Tuesday, 29 April 2025

Tuesday, 15 April 2025

      ಬದುಕಿನಲ್ಲಿ ನನ್ನ ಶಕ್ತಿ ಇದ್ದಷ್ಟು/ ನನಗೆ ತಿಳಿದಷ್ಟು/ನಾನು ಅಂದುಕೊಂಡ ದ್ದು ಮಾಡಬಹುದಾದದ್ದನ್ನು ಮಾಡಿ ಆಯಿತಾ- ಗೊತ್ತಿಲ್ಲ.ಆದರೆ ಈಗೀಗ 
ಏನು ಮಾಡಬಹುದು? ಮತ್ತೇನು
ಉಳಿದಿದೆ- ಇಂಥ ವಿಚಾರಗಳೂ ಕೂಡ
ಇಳಿಮುಖವಾಗತೊಡಗಿವೆ.ದೇಹ- ಮನಸ್ಸು ಮೇಳ ಎಲ್ಲೋ ತಪ್ಪುತ್ತಿವೆ.
ಒಮ್ಮೊಮ್ಮೆ ಏನಾದರೂ ಮಾಡತೊಡಗಿ ದ ಸ್ವಲ್ಪಕಾಲದ ನಂತರ ಸಾಕು ಅನಿಸುತ್ತದೆ.
   ‌‌‌‌         ಬಿಟ್ಟು ಬಿಡುವುದು- ಸುಲಭ.
ಮನೆಯಿಂದ ಎಲ್ಲರೂ ತಮ್ಮ ತಮ್ಮ
ಕೆಲಸಕ್ಕೆ ಅಂತ ಹೋದಮೇಲೆ ಏನು
ಮಾಡುವುದು?ಮಲಗಿದರೆ ರಾತ್ರಿ ಪೇಚು.TV ನೋಡುವುದು/ Fb ನೋಡುವುದಕ್ಕೂ ಎಷ್ಟು ಸಮಯ
ಕೊಡಬಹುದು...ದಿನಾಲೂ ಯಾರ ಮನೆಗೆ ಹೋಗುವುದು?ಯಾರನ್ನು
ಮನೆಗೆ ಕರೆಯುವುದು?ಬೆಂಗಳೂರಿನ ಲ್ಲಿ ಯಾವದೂ ಸಲಭವಲ್ಲ...




