Thursday, 25 August 2022

ಕವಲು ದಾರಿ...#ಅವಳ_ತೊಡಿಗೆ_ಇವಳಿಗಿಟ್ಟು...#ಅನುವಾದ_ಸಾಹಿತ್ಯ...#Trans_creation_of_English_poems...#ಶ್ರೀಮತಿ_ಕೃಷ್ಣಾ_ಕೌಲಗಿ...

#ಅವಳ_ತೊಡಿಗೆ_ಇವಳಿಗಿಟ್ಟು...
#ಅನುವಾದ_ಸಾಹಿತ್ಯ...
#Trans_creation_of_English_poems...
#ಶ್ರೀಮತಿ_ಕೃಷ್ಣಾ_ಕೌಲಗಿ...

ಕವಲು ದಾರಿ...

ಕಾನನದ ನಡುವಿನಲಿ
ಕಂಡೆ ಕವಲಿನ ದಾರಿ
ನನಗಾಗ ಬೇಕಿತ್ತು ಒಂದೇ ಒಂದು...
ದೂರ ನೋಟವ ಹರಿಸಿ
ಮೊದಲೊಂದು ನೋಡಿದೆನು
ಕಾಣದಾಯಿತು ಕೊನೆ ಎಲ್ಲಿ  ಎಂದು...?

ಆಗ ನಡೆದೆನು ನಾನು
ಇನ್ನೊಂದೇ ಸರಿಯಂದು,
ಎಲ್ಲಿ ನೋಡಿದರಲ್ಲಿ ಹುಲ್ಲು ಹಾಸು...
ಬಹುಜನರು ಅದರಲ್ಲೇ
ನಡೆದುಹೋಗಿರಬಹುದು...
ಒಬ್ಬಂಟಿಗರಿಗಿಂಥ ದಾರಿಯೇ ಲೇಸು...

ಬೆಳಗೆದ್ದು ನೋಡಿರಲು
ಎರಡೂ ದಾರಿಯಗುಂಟ ಉದುರಿದೆಲೆಗಳ ರಾಶಿ ಕಣ್ಣಮುಂದೆ...
ಮರುದಿನಕೆ ಮೊದಲಿನದೇ 
ಸರಿ ಎನಿಸಿತರಗಳಿಗೆ
ಆದರೂ ಮರಳಿ ಬರಬಹುದೇ ಹಿಂದೆ?

ವರುಷಗಳ ಮೇಲಿಷ್ಟು
ವರುಷಗಳು ಉರುಳಿರಲು
ದಾರಿಕವಲೊಡೆಯುವಿಕೆ ಸಹಜ ತಾನೇ
ನನ್ನ ದಾರಿಯ ನಾನೇ
ಅರಸಿ ಹೊರಟಿರುವಾಗ,
ಆದು ಬೇರೆಯಾದರೂ ನನ್ನದೇನೇ!!??

No comments:

Post a Comment

🌸 Wedding Invitation 🌸 With hearts full of joy and gratitude, We, the Kulkarni Family, invite you to celebrate a bond. As our beloved son ...