Wednesday, 22 May 2019

ಹಾಗೇ ಸುಮ್ಮನೇ....

ಹಾಗೇ ಸುಮ್ಮನೇ...

ಜಿಂದಗಿ..ಏಕ ಸಫರ್ ಹೈ ಸುಹಾನಾ....

           ‌‌ ಒಬ್ಬ ಹಿರಿಯರು ದಿನಾಲೂ ಬೆಳಿಗ್ಗೆ walking ಹೋಗುತ್ತಿದ್ದರು..ಪ್ರತಿದಿನವೂ ಅವರಿಗೆ ಒಂದು ದೊಡ್ಡ  ಬಂಡೆಯ ಮೇಲೆ ಮಲಗಿ ತಾಸುಗಟ್ಟಲೇ ಆಕಾಶ ದಿಟ್ಟಿಸುವ ಹದಿಹರೆಯದ ಹೈದ ನೋಡಲು ಸಿಗುತ್ತಿದ್ದ..ಎರಡು ದಿನ ಮುಗುಳ್ನಕ್ಕು ಮುಂದೆ ಹೋದ ಅವರು ಮೂರನೇದಿನ ಅವನ ಬಳಿ ಹೋಗಿ ಕುಳಿತರು.. ಬಹುಶಃ ಧುಮ್ಮಿಕ್ಕಿ ಹರಿಯುವ ಕಾವೇರಿ ನೀರು ಕಂಡಾಗ ವಿಶ್ವೇಶ್ವರಯ್ಯ ಅವರಿಗೆ ಅನಿಸಿದ ಹಾಗೆ," Oh!! What a waste of energy" ಅನಿಸಿರಲು ಸಾಕು...
          ಬಳಿ ಕುಳಿತ ಹಿರಿಯರನ್ನು ಕಂಡ. ಯುವಕ ಮುಗುಳ್ನಕ್ಕು ಎದ್ದು ಕೂತ...

ಹಿರಿಯರು_ " ಏನಪ್ಪಾ, ಏನ್ ಮಾಡ್ಕೊಂಡಿದೀಯಾ"?

ಯುವಕ_ ಸಧ್ಯಕ್ಕೆ ಏನೂ ಇಲ್ಲ ತಾತ?

ಹಿ_ ಯಾಕೆ ಏನಾದ್ರೂ ಮಾಡೋದಲ್ವಾ? ತುಂಬಾನೇ ಹುಶಾರಿದ್ದಹಾಗೆ ಕಾಣ್ತೀಯಾ...

ಯು_ ಯಾಕೆ ತಾತ?

ಹಿ_ ದುಡಿಯೋಕೆ ಅಂತ ವಯಸ್ಸಿರುತ್ತೆ ಮಗು...
ಆಗ ದುಡಿದಿಟ್ಟುಕೊಳ್ಳಬೇಕು..

ಯು_ ಅಂದ್ರೆ ಏನಾಗುತ್ತೆ?

ಹಿ_ ಆಮ್ಯಾಲೆ ಚಿಂತೆನೇ ಇರಲ್ಲ ಕಣಯ್ಯ...ಬೇಕಾದಷ್ಟು ಜನ ನಿನ್ಮ ಮೆಚ್ಚಿ ನಿನಗೆ ಹೆಣ್ಣು ಕೊಡಲು ನಾ ಮುಂದು..ನೀ ಮುಂದು ಅಂತಾ ಬರ್ತಾರೆ...

ಯು_ ಬಂದ್ರೆ ?

ಹಿ_ ಮುದ್ದಾದ ಮಡದಿಯಿಂದ ಮುದ್ದಾದ ಮಕ್ಕಳು ಪಡೆದು,ಅವರನ್ನು ನಿಮಗೆ ಬೇಕಾದಂತೆ ಬೆಳೆಸಿ ಸಂತೋಷವಾಗಿರ್ಬಹುದು_

ಯು_ ಆಮ್ಯಾಲೆ??