Sunday, 13 April 2025

               ನನ್ನ ಹಿರಿ ಮಗಳಿಗೆ ಚಿಕ್ಕಂದಿನಿಂದಲೂ ಅಭ್ಯಾಸಕ್ಕಿಂತ ಉಳಿದ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ...ರಂಗೋಲಿ/ ಹೊಲಿಗೆ/ painting/fashion designing/
Soft toys ತಯಾರಿಕೆ/ಜೀನ್ಸ ಬಟ್ಟೆ ಗಳಲ್ಲಿ bagsಗಳನ್ನು ಮಾಡುವುದು/
 ಮೆಹಂದಿ-ಹಾಕುವುದು/ beauty parlor course ಕಲಿಕೆ - ಇನ್ನೂ ಏನೇನೋ...ಧಾರವಾಡದಲ್ಲಿ ಕಲಿತ ಮೇಲೆ ಬೆಂಗಳೂರಿನಲ್ಲೂ ಒಂದು ವರ್ಷದ ಕೋರ್ಸ ಮುಗಿಸಿ ಹೊಲಿಗೆಯ
Class ಗಳನ್ನು ನಡೆಸತೊಡಗಿದಳು...
ಚಿಕ್ಕವಳಿಗೆ ಅಭ್ಯಾಸದಲ್ಲಿ ಆಸಕ್ತಿ...
ನಡುವೆ break ತಗೊಂಡು ಅವಳೂ
ಹೊಲಿಯುವುದನ್ನು ಕಲಿತಳು.ಅಕ್ಕನಿಗೆ
ಆದಷ್ಟು ಸಹಾಯ ಮಾಡಿದಾಗಲೆಲ್ಲ
ತನಗೆ ಬಂದ ಹಣದಲ್ಲಿ ಅವಳ ಪಾಲು
ಎಂಬಂತೆ ಒಂದಿಷ್ಟು ಅವಳಿಗೂ ಕೊಡು
ವ ಪರಿಪಾಠವಿತ್ತು.ಅಕ್ಕನಂತೆ ತಂಗಿಗೆ
ಅಲಂಕಾರ/ಬಟ್ಟೆ- ಬರೆಯಲ್ಲಿ ವಿಶೇಷ ಆಸಕ್ತಿ ಇರಲಿಲ್ಲ.ತನಗೆ ಸಿಕ್ಕ ಹಣ ಕೂಡಿಟ್ಟು ಕೊಂಡು ಒಂದು ಹೆಣ್ಣು ಗೊಂಬೆ ಖರೀದಿಸಿ,ಅದಕ್ಕೆ ಚಂದಚಂದ
ದ ಬಟ್ಟೆಗಳನ್ನು ಹೊಲಿದು ಹಾಕುವು ದಕ್ಕೆ ಶುರುವಿಟ್ಟುಕೊಂಡಳು.ಸದಾ ಓದುವ ಅವಳಿಗೆ ಆ ಚಟುವಟಿಕೆ ತುಂಬ Mood freshener ಆಗಿ ಸಹಾಯಕವಾಗಿತ್ತು.ಅದೇ ಗೊಂಬೆ
ಯೊಂದನ್ನು ಇಷ್ಟಪಟ್ಟು ಗಂಡನ ಮನೆಗೂ ತಂದಿಟ್ಟುಕೊಂಡಳು...ಆದರೆ
ಎರಡೂ ಗಂಡು ಮಕ್ಕಳಾದಾಗ ನಿರಾಶೆ
ಯಾದದ್ದು ನನಗೆ...
           ಆಗಾಗ ಅವಳ ಪುಟ್ಟ ಮಗನ ಕೈಯಲ್ಲೂ ಅದು ಕೆಲಕಾಲ ಇರುತ್ತಿತ್ತು...
ಮೊನ್ನೆ ಸಿಕ್ಕ ಫೋಟೋ ಒಂದರಲ್ಲಿ ಆ
ಗೊಂಬೆ ಸಿಕ್ಕಾಗ ಮೊಮ್ಮಗನಿಗಿಂತ ಗೊಂಬೆಯನ್ನೇ ಹೆಚ್ಚು ಮುದ್ದಾಡಿದ್ದು
ನಾನು...
       

Saturday, 12 April 2025

     ‌‌‌‌    ಒಬ್ಬಳೇ ಕುಳಿತಾಗ, ಏನೂ ಮಾಡಲು ಮನಸ್ಸಿಗೆ ಬೇಡವಾದಾಗ
ಹಳೆಯ ಫೋಟೋಗಳನ್ನು ನೋಡುತ್ತಾ ಆ ದಿನಕ್ಕೆ ಇಳಿಯುತ್ತಾ,ಆ ದಿನವನ್ನು
ಮರು ಸೃಷ್ಟಿಸುತ್ತ, ಸುತ್ತಲಿನ ಜಗತ್ತನ್ನು
ಕೆಲ ಕಾಲ ಕಣ್ಣೆದುರಿನಿಂದ ಮರೆ ಮಾಡುವ ಕಲೆ ನನಗೆ ತುಂಬ ಇಷ್ಟ...
ಅವೇ ನೆನಪುಗಳು ಹಸಿರುದುಂಬಿ 
ಪುನಃ ಬದುಕನ್ನು ಪ್ರೀತಿಸಲು ಕಲಿಸಿ
ಎಷ್ಟೋಸಲ ಅಕ್ಷರ ರೂಪದಲ್ಲಿ ಮರುಜೀವ ಪಡೆದು ಪುಸ್ತಕದ ಸಜೀವ
ಪುಟಗಳಾಗಿವೆ.
    ‌‌‌          ‌ಕೆಳಗಿನ ಎರಡೂ ಚಿತ್ರಗಳು
ನನ್ನ ಆಪ್ತ ಲಿಸ್ಟಗೆ ಸೇರಿದವುಗಳು.
ಮಗಳು/ಅಳಿಯ ಇಬ್ಬರೂ ನೌಕರಿ
ದೆಸೆಯಿಂದಾಗಿ ಇಡೀದಿನ ಹೊರಗಿರು ತ್ತಿದ್ದಾಗ ಮನೆಯಲ್ಲಿದ್ದ ನನ್ನ ಜೊತೆಗಿದ್ದ ಸಹಾಯಕಿರಿವರು...ಲಕ್ಷ್ಮಿ ಹಾಗೂ ಮಂಜುಳ... ಮೊಮ್ಮಕ್ಕಳ ಭಾರ ಹೊತ್ತು ಮನೆಯವರೊಂದಿಗೆ
ಮನೆಯವರಾಗಿ ಬೆರೆತು ಅನಿವಾರ್ಯ ವಾಗಿ ಬೇರೆಯಾಗುವ ಹೊತ್ತು ಬಂದಾಗ ನಮಗಿಂತಲೂ ಹೆಚ್ಚು ಒದ್ದಾಡಿದ ಜೀವಗಳು...
            ಈಗ ಎಲ್ಲಿದ್ದಾರೋ/ ಹೇಗಿದ್ದಾರೋ ಗೊತ್ತಿಲ್ಲ, ಆದರೆ ನನ್ನ 
ಮನಸ್ಸಿನಲ್ಲಿ ಎಂದೆಂದಿಗೂ ಅಂದಿನಂತೆ ಯೇ ಇದ್ದಾರೆ...ಇರುತ್ತಾರೆ.
       

