Monday, 20 May 2019

ಹಾಗೇ ಸುಮ್ಮನೇ

ಹಾಗೇ ಸುಮ್ಮನೇ...

ಜನ ಮರುಳೋ...
ಜಾತ್ರೆ ಮರುಳೋ...
      
          ನಿಮ್ಮ ಮನೆ ಅಡಿಗೆ ರುಚಿಯಾಗ್ತಾ ಇಲ್ವಾ? ಅಮ್ಮನ ಮನೆಯಿಂದ SUN GOLD ತರಿಸಿಕೊಳ್ಳಿ...ನಂತರ ರುಚಿ ನೋಡಿ..!!!

     ‌‌‌‌‌   ಯಾಕೋ ಬಟ್ಟೆಗಳಲ್ಲಿ ಹೊಲಸು ಹಾಗೇ ಉಳಿಯುತ್ತಿದೆಯಾ?? ಅಮಿತಾಬ ಬಚ್ಚನ್ ಬರ್ತಾನೆ ಬಿಡಿ..ಎರಡು ಸ್ಕ್ರೂ ಹಾಕಿ ತೆಗೆದಮೇಲೆ ಅವನು ಹೇಳಿದ ಸೋಪಿನ ಪುಡಿ ಬಳಸಿ..problem ಖತಂ..

         ‌ ‌ ಬಚ್ಚಲು ಮನೆಯಲ್ಲಿ ನಿಲ್ಲೋಕಾಗ್ತಾ ಇಲ್ವಾ? ಒಂದು refreshener ತೂಗು ಹಾಕಿ...ಕುಣಿಕುಣೀತಾ ಹಲ್ಲುಜ್ತೀರಾ...ಬಚ್ಚಲೇನೂ ಉಜ್ಜಬೇಕಾಗಿಲ್ಲ...

             ಬಚ್ಚಲು ಉಜ್ಜಲೇ ಬೇಕಾ? ಚಿಂತೆ ಬೇಡ..ಅಕ್ಷಯ ಕುಮಾರನನ್ನು ನೆನೆಯಿರಿ..ಏನು? ಎಷ್ಟು ?ಹಾಕಿ ಬಚ್ಚಲು ಸ್ವಚ್ಛಮಾಡಬಹುದೆಂಬ ಮಂತ್ರ ಕ್ಷಣಾರ್ಧದಲ್ಲಿ ಲಭ್ಯ..

    ‌‌     ‌‌‌     ಮದುವೆಗೆ ಹೋಗಬೇಕೆನ್ನುವಾಗಲೇ ಒಂದು ಬಿಳಿ ಕೂದಲು ತಲೆಯಲ್ಲಿ ಕಂಡಿತಾ?..ಅಯ್ಯೋ ದೈವವೇ!! Pls ಆತ್ಮಹತ್ಯೆ ಮಾಡಿಕೊಳ್ಳಬೇಡಿ...ಕೇವಲ ಎರಡೇ ನಿಮಿಷ ತಾಳಿ ..ಗೆಳತಿ hair dye ಎಂಬ ರಾಮಬಾಣದೊಂದಿಗೆ ಬರುತ್ತಾಳೆ..
ಆಗ ನೋಡಿ ಮಜಾ..ಮದುವೆಯಲ್ಲಿ ಮದುಮಗಳೇ ನಿಮ್ಮ bride maid ಆಗಿಬಿಡುತ್ತಾಳೆ..

          ಓಹೋ! ಮಗ ಹಾಲು ಕುಡಿಯದೇ ನಾಯಿಗೆ ಹಾಕುತ್ತಿದ್ದಾನಾ? ಮಾತೃ ಹೃದಯ ನೋಯದಿರುತ್ತಾ? ಹಳಹಳಿಸಬೇಡಿ..ನಾಲ್ಕು ಅವರು ಹೇಳಿದ ಬಿಸ್ಕಿಟ್ನೊಂದಿಗೆ ಕೊಡಿ ..ನಾಯಿಗೇ ಉಪವಾಸ ಮಾಡಿಸುತ್ತಾನೆ ನಿಮ್ಮ ಮಗ...ಆಗ ನೀವೂ/ ಮಗ ಇಬ್ಬರೂ ಖುಶ್...

