Thursday, 18 August 2022

ವಿರಹ...ನೂರು ನೂರು ತರಹ...

ಗಡಿಯಾರ -
ಗಳನೆಲ್ಲ ನಿಲ್ಲಿಸು...
ಫೋನುಗಳು ಸಂಪರ್ಕ ಕಳೆದುಕೊಳ್ಳಲಿ. 
ಜೊಲ್ಲು ಸುರಿಸುತ್ತಾ ಬೊಗಳುವ ನಾಯಿಯ ಬಾಯಿ 
ಮೊದಲು ಮುಚ್ಚಿಸು...
ಸಂಗೀತ ವಾದ್ಯಗಳು ಮೌನ ಸಾಧಿಸಲಿ.

ತಲೆಯಮೇಲೆ -
ವಿಮಾನಗಳು ಗೋಳಿಡುತ್ತ 
ಸುತ್ತು ಹಾಕುತ್ತಿರಲಿ...
ಗಗನದಲ್ಲಿ  ರೆಕ್ಕೆಗಳಿಂದ
ನಿನ್ನ ಸಾವಿನ ಸಂದೇಶ ಗೀಚಲಿ...

ನೀನು ನನ್ನ -
ಪೂರ್ವ-ಪಶ್ಚಿಮವಾಗಿದ್ದೆ.
ಉತ್ತರ-ದಕ್ಷಿಣವಾಗಿದ್ದೆ.
ವಾರದ ಕೆಲಸವಾಗಿದ್ದೆ.
ರಜಾದಿನಗಳ ವಿಶ್ರಾಂತಿಯಾಗಿದ್ದೆ.
ನನ್ನ ಹಗಲು- ರಾತ್ರಿ, 
ಮಾತು - ಮೌನ
ಹಾಡು - ಹರಟೆ
ಎಲ್ಲವೂ ನೀನೇ ಆಗಿದ್ದೆ ...

ಇದೀಗ-
" ಪ್ರೀತಿ ಅಮರ "
ಎಂದುಕೊಂಡದ್ದನ್ನು
ಹಸೀ ಸುಳ್ಳಾಗಿಸಿಬಿಟ್ಟೆ...

ಈಗೆನಗೆ -
ನಕ್ಷತ್ರಗಳು ಬೇಕಿಲ್ಲ...
ಚಂದ್ರ ಮರೆಯಾಗಿಹೋಗಲಿ...
ಸೂರ್ಯ ಛಿದ್ರವಾಗಲಿ...
ಸಾಗರ ಬಸಿದು ಹೋಗಲಿ...
ಅರಣ್ಯಗಳು ಗುಡಿಸಿಹೋಗಲಿ,
ಎಲ್ಲವೂ ಹೋಗಲಿ.
ಯಾವುದೂ, 
ಎಂದಿಗೂ,
ಯಾವುದಕ್ಕೂ 
ಉಪಯೋಗವಿಲ್ಲ...

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...