Thursday, 10 April 2025

ಏಕೆ?

ಬದುಕಿನ ಈ ದಾರಿಯಲ್ಲಿ ನಾವು
ಏಕಿಷ್ಟು ಅಸಹಾಯಕರಾಗಿದ್ದೇವೆ? ಒಬ್ಬರಿಗೊಬ್ಬರು ದೂರವಾಗುವಷ್ಟು
ಹತ್ತಿರವಾಗಿದ್ದೇವೆ?

"ನಮಗಾವ ಸಂತಸವೂ ಇಲ್ಲ-"
ಎನ್ನುವಂತೇನೂ ಇಲ್ಲ...
ಆದರೆ ಈ  'ಬದುಕು
ನಿಜವಾದ ಬದುಕೇ ಅಲ್ಲ'-
ಅನಿಸುವುದಾದರೂ ಏಕೆ?

ಯಾಕಾಗಿ ಬದುಕಿನ ನಿರ್ಧಾರಗಳನ್ನು
ನಾವು ಒಪ್ಪುತ್ತಲೇ ಹೋಗುತ್ತೇವೆ???
ಒಬ್ಬರಿಗೊಬ್ಬರು ದೂರವಾಗುವಷ್ಟು
ಹತ್ತಿರವಾಗಿ ಬಿಡುತ್ತೇವೆ?

ನಿನ್ನನ್ನು ಪಡೆದುಕೊಂಡ ಮೇಲೂ
ಕಳೆದುಕೊಂಡ ಭಾವವೇಕೆ?
ನಾನು ಪ್ರೀತಿಗಾಗಿ ಅತ್ತರೆ
ಪ್ರೀತಿ ನನಗಾಗಿ ಅಳುವುದೇಕೆ?

ಕಣ್ರೆಪ್ಪೆಗಳ ಅಂಚಿನಿಂದ
ಕನಸುಗಳು ಜಾರಿ ಚೂರುಚೂರಾದದ್ದಾದರೂ ಏಕೆ?
ಒಬ್ಬರಿಗೊಬ್ಬರು ದೂರಾಗುವಷ್ಟು
ಹತ್ತಿರವಾದದ್ದಾದರೂ ಏಕೆ???