ಹಿ_ಮಕ್ಕಳನ್ನು ಓದಿಸಿ,ಮದುವೆ ಮಾಡಿ ಅವರನ್ನು ವಿದೇಶಕ್ಕೆ ಕಳಿಸಿ ನೀವೂ ಆರಾಮಾಗಿರಬಹುದು ಅಂತ ನಿನಗೆ ಅನಿಸೊಲ್ವಾ?

ಯು_ಏನ್ ತಾತ ನೀವು! ಈಗ ಬಯ್ತಿರೋದು ಏನ್ ಈ ಪರಿ ಆರಾಮಾಗಿದೆಯಾ ..ಅಂತಾನೇ ತಾನೆ?ನೀವು ಹೇಳಿದ  ಆ ಎಲ್ಲಾ ಸರ್ಕಸ್ ಮಾಡ್ಬಿಟ್ಟೆ ಅಂತಾನೇ ಇಟ್ಕೊಳ್ಳಿ..ಕೊನೆಗೆ ಸಿಗೋದೂ ಆರಾಮವೇ ತಾನೇ? ಈಗಲೇ ಅದನ್ನ ಅನುಭೋಗ್ಸತಿದೀನಿ ತಾತಾ ನಾನು ..."

  ‌‌‌‌‌‌        ಅರೇ ಹೌದಲ್ವಾ? ಅನಿಸುವದಿಲ್ಲವೇ  ಒಂದು ಕ್ಷಣ...ಮದುವೆ ,ಮಕ್ಕಳು,ಸಂಸಾರ,ಅದರ ಜಂಜಾಟ, ಅದರ ಪಾರ್ಶ್ವ ಪರಿಣಾಮಗಳಾದ ಬಿಪಿ,ಶುಗರ್,ಒತ್ತಡ  ಎಲ್ಲದರಲ್ಲೂ ಹಾಯುವಾಗ ಮನಸ್ಸು ಆನೆ( ಆರಾಮ,ನೆಮ್ಮದಿ) ಬಯಸುತ್ತದೆ...ಎಲ್ಲ odds ಗಳ ನಡುವೆ ಹೋರಾಡಿ ಅದನ್ನು ಪಡೆಯಲು ಸೆಣಸುತ್ತದೆ... ಕೊನೆಗೊಮ್ಮೆ ಮನಶ್ಶಾಂತಿ ಸಿಕ್ಕಾಗ ನೆಮ್ಮದಿಯಿಂದ ಉಸಿರಾಡಿಸುತ್ತದೆ...
   ‌‌‌‌‌      ಅದು ಅನಾಯಾಸವಾಗಿ ಸಿಕ್ಕಾಗ ಅನುಭವಿಸಬೇಕೆಂಬುದೂ ಒಂದು ತರ್ಕವೇನೋ ಹೌದು...It is absolutely o.k. to be lazy sometimes....but not always...ಅದೇ ಶಾಶ್ವತ ಪರಿಹಾರವಲ್ಲ...ನಮ್ಮೆಲ್ಲ ಶಕ್ತಿ ,ಸಾಮರ್ಥ್ಯ ಬಳಸಿ ಯುದ್ಧ  ಗೆದ್ದು  ಬೀಗುವದೂ ಒಂದು ಖುಶಿ.ರಣರಂಗದಿಂದ ಓಡಿ ಹೋಗಿ ಬಚಾವಾಗುವದಲ್ಲ...ಬದುಕಿನಲ್ಲಿ ಎಲ್ಲವನ್ನೂ ಆಸ್ವಾದಿಸ ಬೇಕು...ಒಂದು ಹಂತದ ವರೆಗೆ..ಬೇಡೆನಿಸಿದಾಗ  quit option ಇರುತ್ತದೆ...ಬೇಕೆನಿಸಿದರೆ..
