ವಿರಾರದಲ್ಲಿ ರೈಲು ಹತ್ತಿ ಚರ್ಚಗೇಟ ಕಡೆ ಹೊರಟಿದ್ದೆ.ತುಂಬಾ ರಶ್ ಇತ್ತು..ಅಸ್ತವ್ಯಸ್ತವಾಗಿ ಬಟ್ಟೆ ತೊಟ್ಟ ಒಬ್ಬ ಬಡಕಲು ಹೆಣ್ಣುಮಗಳು ಅಷ್ಟೇ ಅಸ್ತವ್ಯಸ್ತ ಬಟ್ಟೆಯ ಗಂಟಿನೊಂದಿಗೆ ಗಾಡಿ ಏರಿದಳು.ತುಂಬ ಕೃಶಳಾಗಿದ್ದ ಅವಳಿಗೆ ಬೇಕಾದ ಜಾಗ ಹಿಡಿಯಷ್ಟು..ಅವಳನ್ನು ಕಂಡಕೂಡಲೇ ತಮ್ಮ ಕಾಲುಗಳನ್ನು ಆದಷ್ಟು ಪಸರಿಸಿ ಜಾಗವಿಲ್ಲ ಎಂಬುದನ್ನು ಎಲ್ಲ ಹೆಣ್ಣುಮಕ್ಕಳು ಪರ್ಯಾಯವಾಗಿ ತೋರಿಸಿದ್ದೂ ಆಯಿತು. ಸ್ವಲ್ಪು ಸಮಯ ಅವಳ ಅವತಾರ,ವೇಷ- ಭೂಷಣದ ಬಗ್ಗೆ ಇದೂ ಅದೂ ಹರಟುತ್ತ ಅವಳ ಬಗ್ಗೆ ವಿಲಕ್ಷಣವಾಗಿ ನೋಡುತ್ತಿದ್ದರೇ ಹೊರತು ಜಾಗ ಕೊಡುವ ವಿಚಾರ ಮಾಡಲೇಇಲ್ಲ..ಕೊನೆಗೆ ನಾನೇ ಸ್ವಲ್ಪ ಸರಿದು ಇದ್ದುದರಲ್ಲಿಯೇ ಸ್ವಲ್ಪು adjust ಮಾಡಿದೆ.ಅಲ್ಲಿ ಅವಳು ಕುಳಿತಮೇಲೆ ಆದ ಅನನುಕೂಲಕ್ಕೆ sorry ಹೇಳಿದೆ.ಇತರರ ಮಾತಿಗೆ ನೊಂದುಕೊಳ್ಳಬಾರದೆಂದು ಬಿನ್ನವಿಸಿದೆ. ಆಗ ಅವಳು ನಗುತ್ತ ಹೇಳಿದಳು," ಅವರಮಾತಿನಿಂದ ನನಗೇನೂ ಅನಿಸುವದಿಲ್ಲ..ಅವಕ್ಕೆ ಕೇವಲ ಒಂದು ತಾಸಿನ ಬೆಲೆ..ಅವರು ಕೆಳಗಿಳಿದು ಹೋದರೆ ಅವರ ಹಿಂದೆಯೇ ಹೋಗಿಬಿಡುತ್ತವೆ.ಅವರ ಅನಿಸಿಕೆ ನನ್ನ ಅರವತ್ತೈದು ವರುಷಗಳ ಬದುಕನ್ನು ಬದಲಾಯಿಸಲಾರದು..ಈಗಿನ ಈ ಕೃಶ ದೇಹದ ಹೆಣ್ಣುಮಗಳು ಹರಯದಲ್ಲಿ ರಾಜ್ಯಮಟ್ಟದ ಹಾಕಿ ಆಟಗಾರಳಾಗಿದ್ದಳೆಂದು ಅವರಿಗೆ ಗೊತ್ತಿಲ್ಲ.ಭಾರತದ ಫ್ರೆಂಚ ರಾಯಭಾರಿ ಕಚೇರಿಯಲ್ಲಿ ದುಭಾಷಿಯಾಗಿ ಕೆಲಸ ಮಾಡಿದಾಕೆ ಎಂದು ನನ್ನ ಮುಖದಿಂದ ಅವರಿಗೆ ಪಾಪ ತಿಳಿಯಲಾರದು.