ಎಂಬುದು .ಆಗ ನಾನಿನ್ನೂ ಎಂಟನೇ
ಕ್ಲಾಸು.'teacher' ಎಂಬುದು ನನ್ನ instant ಉತ್ತರವಾಗಿರುತ್ತಿತ್ತು. ಹಾಗೆಂದ ಮಾತ್ರಕ್ಕೆ ಅದು ನನ್ನ ಕನಸು/ ಮಹಾತ್ವಾಕಾಂಕ್ಷೆ/ ಜೀವನ ಧ್ಯೇಯ/ ಇಟ್ಟುಕೊಂಡ ಗುರಿ-ಇದಾವುದೂ ಆಗಿರಲಿಲ್ಲ.ಅಂಥ ಕನಸು ಕಾಣುವಷ್ಟು ತಿಳುವಳಿಕೆ, ಅರ್ಹತೆ, ಅನುಕೂಲ, ಸಾಮಾಜಿಕ ವಾತಾವರಣ ಯಾವುದೂ ಇಲ್ಲದ, (ಅದರಲ್ಲಿಯೂ ಮಹಿಳೆಯರಿಗೆ ವಿಶೇಷವಾಗಿ) ಕಾಲವಾಗಿರಲಿಲ್ಲ ಅದು. ಕೈಯಲ್ಲೊಂದು ಆರಿಂಚಿನ duster/ ಇಲ್ಲವೇ ಒಂದು ಫೂಟು ಉದ್ದದ ಬಡಿಗೆ ಹಿಡಿದು ಗತ್ತಿನಿಂದ ವರ್ಗ ಪ್ರವೇಶಿಸುತ್ತಲೇ," Good morning teacher,"- ಎಂದು ಸಾಮೂಹಿಕ ವಂದನೆ ಸ್ವೀಕರಿಸುತಿದ್ದ ಟೀಚರ್ ಎಲ್ಲರ All time hero, ಆಗ.ಗಡಸು ಮುಖ /ಕಣ್ಣಂಚಿನ ಸನ್ನೆಯೊಂದರಿಂದಲೇ ಐವತ್ತಕ್ಕೂ ಮಿಕ್ಕಿ ಮಕ್ಕಳನ್ನು ತಣ್ಣಗಾಗಿಸುವ Hitler power ಇದ್ದುದು ಅದೊಂದು ವ್ಯಕ್ತಿಗೆ ಮಾತ್ರ. ಬರೀ ತೋರು ಬೆರಳಿನ ಸಂಜ್ಞೆಗಳಿಂದ/ ಇಲ್ಲವೇ ಒಂದು ಹೂಂಕಾರ ಮಾತ್ರದಿಂದ ಮಕ್ಕಳನ್ನು ಕುಣಿಸುವ ಅವರ ಕಣ್ಣು ಕುಕ್ಕಿಸುವ ವೈಭವ/ ಗತ್ತು ಬಹುತೇಕ ನಮ್ಮೆಲ್ಲರ ಕಣ್ಣು/ ಮನಸ್ಸು ತುಂಬಿರಬೇಕು. ನಮ್ಮನ್ನೇ ಅವರ ಸ್ಥಾನದಲ್ಲಿ ಸುಮ್ಮನೇ ಕಲ್ಪಿಸಿಕೊಂಡು ಮನಸ್ಸಿನಲ್ಲಿಯೇ ಪುಕ್ಕಟೆ ಮಂಡಿಗೆ ತಿನ್ನುತ್ತಿದ್ದಿರಬೇಕು. ನನ್ನ ಉತ್ತರವೂ ಅದರದೇ ಒಂದು ಭಾಗವಾಗಿರಲೂ ಸಾಕು.
