Wednesday, 16 May 2018

ಕಾಕತಾಳೀಯ - ಹಾಗೇ ಸುಮ್ಮನೆ...


ಒಂದು ಸುಂದರ ಕಾಕತಾಳೀಯ...ಅದೂ ತುಂಬಾ ತುಂಬಾನೇ cuuuute..
ಹೋದವಾರ ಮೈಸೂರಿನ ಮಗಳ ಮನೆಗೆ ಹೋಗಿ ವಾರವಿದ್ದು ಬಂದೆ ತಾನೇ...ನಾನು ಎಲ್ಲಿ ಹೋಗುವದಿದ್ದರೂ ಮೊದಲು ಕೆಲದಿನ ಖರೀದಿಸಬೇಕಿದ್ದ ವಸ್ತುಗಳ ಖರೀದಿಯನ್ನು ಮುದ್ದಾಂ ಮುಂದೂಡಿ ಹೋಗುವ ಊರಿನಲ್ಲಿ ಕೊಂಡುಕೊಳ್ಳುವ ಪರಿಪಾಠ.ಊರಿಂದ ಬಂದಾಗ, "ಏನು ತಂದಿರಿ?" ಗೆ ಒಂದು ಸಿದ್ಧ ಉತ್ತರ ಬೇಕೆಂಬುದು ಮೊದಲನೇಯದು....ಎರಡನೇದಾಗಿ ಸಹಜ ಆಕರ್ಷಣೆ..ಬೇರೆ ಊರಿನದು..
             ಇದು ಗೊತ್ತಿದ್ದ ನನ್ನ ಮಗಳ ಮೊದಲ ಪ್ರಶ್ನೆ, " shopping ಯಾವಾಗ?" ಎಂಬ ಭಾವ ....ಶುಭ ಕಾರ್ಯಕೆಲಿಯೆ ದೇರ್ ಕೈಸೀ?"ಎಂದು ಆದಷ್ಟೂ ಬೇಗ ಮುಗಿಸುವದು ಎಂದಂದು ಹೊರಟೇ ಬಿಡುವದು ನನ್ನ ಸ್ವಭಾವ..
‌‌              ಮೈಸೂರಿಗೆ ಹೋದ ಮರುದಿನವೇ Big Bazaar ಗೆ ಹೋಗಿ ಎರಡು bedsheets ಖರೀದಿಸಿದೆ.ಅವು pack ನಲ್ಲಿ ಇರುತ್ತವೆ.pack ಮೇಲಿನ ಚಿತ್ರ ನೋಡಿ ಆರಿಸಬೇಕು..ಮೊದಲೇ ಬಿಚ್ಚಿ ನೋಡಲು ಅಂಗಡಿಯವರು ಒಪ್ಪಲಿಲ್ಲ.ಬಿಳಿಯ background ಇರುವ, simple ಅನಿಸುವ ಎರಡು ಜೊತೆ ಆರಿಸಿ ತಂದಾಯಿತು..ಇಂದು ಹಾಕೋಣ ಎಂದು ಬಿಚ್ಚಿದರೆ ಅದು baby bed sheet...ಅದರ ತುಂಬೆಲ್ಲ mirror, comb,hairpin, bobby pin ಚಿತ್ರಗಳು ಹಾಗೂ ಶಬ್ದಗಳು...ನನ್ನ ಕೊನೆಯ ಮೊಮ್ಮಗ ಸಹ ಹತ್ತು ವರ್ಷ ಮೀರಿದ್ದಾನೆ...ಬೇಸರ ವಾದದ್ದು ಒಂದೇ ಒಂದು ಕ್ಷಣ...ನಂತರ ಮುಖದ ಮೇಲೆ ಮುಗುಳ್ನಗೆ ಅರಳಿತು...ಬಾಲ್ಯವಂತೂ ಮರಳಿ ಬರುವ chanceಏ ಇಲ್ಲ...ಬಾಲ್ಯದ ನೆನಪುಗಳನ್ನು ತಾಜಾ ಆಗಿಸಲೇನು ಅಡ್ಡಿ? ಹೇಗೂ ಮುಪ್ಪು ಎರಡನೇ ಬಾಲ್ಯವಂತೆ..ನಾವು ಅದನ್ನು  ಮರೆಯಬಾರದು..ನಮ್ಮೊಳಗೊಂದು ಮಗುವನ್ನು ಸದಾ ಸಾಕಿಕೊಂಡಿರಬೇಕು ಎಂದು ಹೇಳುವದಕ್ಕೆ ನನ್ನ ಅನುಮೋದನೆಯಿದೆ..ಯಾರು ಏನೇಅನ್ನಲಿ  ಹುಡುಗಾಟ ನನಗೆ ಮೆಚ್ಚಿಗೇನೆ...ಅದು ನಮ್ಮನ್ನು ಸಕ್ರಿಯವಾಗಿಡುವದಲ್ಲದೇ ಧನಾತ್ಮಕ ಚಿಂತನೆಗೆ ಹಚ್ಚುತ್ತದೆ..ಅದನ್ನು ನೆನಪಿಸಲೆಂದೇ ಈ ಘಟನೆ ನಡೆದಿರಬೇಕು ಎಂದು ಕ್ಷಣಕಾಲ ಅಂದುಕೊಂಡೆ..ಅದೇ ಬೆಡ್ ಸೀಟ್ ಹಾಸಿ ಮಲಗಿ ಕಣ್ಣುಮುಚ್ಚಿದೆ..ಏನೋ ನಿರಾಳ..ನನಗೀಗ ೭೩ ವರ್ಷಗಳಲ್ಲ....೭_೩  ನಾಲ್ಕೇ ವರ್ಷ...
  ‌              ಹೆದರಬೇಡಿ....ಹೆಬ್ಬೆರಳು ಚೀಪುವಷ್ಟು ಸಣ್ಣ ಮಗುವೇನೂ ಆಗಿಲ್ಲ...ಹಾ..ಹಾ..ಹಾ.

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...