       ‌    ‌‌‌  ಅಯ್ಯೋ ಹಲ್ಲುನೋವು..ಏನೂ ತಿನ್ನೋಕೆ ಆಗ್ತಾಯಿಲ್ಲ ಅಲ್ವಾ? Hospital ಗೇನೂ ಹೋಗಬೇಕಾಗಿಲ್ಲ ..ಆ! ಎಂದು ಚೀರಿ ವಸಡಿಗೆ ಕೈಯಿಡಿ...ಎಲ್ಲಿಂದಲೋ ಕ್ಷಣಾರ್ಧದಲ್ಲಿ ದೇವತೆಯೊಬ್ಬಳು ಪ್ರತ್ಯಕ್ಷಳಾಗಿ ಉಪ್ಪಿರುವ Colgate paste ಕೊಡುತ್ತಾಳೆ..ಉಜ್ಜಿನೋಡಿ..
ಹಲ್ಲೇ..sorry .sorry.ನೋವು ಮಾಯ...ಇಲ್ಲದಿದ್ದರೆ ನಿಮಗೂ ಆ paste ಖರೀದಿಸಿ ತಂದ ಅಮ್ಮನ್ನೋ,ಅಪ್ಪನ್ನೋ ಬದಲಾಯಿಸಿ ಬಿಡುವ ಮನಸ್ಸಾಗಿದ್ದರೆ ಏನು ಗತಿ ಹೇಳಿ...?

           ನಿಮ್ಮ fan ಗಳು dust ನಿಂದ ಅಲರ್ಜಿ ತೊಂದರೆ ಕೊಡುತ್ತಿವೆಯಾ? ಒರೆಸಿ ಸ್ವಚ್ಛಗೊಳಿಸುವ ಗೋಜಿಲ್ಲ...ಡಾಕ್ಟರ್ ಬಳಿ ಹೋಗಿ ಸೀನಲು ಪ್ರಾರಂಭಿಸಿ...ಅವರು ರೂಮಿಗೊಂದರಂತೆ ಹೊಸ fan ಗಳನ್ನು prescribe ಮಾಡುತ್ತಾರೆ..ಖರೀದಿಸಿ ಬದಲಾಯಿಸಿ..
ಆಗ dust ಕಮ್ಮಿ...trust ಜಾಸ್ತಿ...

           ವಿಪರೀತ ನೆಗಡಿಯಿಂದ ಮೂಗು ಊದಿಕೊಂಡು ಚಹ ಕುಡಿಯುವಾಗ ಅಡ್ಡಡ್ಡ ಬರುತ್ತಿದೆಯೋ? ಒಂದೇ second... TV ಯವರು ಒಂದು ಇನ್ ಹೇಲರ್ ಹೇಳುತ್ತಾರೆ... ..ಬಳಸಿನೋಡಿ..ಚಹ direct ಆಗಿ ಸುಲಭವಾಗಿ ಮೂಗಿನಲ್ಲೇ ಹೋಗದಿದ್ದರೆ ಕೇಳಿ...

         ‌‌‌ಬದುಕೆಷ್ಟು ಸುಂದರ ಅಲ್ವಾ? ಸಮಸ್ಯೆಗಳಿಗೆ ವಿಚಲಿತರಾಗಬೇಕಾಗಿಲ್ಲ... TV ಮುಂದೆ ಕೂತುಬಿಡಿ ಸಾಕು..ಅವರೇ ನಿಮ್ಮೆಲ್ಲ ಸಮಸ್ಯೆಗಳಿಗೆ ರಾಮ ಬಾಣ..

  ‌  ‌     ‌ಅವರು ಹೇಳಿದಷ್ಟು ಮಾಡಿ...ಮುಂದಿನದು ತೆರೆಯ ಮೇಲೆ ನೋಡಿ..

  ‌‌‌        ‌‌ ‌ ‌‌‌ಇಷ್ಟು ನಿರಾತಂಕ,ನಿಶ್ಚಿಂತ,ನಿರಾಳ,ನಿರ್ಯೋಚಿತ ಬದುಕು ಯಾರಿಗುಂಟು!!...ಯಾರಿಗಿಲ್ಲ!!!
  ‌‌‌   ‌‌     ENJOY ಸಿ...Best of luck...👍👍👍👍

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...