ದೊಡ್ಡವಳೂ ಆದೆ, ನನ್ನದು ಪದವಿಯೂ ಮುಗಿಯಿತು. ಮುಂದೆ
ಎಲ್ಲರಂತೆ ಮದುವೆಯಾದೆ. ಆರು ವರ್ಷಗಳಲ್ಲಿ ಮೂರು ಮಕ್ಕಳ ತಾಯಿಯಾದೆ.ಟೀಚರ್ ಆಗುವ ಮಾತು 'ಉಫ್ಫ್' ಆಗಿ ಗಾಳಿಯಲ್ಲಿ ತೇಲಿ ಹೋಗಿತ್ತು. ನಾನದನ್ನು ಮರೆತೇ ಬಿಟ್ಟಿದ್ದೆ, ಆದರೆ ನನ್ನ ದೈವ ಅದನ್ನು ನೆನಪಿಟ್ಟಿತ್ತು. ಮದುವೆಯಾಗಿ ಕೆಲವರ್ಷಗಳಲ್ಲೇ ನನ್ನವರಿಗೆ ಎರಡು ಬಾರಿ ಹೃದಯಾಘಾತವಾದಾಗ ಮಕ್ಕಳನ್ನು ಬಿಟ್ಟು ಕುಮಠಾದಲ್ಲಿ BEd ಮಾಡಿಕೊಂಡು ಬಂದೆ.ಬೇಗನೇ ನೌಕರಿ
ಸಿಕ್ಕು ಶಿಕ್ಷಕಿಯಾದೆ.ತಡವಾಗಿ ಸೇರಿದ್ದರಿಂದ ಕೇವಲ ಇಪ್ಪತ್ತೈದು ವರ್ಷಗಳ ( ೫೮) ನೌಕರಿಯಾದರೂ ನಾನು ಅದಕ್ಕೆ ಮಾಡಿದ ಉಪಕಾರ ಕ್ಕಿಂತ ಅದರ ಋಣವೇ ನನ್ನ ಮೇಲೆ ಬಹಳ.ಆಗ ಸಾಮೂಹಿಕ ಮಾಧ್ಯಮ ಗಳು ಅತಿಯಾಗಿ ಬಳಕೆಯಲ್ಲಿಲ್ಲದ ಕಾರಣ ಶಿಕ್ಷಕ + ವಿದ್ಯಾರ್ಥಿಗಳ ಬಂಧ ಬಿಗಿಯಾಗಿತ್ತು.ಪರಸ್ಪರ ಸಂವಹನಗಳು ಸಾಕಷ್ಟು ನಡೆಯುತ್ತಿದ್ದವು. ಒಬ್ಬರ ಮನೆಗೊಬ್ಬರು ಹೋಗಿಬರುವ ವಹಿವಾಟವೂ ಇತ್ತು.ಪಾಲಕರ ಸಕ್ರಿಯ
ಭಾಗವಹಿಸುವಿಕೆ ಇತ್ತು.ಅದೇ ಕಾರಣಕ್ಕೆ
ಇಂದಿಗೂ ನನ್ನ Face book ನಲ್ಲಿ ವಿದ್ಯಾರ್ಥಿ/ ವಿದ್ಯಾರ್ಥಿನಿಯರ ಹಾಗೂ ಅವರ ಪಾಲಕರ/ ನನ್ನ ಸಹ ಶಿಕ್ಷಕ- ಶಿಕ್ಷಕಿಯರ ಪಾಲುದಾರಿಕೆಯೇ ಹೆಚ್ಚು. ಯಾವುದೇ ಹೊಸ ಪರಿಚಯವಾಗಲಿ- ಪ್ರತಿ ನಮಸ್ಕಾರವೂ ಕೇಶವನನ್ನೇ ಹೋಗಿ ತಲುಪುವಂತೆ- ಪ್ರತಿ ನದಿಗೂ ಸಾಗರವೇ ಅಂತಿಮ ಗುರಿಯಾದಂತೆ- ಇಂದಿಗೂ ಶಿಕ್ಷಕಿಯಾದಸಂಬಂಧಕ್ಕೇನೇ ಹೋಗಿ ಸೇರಿಕೊಳ್ಳುತ್ತದೆ. ಅದೂ ಒಂದು ಬೋನಸ್ ಸಂಭ್ರಮ ನನಗೆ.
