Wednesday, 29 July 2026

      ದೊಡ್ಡವಳಾದ ಮೇಲೇ 'ನೀನು 
ಏನಾಗುತ್ತೀಯಾ? ಎಂಬ ಪ್ರಶ್ನೆಗೆ ಜೋರು ದನಿಯಲ್ಲಿ 'ಟೀಚರ್'- ಅಂದಿದ್ದೆ.ಹದಿ ಹರಯದ ಅರೆ ತಿಳುವಳಿಕೆಯಲ್ಲಿ ಕೋಲು ಹಿಡಿದು, ಏರುದನಿಯಲ್ಲಿ  ಮಕ್ಕಳನ್ನು ಅಂಕೆಯಲ್ಲಿಟ್ಟುಕೊಂಡು/
ಹೇಳಿದಂತೆ ಮಾಡುವ ತಾಕತ್ತು ಅವರೊಬ್ಬರಿಗೇನೇ ಇರೋದು-- ಎಂಬುದೊಂದು ಭಾವವಿತ್ತೇನೋ!!ಕಲಿಯುವುದು ಮುಗಿದಾಗ ನೌಕರಿ ಸಿಕ್ಕರೆ ಒಂದು ಕೈ ನೋಡಬಹುದು ಅನಿಸಿತ್ತು... ಆದರೆ ಅದಕ್ಕೂ ಮೊದಲೇ 'ಗಂಡ' ಸಿಕ್ಕರು...ಗಾಡಿಯ ಹಳಿಯೇ ಬೇರೆಯಾಯ್ತು...ಹತ್ತು ವರ್ಷಗಳಲ್ಲಿ ಮೂರು ಮಕ್ಕಳಾಗಿ ಅವರ ಮಟ್ಟಿಗೂ ಟೀಚರ್ ಆಗಲು ಸಾಧ್ಯವಿಲ್ಲ ಎನ್ನುವಷ್ಟು ವ್ಯಸ್ತಳಾದಾಗ ನಾನು ಏನಂದುಕೊಂಡಿದ್ದೆ-
ಅನ್ನುವುದೇ ಮರೆತುಹೋಯ್ತು...

          ಆದರೆ ನನ್ನ ದೈವಕ್ಕೆ ಅದು ಮರೆ
ತಿರಲಿಲ್ಲ... ನನ್ನವರಿಗೆ heart attack ಆಗಿ ಆರೋಗ್ಯ ನಾಜೂಕಾದಾಗ ಅವರೇ
ಮಕ್ಕಳನ್ನು ನೋಡಿಕೊಂಡು ಒಂದು ವರ್ಷ ಕುಮಠಾಕ್ಕೆ ಕಳಿಸಿ,BEd ಮಾಡಿಕೊಂಡು ಬಂದಮೇಲೆ ನನ್ನನ್ನು
ಟೀಚರ್ ಮಾಡಿಯೇ ಬಿಟ್ಟರು...

          ಇಂದು ಬೆಳಿಗ್ಗೆ ' ಗುರುಪೂರ್ಣಿಮಾ
ನಿಮಿತ್ತ ಬರತೊಡಗಿದ  ಶುಭಾಶಯಗಳ ನ್ನು ನೋಡಿದಾಗ/ನಾನು ಕಲಿಸಿದ ಮಕ್ಕಳು ನನ್ನ ಮೇಲಿಟ್ಟ ಪ್ರೀತಿಯನ್ನು
ನೆನೆದು ಮನಸ್ಸು ಆರ್ದ್ರವಾಯ್ತು...
ಎಲ್ಲ ವೃತ್ತಿಗಿಂತಲೂ ಉತ್ತಮ ಟೀಚರ್
ವೃತ್ತಿ- ಎಂಬ ನನ್ನ ಬಾಲ್ಯದ ಅನಿಸಿಕೆ
ಮತ್ತಷ್ಟು ಗಟ್ಟಿಯಾಯ್ತು...ಏಕೆಂದರೆ
ನನ್ನ ವೃತ್ತಿ ಜೀವನದಲ್ಲಿ ನಾನು ಇತರರಿಗೆ ಕಲಿಸಿದ್ದಕ್ಕಿಂತ ನಾನು ಮಕ್ಕಳಿಂದ/ ಇನ್ನಿತರ ಸಹೋದ್ಯೋಗಿ ಶಿಕ್ಷಕರಿಂದ
ಕಲಿತದ್ದೇ ಹೆಚ್ಚು...ಅವರೆಲ್ಲರಿಗೂ 
"ಗುರುಪೂರ್ಣಿಮಾ"- ದ ಹಾರ್ದಿಕ
ಶುಭಾಶಯಗಳು...





    ‌‌‌‌        

No comments:

Post a Comment

1946-64 ನೇ ಇಸವಿಯ ಮಧ್ಯೆ ಹುಟ್ಟಿದವರು Baby Boomers. ಒಬ್ಬರಿಗೆ೮-೧೦ ಮಕ್ಕಳು ಸಾಮಾನ್ಯ. ೧೯೬೫-೧೯೮೦ - ಜನರೇಷನ್ x . ಕುಟುಂಬ ಯೋಜನೆ ಶುರು ಆದಾಗ ಸಣ್ಣ ಕುಟುಂಬದಲ್ಲಿ...