ಅಮ್ಮ...ಅಮ್ಮ...,ಅಮ್ಮ..ಅವಳ ಬಗ್ಗೆನೇ ಮಾತು..ಅವಳಫೋಟೋ,ಅವಳ ಬಗ್ಗೆ write up, ಕವನ,ಕಿರುಚಿತ್ರಗಳು,ವೀಡಿಯೋಗಳು,ಚಿಕ್ಕ ಪುಟ್ಟ ಘಟನೆಗಳು,ನಮನಗಳು.ಓದಿ,ಓದಿ, ಓದಿ ಮುಗಿಯುವ ಹೊತ್ತಿಗೆ ಏನು ಬರೆಯಬೇಕೆಂದು ಚಿಂತಿಸುತ್ತಿದ್ದ ನನಗೆ ಕೊನೆಗೆ ಏನೊಂದೂ ಬರೆಯದೇ ಕಣ್ಣುಮುಚ್ಚಿ ಅವಳ ಬಗ್ಗೆ ಎಷ್ಟು,ಏನು, ನೆನಪಿದೆಯೋ ಅದರಲ್ಲಿ ಕಳೆದು ಹೋಗಬೇಕೆನಿಸಿಬಿಟ್ಟಿತು.ಅಲ್ಲಿ ನಾನು ಅವಳು ಇಬ್ಬರೇ...ನಮ್ಮ ಬಾಲ್ಯ,ಬಡತನ,ದುಃಖದ ಕ್ಷಣಗಳು,ಸುಖದ ಮುಗುಳ್ನಗೆ, ಕೊರತೆ,ತೃಪ್ತಿ,ಸಾಂತ್ವನ,ಹುಸಿಕೋಪ,ಅನಾರೋಗ್ಯ,ಅಸಹಾಯಕತೆ,ಎಲ್ಲವನ್ನೂ ಎದೆಯಾಳದಲ್ಲಿ ಹುದುಗಿಸಿಟ್ಟು ಮೇಲೆ ಮೇಲೆ ಶಾಂತಳಾಗಿಯೇ ಇದ್ದು ಒಂದುದಿನ ಇಲ್ಲವಾದ ನಮ್ಮಮ್ಮ ಮಾತ್ರ ನನಗೆ ಗೊತ್ತು....ಅವಳು ಕೊಟ್ಟ ಮುತ್ತು ನೆನಪಿಲ್ಲ..ಆದರೆ ತುತ್ತೆಂದೂ ಮರೆತವಳಲ್ಲ.ಕೈ ಹಿಡಿದು ಶಾಲೆಗೆ ಕಳಿಸಿಲ್ಲ..ಆದರೆ ಶಾಲೆಯಿಂದ ಬರುವದನ್ನು ಬಾಗಿಲಿನಲ್ಲಿ ನಿಂತು ಕಾಯುತ್ತಿದ್ದುದು ನೆನಪಿದೆ....ಕೈ ಹಿಡಿದು ಅಕ್ಷರ ತಿದ್ದಿಸಿಲ್ಲ...ಆದರೆ ಬದುಕೆಂಬ ವಿಶ್ವವಿದ್ಯಾಲಯವೇ ಆಗಿ ಬದುಕಿದವಳು...ಹಣಕ್ಕೂ ಆರಾಮ ,ನೆಮ್ಮದಿಗಳಿಗೂ ನೇರ ಸಂಬಂಧವಿಲ್ಲವೆಂಬುದಕ್ಕೆ ಸ್ವತಃ ದೃಷ್ಟಾಂತವಾದವಳು...ಕೈಯಲ್ಲಿ ದುಡ್ಡಿರುತ್ತಿರಲಿಲ್ಲವಾಗಿ ಬೇಕೆಂದದ್ದು ಕೊಡಿಸಲಾಗುತ್ತಿರಲಿಲ್ಲ..ಆದರೆ ಸಿಕ್ಕಿದ್ದರಲ್ಲಿ ಸಂತೋಷದಿಂದ ಇರುವದನ್ನುಕಲಿಸಿಕೊಟ್ಟವಳು..ಸ್ವತಃ ತಾನೇ ಕರಿಮಣಿಸರ, ಗಾಜಿನ ಬಳೆ ಬಿಟ್ಟು ಬೇರೆಯದು ಬೇಡಿದವಳೇ ಅಲ್ಲ....ಆಗ ಫೋಟೋದ ಕಾಲವಲ್ಲ.. ಅಲ್ಲಲ್ಲಿ ಎಲ್ಲೋ ಒಂದು ಇದ್ದುಳ್ಳವರ ಮನೆಯಲ್ಲಿ ಅಪರೂಪಕ್ಕೆ ಕಾಣುವ luxury ಯಾಗಿತ್ತು ಅದು...ಅದೂ 25- 30 ಜನರ group photo ರೂಪದಲ್ಲಿ..ಹೀಗಾಗಿ ಮನಃಪಟಲದಲ್ಲಿ ಅಚ್ಚೊತ್ತಿದ ಫೋಟೋಗಳೆ ಲಭ್ಯ.ಕಾಲ ಕಳೆದಂತೆ ಮಸುಕು ಮಸುಕು..ಅದೇ ಹಾದಿಯಲ್ಲಿಯೇ ಹೆಚ್ಚುಕಡಿಮೆ ಪಯಣಿಸಿ ಆಗಲ್ಲದಿದ್ದರೂ, ಈಗ ಅವಳ ನೋವು - ನಲಿವುಗಳನ್ನು ಅರ್ಥೈಸಿಕೊಳ್ಳಲು ಸಿಕ್ಕ ಒಂದು ದಿನವೇ ನನ್ನ ಮಾತೆಯರ ದಿನ...
Wednesday, 16 May 2018
Subscribe to:
Post Comments (Atom)
*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...
-
ಬಿಂಬ-೧ ಗೆಲುವು... ನನ್ನ ಮನಶ್ಯಾಸ್ತ್ರದ ಸಂಶೋಧನೆಯ ಭಾಗವಾಗಿ ನನ್ನ ಅಜ್ಜಿಯ ಸಂದರ್ಶನ ತೆಗೆದುಕೊಳ್ಳುತ್ತಿದ್ದೆ."ಯಶಸ್ಸು ಅಂದ್ರೆ ನಿನ್ನ ದೃಷ್ಟಿಯಲ್ಲಿ ಯಾವುದು...
-
ಮಗುವಿನ ಸ್ವಗತ ಏನು ಹೇಳಲಿ ನಿಮಗೆ ನನ್ನ ಮನಸಿನ ಪೇಚು..? ದೊಡ್ಡವರು ಎಂಬುವರು ಒಗಟು ನನಗೆ... ಮಾಡಬಾರದುದೆಲ್ಲ ಮರೆಯದೆ ಹೇಳುವರು.. ಮಾಡಬಾರದ್ದನ್ನೇ ಮಾಡುವರು ...
-
ಒಮ್ಮೆ ಒಬ್ಬ ಹಿರಿಯ ಸಾಧಕರನ್ನು ,ಅವರ ' ಶತಾಯುಷ್ಯದ' ಗುಟ್ಬಿನ ಬಗ್ಗೆ ಸಂದರ್ಶಕನೊಬ್ಬ ಪ್ರಶ್ನಿಸಿದಾಗ ಅವರು ಹೇಳಿದ್ದು," ಗುಟ್ಟೂ ಇಲ್ಲ, ಮಣ್ಣೂ ಇಲ್ಲ,...
No comments:
Post a Comment