ನನ್ನ ಎಪ್ಪತೈದನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನನ್ನ ಲೇಖನಗಳದೊಂದು ಪುಸ್ತಕ ಪ್ರಕಟಿಸಿ ಅದರಿಂದ ಬಂದ ಆದಾಯವನ್ನೆಲ್ಲ ಒಂದು ಸಾರ್ವಜನಿಕ ಉದ್ದೇಶಕ್ಕೆ ಎಂದು ಘೋಷಿಸಿದಾಗ ನನಗೆ ಸಿಕ್ಕ
ನನ್ನ ವಿದ್ಯಾರ್ಥಿಗಳ ಬೆಂಬಲ ಕನಸಿನಲ್ಲೂ ಊಹಿಸಲಾಗದ್ದು. ಪ್ರತಿಗಳು ಕೈ ಸೇರಿ ಬಿಡುಗಡೆಯ ತಾರೀಕು ಪ್ರಕಟವಾಗುತ್ತಲೇ ವಿಕಾಸ ಜೋಶಿ/ಪ್ರಶಾಂತ ಪಡಗಾನೂರ/ ಭಾರ್ಗವಿ ಪುರೋಹಿತ/ ಶ್ರೀದೇವಿ ಜಾಧವ ಮುಂತಾದವರ ನೇತ್ರತ್ವದಲ್ಲಿ 1994/95 ರ ಸಾಲಿನ Splash -95 ದ ಕೆಲವು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಒಂದು ಗುಂಪು ಮಾಡಿಕೊಂಡು ನನ್ನ ಬೆಂಬಲಕ್ಕೆ ನಿಂತು ಮಾಡಿದ ಉಪಕಾರ
ಈ ಜನ್ಮದಲ್ಲಿ ಮುಗಿಯುವಂಥದ್ದಲ್ಲ.
ಅವರ ಸಹಾಯ/ ಸಹಕಾರವಿಲ್ಲದಿದ್ದರೆ
ನಾನಂದುಕೊಂಡದ್ದೇನೂ ಖಂಡಿತ ಆಗುತ್ತಿರಲಿಲ್ಲ.ಅವರನ್ನು ನೆನೆಯದ
ದಿನಗಳಿಲ್ಲ ಇಂದಿಗೂ...ಈ ಗಳಿಗೆಗೂ...
ಇಂದು ಶಿಕ್ಷಕರ ದಿನಾಚರಣೆ. ವಿದ್ಯಾರ್ಥಿಗಳು ಗುರುಗಳನ್ನು ,ಗುರುಗಳು ತಮ್ಮ ವಿದ್ಯಾರ್ಥಿಗಳನ್ನು ನೆನೆಯುವ ದಿನ.ಅದಕ್ಕೆ ಶಾಲೆಯಲ್ಲಿ ಕಲಿಸಿದವರೇ ಆಗಬೇಕಿಲ್ಲ. ಶಿಕ್ಷಕರಿಂದ/
ಅಷ್ಟೇ ಏಕೆ ವಿದ್ಯಾರ್ಥಿಗಳಿಂದ/ ಸಮಾಜದಿಂದ ಕಲಿತ ಮೌಲ್ಯಗಳನ್ನು ಸಾಮಾಜಿಕವಾಗಿ ತಿರುಗಿ ಒಪ್ಪಿಸುವದೂ
ಒಂದು ಕಲಿಕೆಯೇ...ಒಂದು ಅನುಪಮ ಕಾರ್ಯವೇ...ನನ್ನ ಅಂಥ ಎಷ್ಟೋ ನೆನಕೆಗಳನ್ನು ನನ್ನ ಎರಡೂ ಪುಸ್ತಕಗಳಲ್ಲಿ ಅಲ್ಲಲ್ಲಿ ದಾಖಲಿಸಿದ್ದೇನೆ. ಅಷ್ಟಿಲ್ಲದೇ ಅನ್ನುತ್ತಾರೆಯೇ,- " ಸವಿ ನೆನಪುಗಳು ಬೇಕು... ಸವಿಯಲೀ ಬದುಕು"-ಎಂದು. ಆ ಭಾಗ್ಯವನುಂಡ ನಾನು ಶಿಕ್ಷಕಿಯಾದ ಉದ್ದೇಶ ಸಾರ್ಥಕವಾದ ಇಂಥ ಗಳಿಗೆಗಳಿಗೆ ಜೀವನಪರ್ಯಂತ ಋಣಿ, ಆಭಾರಿ...
ಕೊನೆಯದಾಗಿ ಔಪಚಾರಿಕವಾಗಿ/ ಅನೌಪಚಾರಿಕವಾಗಿ ನನಗೆ ಶಾಲೆಯ/ ಬದುಕಿನ ಪಾಠಗಳನ್ನು ಹೇಳಿಕೊಟ್ಟ ಎಲ್ಲರಿಗೂ ' ಶಿಕ್ಷಕರ ದಿನಾಚರಣೆ'ಯ
ಶುಭದಿನದ ಹಾರ್ದಿಕ ಶುಭಾಶಯಗಳು...
No comments:
Post a Comment