Monday, 28 May 2018

ಪ್ರಶ್ನೆ

( ಮನೋಹರ ನಾಯಕರ ಇನ್ನೊಂದು ಸವಾಲು...Thank you Sir...)
ಎಲೆಯೊಂದು
ಮರದಿಂದ
ಉದುರಿಬಿತ್ತು....
ಇದರಲ್ಲಿ
ಅದಾರ
ಕೈವಾಡವಿತ್ತು..?
ಅದನ್ನು ಹಾರಿಸಿ
ನೆಲೆ ತಪ್ಪಿಸಿದ
ಗಾಳಿಯೇ?...
ಒಣಗಿದಾಕ್ಷಣ
ಕೈ ಬಿಟ್ಟು ಬಿಡುವ
ಮರದ ಚಾಳಿಯೇ?
ಟೊಂಗೆಗಂಟಿ
ನಿಲ್ಲಲಾಗದ ಎಲೆಯದೇ
ಸೋಗೇ?...
ಹೇಳುವದು ಹೇಗೆ?
ಬದುಕಿನಲ್ಲೂ
ಥೇಟ್ ಹಾಗೇ...
ನೂರೆಂಟು
ಅರ್ಥವಾಗದ
ಆಯಾಮಗಳು...
ಅಳಿಯದೆ ಉಳಿಯಲು..
ಉಳಿದು ಬೆಳೆಯಲು..
ಬೆಳೆದು ನಲಿಯಲು
ನೂರೆಂಟು
ವ್ಯಾಯಾಮಗಳು....

No comments:

Post a Comment

*Lovely poem* When wrinkles bloom and joints protest,   Don’t teach the world—just give it rest.   Even if you're right (and you often a...