Friday, 6 March 2026

         ಮೊದಲು ನಮ್ಮ ಸುತ್ತ ಮುತ್ತ ಎಷ್ಟೊಂದು ಜನವಿರುತ್ತಿದ್ದರು!!! ಈಗ ತುಂಬ ಕಡಿಮೆಯಾಗುತ್ತಿದ್ದಾರೆ.ಧ್ವನಿಗಳು/ ಮಾತುಗಳು/ಸಂಖ್ಯೆಗಳು ಕ್ಷೀಣಿಸುತ್ತಿವೆ .ನಾವು ಕ್ರಿಯಾಶೀಲರಾಗಿದ್ದಾಗ ಆಸಪಾಸ್ ಜನ ತುಂಬಿರುತ್ತಾರೆ. ಚಹಾಪಾನ- ಹರಟೆಗಳಿರುತ್ತವೆ. ಏಕಾಏಕಿ ಅದು ಕಡಿಮೆಯಾಗತೊಡಗುತ್ತದೆ... ಫೋನುಗಳ ಗಂಟೆ ಕಡಿಮೆ ಕೇಳಿಸುತ್ತದೆ. ಜಗಳಗಳಿಲ್ಲ, ಮನಸ್ತಾಪಗಳಿಲ್ಲ ಆದರೂ ಈ ಬದಲಾವಣೆ ಅದೇಕೆ?!ಏಕೆಂದರೆ ಬದುಕೂ ಸಹ ಒಂದು ಲಯದಲ್ಲಿ ಚಲಿಸುತ್ತದೆ.ಪ್ರತಿ ಸಂಬಂಧಗಳಲ್ಲಿ ದಿನಾಲೂ ಮಾತು- ಕತೆ ಇರಲೇಬೇಕು ಎಂದೂ ಇರುವುದಿಲ್ಲ.ಅನೇಕ ಹತ್ತಿರದ ಗೆಳೆಯ- ಗೆಳತಿಯರಿಗೆ ತಮ್ಮದೇ ಬದುಕು / ಕೆಲಸ ಕಾರ್ಯಗಳು/ ಜವಾಬ್ದಾರಿಗಳು ಇದ್ದೇ ಇರುತ್ತವೆ.ಅವುಗಳಲ್ಲಿ ವ್ಯಸ್ತರಾದಾ ಗ ಮಾತುಕತೆಗಳು ಸಹಜವಾಗಿಯೇ ಕಡಿಮೆಯಾಗುತ್ತವೆ.ಅಲ್ಲದೇ ನಾವೂ ಆ ಹಂತದಲ್ಲಿ ಗುಣಮಟ್ಟದ ಸ್ನೇಹ ಬಯಸುತ್ತೇವೆ.ಮುಖವಾಡವಿರದ/ ಕಡಿಮೆ ಮಾತನಾಡಿದರೂ ಮೌಲ್ಯವುಳ್ಳ ಮಾತುಗಳು ಹಾಯೆನಿಸುತ್ತವೆ.ಅಲ್ಲಿ ನೀವು ಸಂಖ್ಯೆಗೆ ಕಡಿಮೆ ಗಮನ ಕೊಟ್ಟು ಮೌಲ್ಯದ ಕಡೆ ಬಾಗಿರುತ್ತೀರಾ...ಮನದ ಆರಾಮವನ್ನು ಆರಿಸಿರುತ್ತೀರಾ.ನಿಮ್ಮ ಸ್ನೇಹ ಹಾಗೆಯೇ ಇರುತ್ತದೆ.ಚಿಂತೆ ಬೇಡ...ಯಾರದಾದರೂ ನೆನಪಾದರೆ ಬೆಳಿಗ್ಗೆ ಎದ್ದು ಕಾಣುತ್ತವೆ ಒಂದು call ಮಾಡಿ, ಅಷ್ಟೇ...

No comments:

Post a Comment

         ಮೊದಲು ನಮ್ಮ ಸುತ್ತ ಮುತ್ತ ಎಷ್ಟೊಂದು ಜನವಿರುತ್ತಿದ್ದರು!!! ಈಗ ತುಂಬ ಕಡಿಮೆಯಾಗುತ್ತಿದ್ದಾರೆ.ಧ್ವನಿಗಳು/ ಮಾತುಗಳು/ಸಂಖ್ಯೆಗಳು ಕ್ಷೀಣಿಸುತ್ತಿವೆ .ನಾವು ಕ್ರ...