿಡುಗಡೆಯ ಸಮಾರಂಭದ
ವೇಳೆಯಲ್ಲಿ ತ(ನ)ಮ್ಮ ಅಂತಃಪುರದ
ಸಹ ಸದಸ್ಯರೊಡಗೂಡಿ ತಮ್ಮದೇ ಎನ್ನುವಷ್ಟು ಸಂಭ್ರಮದಿಂದ ಮಾಡಿ
ನನ್ನನ್ನು ಸದಾ ಆಭಾರಿಯಾಗಿಸಿದ್ದಾರೆ.
ನಾಳೆ ರವಿವಾರ ಅವರ ಪುಸ್ತಕದ ಬಿಡುಗಡೆ ಇದೆ...ನಾನು ಹೋಗಲು ಹತ್ತು
ಹಲವು ಅಡ್ಡಿ.ಅವರಿಗೆ ಒಂದು note ಏನೋ ಬರೆದೆ...ಆದರೆ ನನ್ನ ಚಡಪಡಿಕೆ
ನಿಂತಿಲ್ಲ...ಇದು ನನ್ನ ಮೊದಲ ಕ್ಷಮಾ- ಬೇಡಿಕೆಯ note- ಇನ್ನು ಬಹುಶಃ ಇದೇ ಕಾಯಂ...


          ‌‌   

No comments:

Post a Comment

     ಮುಪ್ಪು ಬಂದಿದೆ- ಸಡನ್ ಆಗಿ ಅಲ್ಲ. ನನಗೆ ಹೇಳಿ, ಹಂತಹಂತವಾಗಿಯೇ ಬಂದಿದೆ...ಕಣ್ಣು/ಕಾಲು/ಕಿವಿಗಳಿಂದ ಹಿಡಿದು ಕೈ- ಗಳ ವರೆಗೂ ಪರಿಣಾಮವಾ ಗಿದೆ...ನನ್ನ ತಕರಾರೂ ಇಲ್...