  ‌‌‌        ಬದುಕೆಂದರೆ" ಒಳಗೆ ಹುರಿದ ಸೇಂಗಾ ಇಟ್ಟ ಇಲಿಬಲೆ...ಹೊರಗಿನ ಇಲಿಗೆ ಒಳಗಿನ ಸೆಂಗಾಗಳ ಮೇಲೆ ಕಣ್ಣು...ಒಳಗೆ ಸಿಗಿ ಬಿದ್ದುದಕ್ಕೆ ಹೊರಗಿರುವ ಇಲಿಯ ಸ್ವಾತಂತ್ರ್ಯದ ಮೇಲೆ ಗಮನ..
ಎರಡಕ್ಕೂ ಇರುವದೆಲ್ಲವ ಬಿಟ್ಟು  ಇರದಿರುವದರ ಕಡೆಗೆ ತುಡಿತ..ಹಾಗೆಯೇ ಮದುವೆಯಾಗಿ ಸಂಸಾರ ಮಾಡಿ ಗೆಲ್ಲುವದು" ತಿಂದರೂ ..ತಿನ್ನದಿದ್ದರೂ ಕೊನೆಗೆ ಪರಿತಪಿಸುವಂತೆ ಮಾಡುವ ಲಡ್ಡು"
             ಹಾಗಾದರೆ ಮಧ್ಯ ಮಾರ್ಗವೇನು? There is  a golden mid point... ಬಾಲ್ಯದಲ್ಲಿ ಮನಸಾರೆ ಆಡಿ, ಹರಯದಲ್ಲಿ ಏನಾದರೂ ಬದುಕಿನಲ್ಲಿ ಸಾಧಿಸಿ, ವಾನಪ್ರಸ್ಥದಲ್ಲಿ  ಮಕ್ಕಳು ಮರಿಗಳ ತುಂಬು  ಸಂಸಾರದ ಸುಖ ಅನುಭವಿಸಿ ಸಾವಧಾನವಾಗಿ detachment ಬೆಳೆಸಿಕೊಳ್ಳುವದು..ಬಾಲ್ಯದಲ್ಲಿಯೇ ಅಳತೆ ಮೀರಿದ ಪ್ರೌಢಿಮೆ, ಯೌವನದಲ್ಲಿ ಅತಿಯಾದ ಹುಡುಗಾಟ, ಮಧ್ಯವಯಸ್ಸಿನಲ್ಲಿ ಹಣದ ಹಿಂದೆ ಓಡುವದು,ಮುದುಕರಾದಮೇಲೂ ಕುಟುಂಬದ ನಿಯಂತ್ರಣ ಬೇಕೆನ್ನುವದೂ ಅನಪೇಕ್ಷಿತ ಅಷ್ಟೇ ಅಲ್ಲ, ಆತ್ಮದುದ್ದಾರಕ್ಕೂ ಅಡ್ಡಿ...ಅದು ನಿಯಮ ಬಾಹಿರವೂ ಅಹುದು..

    ‌      ಇದೇನೋ ಭಾರಿ ತತ್ವಬೋಧನೆಯಲ್ಲ...ಹಾಗೆ ನಾನು ಬದುಕಿಬಿಟ್ಟಿದ್ದೇನೆ ಅಂತಂತೂ ಸರ್ವಥಾ ಅಲ್ಲ....ಹಾಗೆ  ಬದುಕಿದವರ  ಬದುಕಿನಿಂದ ,ಅದರ ಚಲುವಿನಿಂದ,ಅದರ ಧನಾತ್ಮಕ ಪರಿಣಾಮಗಳಿಂದ ಕಲಿಯುತ್ತ ಬಂದ ,ಪಾಠಗಳು...ಒಂದು ಹಂತದಲ್ಲಿ ಈ ತರಹದ ಬದುಕಿಗೆ ಅಣಿಯಾಗದಿದ್ದರೆ ಮಾನಸಿಕವಾಗಿ ನೆಮ್ಮದಿ ಕಳೆದುಕೊಂಡು ಬದುಕು ನರಕ ಸದೃಶ ವಾಗುವದನ್ನು ಯಾರಿಂದಲೂ ತಪ್ಪಿಸಲಾಗುವದಿಲ್ಲ...

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...