ನಮಗೆ ನೋವು ಆಗುವುದು ಖಿನ್ನತೆಯಿಂದಲ್ಲ.ಏನಾಗುತ್ತಿರುತ್ತದೋ
ಅದನ್ನೆಲ್ಲ ಹೇಳಿಕೊಳ್ಳಲಾಗುವುದಿಲ್ಲ. ತುಟಿಯ ವರೆಗೂ ಬಂದ ಮಾತುಗಳು ಶಬ್ದಗಳಲ್ಲಿ ಬರಲು ಸೋಲುತ್ತವೆ.ಆಗ ಇನ್ನೂ ನೋವಾಗುತ್ತದೆ.ಎಷ್ಟೋ ಮಾತುಗಳನ್ನು ಹೇಳಬಹುದಾದರೂ ಹೇಳಲಾಗುವುದಿಲ್ಲ.ಅವುಗಳಲ್ಲಿ ಸಿಟ್ಟು ಇರಬಹುದು,ದೂರುಗಳು ಇರಬಹುದು,
ಸಂಕೋಚವೂ ಇರಬಹುದು...ಅದಕ್ಕೆ ವೇಳೆಯೂ ಸಿಗದಿಬಹುದು,ಧೈರ್ಯ
ವಿಲ್ಲದೆಯೂ ಇರಬಹುದು...ಹೇಳಿದರೆ ಸಂಬಂಧ ಹಳಸುವ ಭಯವೂ ಕಾಡಬಹುದು. ಅದಕ್ಕಾಗಿಯೇ ಅನೇಕ ವಿಷಯಗಳನ್ನು ಮುಚ್ಚಿಡುತ್ತೇವೆ.ಕಳಿಸಿದ ಮೆಸೇಜುಗಳ ನ್ನು delete ಮಾಡುತ್ತೇವೆ. ಯಾರಿಗೂ ಹೇಳದಿದ್ದರೇ ಚನ್ನ ಎಂದು ಅನಿಸತೊಡಗುತ್ತದೆ.ಆದರೂ ಆ ಮಾತುಗಳು ಮತ್ತೆ ಮತ್ತೆ ಅಲ್ಲಿಲ್ಲಿ ಸುತ್ತಾಡಿ ಎದೆ ಹೊಕ್ಕು ಬಿಡುತ್ತವೆ.ಅವು ಅಲ್ಲಿಯೇ ಇದ್ದು ರಾತ್ರಿಯ ವೇಳೆ/ ಒಬ್ಬರೇ ಪಯಣಿಸುವಾಗ/ ಏನೋ ವಿಷಯದ ಚರ್ಚೆ ನಡೆದಾಗ ಬಂದು ಬಾಧಿಸುತ್ತವೆ. ಆಗಲೇ ಹೇಳಿಬಿಡಬೇಕಿತ್ತು/ಮನಸ್ಸು ನಿರಾಳವಾಗುತ್ತಿತ್ತು ಅನಿಸುತ್ತದೆ.ಆದರೆ ಆಗ ಪರಿಹಾರ ಸುಲಭವಾಗಿರುವುದಿಲ್ಲ. ನಾವು ತುಸು ಜಾಣರಾಗುತ್ತೇವೆ.ವಿಚಾರ ಮಾಡಿ ಮಾಡಿ ಮಾಡುತ್ತೇವೆ, ನೋಡು ತ್ತೇವೆ.ಆದರೆ ಹಲವು ಮಾತುಗಳು ವಿಚಾರಕ್ಕೆ ಸಿಗದೇ ಮನಸ್ಸಿನಲ್ಲೇ ಉಳಿಯುತ್ತವೆ.ಹಾಗೆ ಉಳಿದ ಮಾತುಗಳು ಕೆಲಸಮಯ ಮರೆಯಬಹುದು,ಆದರೆ ನಮ್ಮನ್ನು ಬಿಟ್ಟು ಹೋಗುವುದಿಲ್ಲ.ಅಂಥವುಗಳು ಪೂರ್ತಿಯಾಗದೇ ಅರ್ಧದಲ್ಲೇ ಉಳಿದುಬಿಡುತ್ತವೆ.ಬೇಕಾಗಿಯೋ/ ಬೇಡದೆಯೋ ನಮಗೆ ಭಾರವಾಗಿ... ಎದೆಯ ಒಳಗಡೆ...ಆದರೂ ಅದು ತಪ್ಪಲ್ಲ...ಏಕೆಂದರೆ ಕೆಲವೊಮ್ಮೆ ಮನಸ್ಸು ಮುಚ್ಚಿಡುವುದೂ ಒಂದು ರೀತಿಯ ಪ್ರೀತಿಯ ಕಾರಣಕ್ಕೇ...ಅದು ಸುಪ್ತವಾದ ಬಹಿರಂಗವಾಗದ ಪ್ರೀತಿ...ಅಷ್ಟೇ...
No comments:
Post a Comment