Thursday, 20 May 2021

ತಿಳಿಯುತ್ತಿಲ್ಲ...

ತಿಳಿಯುತ್ತಿಲ್ಲ...

ಮುಂಜಾನೆ  ಬಿಸಿಲು,
ಮಧ್ಯಾಹ್ನ  ಬಿರುಗಾಳಿ,
ಸಂಜೆಯಾಯಿತೋ
ಮಳೆಧಾರೆ...
ಇದಾವ ಋತು?
ತಿಳಿಯುತ್ತಿಲ್ಲ...

ದಿನವೊಂದು ಮಗ್ಗಲು
ಬದಲಾಯಿಸಿದರೂ
ನಿನ್ನೆಯಂತೆಯೇ-
ಬಹುಶಃ ಮುಂಬರುವ
ನಾಳೆಯಂತೆಯೇ-
ಎಂದಾದಾಗ 
ಇಂದಿನ ದಿನ
ಯಾವುದೆಂಬುದೇ
ತಿಳಿಯುತ್ತಿಲ್ಲ...

ಹಲವಾರು ಚಿತ್ತಭ್ರಮೆಗಳು ನರಕವೊಂದನ್ನು ಸೃಷ್ಟಿಸಿ,
ಕವಿದ  ಆ  ಮಬ್ಬಿನಲ್ಲಿ
ಮನಸು ಮರಗಟ್ಟಿದರೆ
ಆ ಮನಸ್ಥಿತಿಗೆ
ಏನೆನ್ನಬೇಕು
ತಿಳಿಯುತ್ತಿಲ್ಲ...

ಅಸ್ಪಷ್ಟ ಭಾವಗಳ ಮಧ್ಯೆ
ಅಳಿದುಳಿದ ಸತ್ಯದ
ಅವಶೇಷಗಳೂ,
ಮೂಲ ನಿಜವನ್ನೇ
ಮರೆಮಾಚುವಂತಾದರೆ
ಆ ಜಗವೆಂತಹದು
ತಿಳಿಯುತ್ತಿಲ್ಲ...

No comments:

Post a Comment

        ಧಾರವಾಡದಲ್ಲಿ ಇಪ್ಪತ್ತು ದಿನ ಕಳೆದು ಇಂದು ಬೆಂಗಳೂರಿಗೆ ಬಂದೆ... ಮೊದಲ ಸಲ ಅದರ ಬಗ್ಗೆ ಬರೆಯಲು ಬೇಸರವಾಗುತ್ತಿದೆ.ಅದೇ ಜನ/ಅವೇ ಮನೆಗಳು/ ಭಾವ ಬೇರೆ/ನೋವು ಬೇರೆ...