Wednesday, 9 April 2025

ಮೊನ್ನೆ ಶ್ರೀನಿವಾಸ ಕೊಟ್ಟ ಪುಸ್ತಕ
ಓದುತ್ತಿದ್ದೆ.ಈಗ ಮತ್ತೆ ಕಣ್ಣಿನ ತೊಂದರೆ
ಶುರುವಾಗಿದ್ದು ಓದುವಿಕೆ ಅಷ್ಟಾಗಿ ಇಲ್ಲ. ಬಿಡಿ ಬರಹಗಳು ಚಿಕ್ಕವಿದ್ದುದರಿಂದ
ಯಾವುದನ್ನು ಬೇಕಾದರೂ ಓದಬಹು ದಾದ ಅನುಕೂಲತೆ ಇದೆ...
        ‌    ವಿಷಯದ ಕಾಲ ನಮ್ಮ ತಂದೆಯದೇ( ಮೂರು ವರ್ಷಗಳಿಗೆ
ಚಿಕ್ಕವರು) ಆದದ್ದರಿಂದ ಅವರ ಕೌಟುಂಬಿಕ / ಪಾರಿವಾರಿಕ
ಸಾಂಸಾರಿಕ /ವಿಷಯಗಳ ಸಾಮ್ಯತೆ
ಎಷ್ಟಿದೆ ಅಂದರೆ ಹೆಸರುಗಳಷ್ಟೇ ಬದಲಾದಂತೆ ಅನಿಸಿ ಬಿಟ್ಟಿತು.ನಾವೂ
ಏಳು ಜನ ಮಕ್ಕಳು, ಅಪ್ಪನಿಗೆ ನೌಕರಿ ಯಿಲ್ಲ.ದತ್ತಕ ಬಂದದ್ದಕ್ಕೆ ಅಪ್ಪನ ಮನೆಯದೂ ಇಲ್ಲ.ಮಕ್ಕಳನ್ನು ಒಬ್ಬೊಬ್ಬ  ನಂಟರ ಮನೆಯಲ್ಲಿ ಇಟ್ಟು
ಹೈಸ್ಕೂಲ್ ಕಲಿಸಿದ್ದು  ಎಲ್ಲವೂ ಅದೇ ಕತೆ...ಎಲ್ಲ ಸಮಸ್ಯೆ ಬಗೆಹರಿದ ಮೇಲೆ
ಈಗ ಅವುಗಳನ್ನು ಮೆಲುಕು ಹಾಕುವುದು ಸುಲಭ.ಆದರೆ ಬದುಕಿನ
ಪ್ರತಿ ಕ್ಷಣ ಸಮಸ್ಯೆ ಆದ ಅವರ ಬದುಕಿನ ಅನುಭವಗಳು ಸುಲಭಕ್ಕೆ
ಪಚನವಾಗುವುದಿಲ್ಲ...
              ದಿನಾ ಒಂದಷ್ಟು ಓದುತ್ತೇನೆ.
ಅದು ನಮ್ಮನ್ನು ನಮ್ಮವರೊಂದಿಗೆ
ಬೆಸೆಯುತ್ತದೆ... ಧನ್ಯವಾದಗಳು...

Saturday, 5 April 2025

ಚೈತ್ರಗೌರಿ ತುಂಬ ಸ್ನೇಹಪರಳು..

ಚೈತ್ರ ಗೌರಿ ತುಂಬಾ ಸ್ನೇಹಪರಳು... ಶ್ರಾವಣದ ಗೌರಿಗಿದ್ದಂತೆ ಅತಿ ಮಡಿಯ ಭಾವನೆಗಳಿಲ್ಲ...ಜನಪರ.. ಬೇಕಾದಷ್ಟು ಜನ ಸೇರಬಹುದು. ಹಾಡು- ಹಸೆ- ಆಟ- ನೋಟಗಳ ಸಂಭ್ರಮ ಸಾಕೆನಿಸು ವಷ್ಟು... ಸೇರಿದವರು ಬಯಸಿದಷ್ಟು...

             ‌‌ಇದೆಲ್ಲ ನಮ್ಮ ಮನೆಯಲ್ಲೂ
ಆಗಲೇಬೇಕು.ಬೆಂಗಳೂರಿನಲ್ಲಿಯಂತೂ ಮೂವತ್ತಕ್ಕೂ ಹೆಚ್ಚು ಜನ ಸೇರಿ
ಒಂದು ಸಾಂಸ್ಕ್ರತಿಕ ‌ಮೇಳವೇ ಅನ್ನುವಂತೆ ಆಗುತ್ತಿತ್ತು.