ಯೌವನದ ದಿನಗಳಲ್ಲಿ ನಾನೂ ಅರೆಕಾಲಿಕ model ಆಗಿ ಪ್ರಸಿದ್ಧಳಾಗಿದ್ದೆ ಎಂದು ಅವರಿಗೆ ಹೇಗೆ ತಾನೇ ಗೊತ್ತು ಪಡಿಸಲಿ? ಮೊದಲಸಲ ರೈಲಿನಲ್ಲಿ ಹತ್ತಿದ್ದೀಯಾ ಎಂದು ಕೇಳುವವರಿಗೆ ೧೯೪೦ ರಿಂದ ಮುಂಬೈ ಲೋಕಲ್ ಟ್ರೇನನಲ್ಲಿಯೇ ನನ್ನ ನಿಯಮಿತ ಪ್ರಯಾಣ ಅಂದರೆ ನಂಬಲು ಅವರಿಗೆ ಪುರಾವೆ ಎಲ್ಲಿದೆ ?ಗಂಡ,ಇದ್ದೊಬ್ಬ ಮಗಳನ್ನು ಅಕಾಲಿಕವಾಗಿ ಕಳೆದುಕೊಂಡು ಕಂಗಾಲಾದರೂ ಮನೆಯಲ್ಲಿ ಹತಾಶಳಾಗಿ ಕೂಡಲಾರದೇ ರಶ್ ನ ವೇಳೆಯಲ್ಲಿಯೇ ದಿನನಿತ್ಯ ವಿರಾರದಿಂದ ಬಾಂದ್ರಾಕ್ಕೆ ದಲಿತ ಮಕ್ಕಳಿಗೆ ಕಲಿಸಲೆಂದೇ ಪಯಣಿಸುತ್ತೇನೆ ಎಂಬುದು ಮನೆಯಲ್ಲಿರಲು ಇವಳಿಗೆ ಏನು ಧಾಡಿ ಎಂದು ಆಲೋಚಿಸಿಸುತ್ತಿರುವ ಈ ರೋಗಗ್ರಸ್ತ ಮನಸ್ಸುಗಳಿಗೆ ಹೇಗೆ ಅರ್ಥವಾಗಬೇಕು?ಮೇಲಿನ ಹೊದಿಕೆ ನೋಡಿ ಪುಸ್ತಕದ ಬೆಲೆ ಕಟ್ಟುವ ಇಂಥ ಜನಕ್ಕೆ ಅರ್ಥ ಮಾಡಿಸುವ ಅವಶ್ಯಕತೆಯಾದರೂ ಏನು"... ಸಾಕಲ್ಲಾ ಮುಖಕ್ಕೆ ನೇರದಾದ ಒಂದೇ ಒಂದು ಪೆಟ್ಟು.... ನಾನು ಇಳಿಯುವ station ಬಂದ ಕಾರಣ ಅವಳಿಗೆ bye ಹೇಳಿ ಕೆಳಗಿಳಿದೆ.. "ಅಂದಹಾಗೆ ನನ್ನ ಹೆಸರು IVY.. ನೀವು ಅದನ್ನು ಪುಸ್ತಕದಲ್ಲಿ ಓದಿರಲಿಕ್ಕಿಲ್ಲ..ಅದು ಒಂದು ಸಸ್ಯದ ಹೆಸರು.." ಕೆಲವೊಂದು ಕಲಿಸುವ ಉದ್ದೇಶವಿಟ್ಟುಕೊಂಡೇ ಆದೇವರು ಕೆಲವರನ್ನು ನಮ್ಮ ಬದುಕಿನಲ್ಲಿ ತರುತ್ತಾನೇನೋ..!!!!!!!! ಇದನ್ನೋದಿ ಧಾರವಾಡಿಗರಿಗೆ ' ಮಾಳಮಡ್ಡಿಯ ಹೇಮಾಮಾಲಿನಿ ನೆನಪಾದರದು ಕೇವಲ ಕಾಕತಾಳೀಯ ...ಅಷ್ಟೇ.. (WhatsAppನಲ್ಲಿ ಬಂದ ಇಂಗ್ಲಿಷ ಸಂದೇಶದ Transcreation...)