   ‌‌‌ ‌           ಅಮೇರಿಕಾದಲ್ಲಿಯೂ ವೈಜೂಳ ಗೆಳತಿಯರ ಗುಂಪಿದೆ.ಯಾರ ಮನೆಯಲ್ಲಿ ಏನೇ ಇರಲಿ ಎಲ್ಲರಿಗೂ
ಔತಣ- ಉಪಚಾರ- ಹಾಡು- ಹಸೆ
ಇತ್ಯಾದಿ.ಈ ಸಲ ಗೌರಿ ಹಬ್ಬ working day ಬಂದದ್ದರಿಂದ ತದಿಗೆಗೆ ಮನೆಯ/ ಕೌಟುಂಬಿಕವಾಗಿ, ವಾರದ ಕೊನೆಗೆ ಸಾಂಘಿಕ ಆಚರಣೆಗಳಾದವು...
     ‌‌    ಇಂದು ಇದೀಗ ಅದರದೊಂದು
ಝಲಕ್...
    
 

Tuesday, 1 April 2025

ಇವಳು ನಮ್ಮ ಮನೆಯ ' ಚೈತ್ರಗೌರಿ'...
ಒಟ್ಟು ಏಳು ಗೊಂಬೆಗಳ set.
ಮುಖ್ಯ ಗೌರಿ/ಇಬ್ಬರು ಜೋಕಾಲಿ
ತೂಗುವವರು/ಇಬ್ಬರು ಗೌರಿಗೆ ಚಾಮರ ಸೇವೆಗಾಗಿ/ ಇನ್ನಿಬ್ಬರು ಆರತಿ
ಮಾಡುವವರು...ಒಬ್ಬರ ಅಲಂಕಾರ/ ಸೀರೆ/ ಕೇಶ ವಿನ್ಯಾಸ ಇನ್ನೊಬ್ಬರಿಗಿಲ್ಲ- ಎಲ್ಲರದೂ ಬೇರೆ ಬೇರೆ.
             ಚೈತ್ರಮಾಸದ ತದಿಗಿಯ ದಿನ ಸ್ಥಾಪಿತಳಾಗಿ ಒಂದು ತಿಂಗಳು- ಅಂದರೆ
ಅಕ್ಷಯ ತೃತೀಯದ ವರೆಗೆ ಅವಳ ಸಡಗರ...ಪ್ರತಿದಿನ ಪೂಜೆ- ಆರತಿ/ 
ಶುಕ್ರವಾರ- ಮಂಗಳವಾರ ಮುತೈದೆ ಯರಿಗೆ ಅರಿಷಿಣ- ಕುಂಕುಮ/ ಪಾನಕ- ಕೋಸಂಬರಿ- ವೀಳ್ಯದ ಸಡಗರವಾಗ ಬೇಕು...
    ‌‌‌         ಕಾಲಕ್ಕೆ ಅಷ್ಟಿಷ್ಟು ಬದಲಾವ ಣೆಗಳೊಂದಿಗೆ ಎಲ್ಲವೂ ಸಾಂಗವಾಗಿ ನಡೆದಿದೆ.ಈಗೆರಡು ವರ್ಷಗಳಿಂದ ನಮ್ಮ ಗೌರಿಯೂ NRI ಆಗಿದ್ದಾಳೆ... ಸಧ್ಯ ಅವಳು ' ಅಮೇರಿಕಾ'ದ ವಾಸಿ...
ನನ್ನ ಸೊಸೆ ವೈಜೂ ಸಹ ಈ ಹಬ್ಬವನ್ನು
ಮನಸ್ಸಿನಿಂದ/ಹೆಚ್ಚು ಆಸ್ಥೆಯಿಂದ/ ಹೆಚ್ಚು ಸಂಭ್ರಮದಲ್ಲಿ ಆಚರಿಸುತ್ತಾಳೆ...
ನಮಗೆ ತಕ್ಷಣ ಫೋಟೋಗಳು/ ವಿಡಿಯೋಗಳು ಬಂದು ತಲುಪುತ್ತವೆ...
             ‌ ‌‌ಇಂದು ಬೆಳಿಗ್ಗೆ ಕಣ್ಣು ತೆಗೆಯುವುದಕ್ಕೆ ಮುಂಚೆಯೇ ನನ್ನ WA ಪೇಜಿನಲ್ಲಿ ಸನ್ನದ್ಧಳಾಗಿದ್ದಾಳೆ...

1) Go to google photos 2) click on collection near the bottom of the screen 3)click on people