Thursday, 26 July 2018
Tuesday, 24 July 2018
ಹಾಗೇ ಸುಮ್ಮನೇ...
K.E.Board ನಿಂದ key- board ಗೆ....
ನಾನು ಹುಟ್ಟಿದ್ದು, ಬೆಳೆದದ್ದು ತಾಲೂಕೂ ಅಲ್ಲದ ಒಂದು ಪುಟ್ಟ ಹಳ್ಳಿ...ಶಾಲೆಯ ಪರಿಕಲ್ಪನೆಯೂ ಇಲ್ಲದ ಊರಲ್ಲಿ,ಬಯಲಿನಲ್ಲಿ ಹುಡುಗರೊಂದಿಗೆ ಹುಡುಗರಾಗಿ ಕಬಡ್ಡಿ,ಗಿಡಮಂಗನಾಟವಾಡೋ ವಯಸ್ಸಿನಲ್ಲಿ ಹಿಡಿದು, ಎಳೆದುಕೊಂಡು ಹೋಗಿ ಮಾಲಿಕರಿಲ್ಲದ ಮನೆಯಲ್ಲಿ ಶಾಲೆ ಪ್ರಾರಂಭಿಸಿ ನಾಕಕ್ಷರ ಕಲಿಸುತ್ತಿದ್ದ ದಿನಗಳು..ಆದರೆ ಗುರುಗಳು ಮಾತ್ರವಿದ್ವಾಂಸರು,ಶ್ರದ್ಧೆಯಿಂದ ಕಲಿಸುವವರು..ಹೀಗಾಗಿ ಆಸಕ್ತಿ ಬೆಳೆದರೂ ಅನುಕೂಲ ಅಷ್ಟಾಗಿ ಇರಲಿಲ್ಲ..ನಾವು A.B.C.D ಕಲಿತದ್ದು 8 ನೇ ವರ್ಗದಲ್ಲಿ...ಅದೂ ಒಂದೂ ತಪ್ಪದೇ ಕ್ರಮಬದ್ಧವಾಗಿ ಬರೆಯುವ ಒಂದೋ ,ಎರಡೋ ಹುಡುಗರು ಸಿಕ್ಕರೆ ಮಾಸ್ತರರ ಪುಣ್ಯ..skool,buk,pepar,ಮುಂತಾಗಿ ನಾವು ಅಂದಂತೆ spelling ಸೃಷ್ಟಿಸುವ ವಿಶೇಷ ಪರಿಜ್ಞಾನ...ಈಗ ಅದೇ ವಿದ್ಯೆ ಸರ್ವ ಸಮ್ಮತವಾಗಿದೆ.ಆ ಮಾತು ಬೇರೆ... ಇಷ್ಟೆಲ್ಲ ಹೇಳಲು ಕಾರಣವಿದೆ..ಕಲಿಕೆಒಂದು ಆಜನ್ಮ ಪ್ರಕ್ರಿಯೆ.ಸಾವಿನೊಂದಿಗೇನೇ ಮುಗಿಯುವಂಥದು...ಇತರರಿಗೆ ಹೆಚ್ಚು ತೊಂದರೆ ಕೊಡದೇ ಸಾಯೂವದೂ ಒಂದು ಕಲೆ.. ಸರ್ವಜ್ಞನೇ ಒಪ್ಪಿಕೊಂಡಿದ್ದಾನೆ; ತಾನು ಗರ್ವದಿಂದಾದವನಲ್ಲ..ಎಲ್ಲರಿಂದೊಂದು ನುಡಿಗಲಿತು ವಿದ್ಯೆಯ ಪರ್ವತವಾದವನು ಎಂದು... "ಕೆಲವಂ ಬಲ್ಲವರಿಂದ ಕಲಿತು...ಕೆಲವಂ ಶಾಸ್ತ್ರಂಗಳಿದೋದುತ...ಕೆಲವಂ ಮಾಳ್ಪವರಿಂದ ಕಂಡು...ಕೆಲವಂ ಸುಜ್ಞಾನದಿಂ ನೋಡುತ".. ಇವು ಸೋಮೇಶ್ವರ ಶತಕದಿಂದ ಹೆಕ್ಕಿ ತೆಗೆದ ಸಾಲುಗಳು...ವಿವಿಧ ಮೂಲಗಳಾಯ್ದು ಕಲಿತರೆ ಮಾತ್ರ ಜ್ಞಾನಸಂಪಾದನೆ ಸಾಧ್ಯ ಎಂಬುದು ತಾತ್ಪರ್ಯ..ಅದು ಹನಿ,ಹನಿ ಕೂಡಿ ಹಳ್ಳವಾಗುವ ಪ್ರಕ್ರಿಯೆ... ನಿಮಗೊಂದು ಗುಟ್ಟು ಹೇಳಬೇಕು. ಕಲಿಕೆಯ ಬಗ್ಗೆ 'ಹಾಗೇ ಸುಮ್ಮನೇ' ಬರೆಯಬೇಕಾಗಿತ್ತು..ಆದರೆ ' ಜ್ಞ' type ಮಾಡುವದೇ ಗೊತ್ತಿರಲಿಲ್ಲ. auto typing ನಲ್ಲಿ screen ಮೇಲೆ ಬಂದದ್ದನ್ನು press ಮಾಡಿ ಕೆಲಸ ಸಾಗಿಸುತ್ತಿದ್ದೆ..ನನ್ನ ಶಿಷ್ಯ ಸಂಮೋದ ವಾಡಪ್ಪಿ messenger ನಲ್ಲಿ ನನಗೆ class ನಡೆಸಿ practice ಮಾಡಿಸಿ ನನ್ನನ್ನು ಸರ್ವಜ್ಞಳನ್ನಾಗಿ ಮಾಡಿದ... ನನ್ನ ಮೊದಲ ಪುಸ್ತಕ _'ಚೌ _ ಚೌಪದಿ' ಗೆ ಶ್ರೀ ರಘು ಅಪಾರ ಅವರು , ಎರಡನೇ ಪುಸ್ತಕ ' ಆಣೆಕಲ್ಲುಗಳು' ಸಂಕಲನಕ್ಕೆ ವಿವಿಧ ಮೂಲಗಳ, ಭಾಷೆಗಳ ಲೇಖಕರು ಹಾಗೂ ಈಗ ಬರೆಯುತ್ತಿರುವ ,ಹಾಗೇ ಸುಮ್ಮನೇ' ಕಾಲಂಗೆ ಮನೋಹರ ನಾಯಕ ಅವರು,ಬೇರೆ ಬೇರೆ ಭಾಷೆಯ ಬರಹಗಾರರ ಕೃತಿಗಳೂ, fb ಯಲ್ಲಿ ಇತರ ಭಾಷೆಗಳ post ಗಳೂ ,ಮುಂತಾದ ಹತ್ತು ಹಲವಾರು ಆಕರಗಳ ಛಾಪು ಇದೆ..ಮುಕ್ಕಾಲು ಭಾಗ ಮಿಕ್ಕಿ ಸ್ವಂತವೂ ಇವೆ...ಮೊದಲೇ ಈ ಮಾತನ್ನು ಬಿಚ್ಚಿಟ್ಟು, ಲೇಖಕರು ಪರಿಚಯದವರಿದ್ದರೆ ಅವರ ಸಂಪೂರ್ಣ ಒಪ್ಪಿಗೆ ಪಡೆದೇ ಬರೆಯುತ್ತೇನೆ..ಮೂಲ ಗೊತ್ತಿಲ್ಲದಿದ್ದರೆ, farword ಆದ ಮೆಸೇಜ ಆಗಿದ್ದರೆ ಅದರ ಅನುವಾದ ಮಾಡಿ ' ಆಧಾರ' ಎಂದು ಸ್ಪಷ್ಟಪಡಿಸುತ್ತೇನೆ..ಮುಂಬೈಯ 'ಶಂಖ' studio ದ ಮಾಲಿಕರಾದ ಲೇಖಕ,ಕವಿ,Good morning Sunday ಅಂಕಣವನ್ನು ಹತ್ತು ವರ್ಷಗಳಿಂದ ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ ಶ್ರೀ ಮನೋಹರ ನಾಯಕ ಅವರು translation ಅನ್ನುವ ಬದಲಾಗಿ Transcreation ಎಂಬ ಚಂದದ ಹೆಸರಿನಲ್ಲಿ ಜಾಲತಾಣವನ್ನೇ ಸೃಷ್ಟಿಸಿ ನಮ್ಮಂಥ ಅಪಕ್ವ ಬರಹಗಾರರಿಗೂ ವೇದಿಕೆ ಒದಗಿಸಿದ್ದಾರೆ.... ಹೀಗಾಗಿ ಯಾವುದೇ post ನಮಗೆ like ಆದರೂ ಸಂಬಂಧಿಸಿದವರನ್ನು ಸಂಪರ್ಕಿಸಿ repost ಮಾಡುವದು ಅಪರಾಧವಲ್ಲ.ಎಲ್ಲರಿಗೂ ಎಲ್ಲ ಭಾಷೆ ಗೊತ್ತಿರುವದಿಲ್ಲ.ಅದೊಂದೇ ಕಾರಣಕ್ಕೆ ಉತ್ತಮವಾದದ್ದರಿಂದ ಯಾರೂ ವಂಚಿತರಾಗಬಾರದು. ಓದಲು ಉಚಿತವಾದದ್ದೆಲ್ಲ ಎಲ್ಲರಿಗೂ ತಲುಪಬೇಕೆಂಬುದಷ್ಟೇ ಉದ್ದೇಶ...ಒಂದುವೇಳೆ ಲೇಖಕರು ಪರಿಚಯವಿಲ್ಲದಿದ್ದರೆ _' ನನ್ನದಲ್ಲ'ನಾಮೆಚ್ಚಿದ್ದು' ಆಧಾರ ಅಂತ ಕಾಣಿಸಿದರೂ ಸಾಕು...ಎಷ್ಟೋ ಸಮಸ್ಯೆಗಳು ಪರಿಹಾರವಾಗುತ್ತವೆ.. ಶುದ್ಧ ಗಾಳಿ ಯಾವ ಕಡೆಯಿಂದಲೂ ಬೀಸಲಿ..ಉಸಿರಾಟ ಮುಖ್ಯ..ಜ್ಞಾನ ಯಾವುದೇ ಮೂಲೆಯಿಂದ ಬರಲಿ ಸ್ವಾಗತಾರ್ಹ.. ಹನಿಹನಿಗಳು ಕೂಡಿ ಹಳ್ಳವಾಗಲಿ...ತೆನೆ ತೆನೆ ಸೇರಿ ರಾಶಿಯಾಗಲಿ...

Labels:Haage-summane
Haage-summane
Monday, 23 July 2018
ಹಾಗೇ ಸುಮ್ಮನೇ....
ನಾವು ಜೀವನದಲ್ಲಿ ಇಷ್ಟಪಟ್ಟು ಅತೀವ ಆಸಕ್ತಿಯಿಂದ ಅನೇಕ ಕೆಲಸಗಳನ್ನು ಪ್ರಾರಂಭಿಸುತ್ತೇವೆ...ಅದರ ಯಶಸ್ಸಿಗಾಗಿ ತನು,ಮನ,ಧನ ಎಲ್ಲವನ್ನೂ ವ್ಯಯಿಸಿ ಒಂದು ಘಟ್ಟಕ್ಕೆಮುಟ್ಟಿಸಿರುತ್ತೇವೆ.ಅಂದುಕೊಂಡ ಉದ್ದೇಶ ನೂರಕ್ಕೆ ನೂರು ಗೆಲುವೂ ಸಾಧಿಸಿರುತ್ತದೆ... ಹೇಗೋ ಒಂದುದಿನ ' ಸಾಕು' ಅನಿಸಿ ಬಿಡುತ್ತದೆ.ಬೇರೇನಾದರೂ ಮಾಡುವಾ ಎಂಬ ಉದ್ದೇಶವಿರಬಹುದು..ಆ ಕೆಲಸದ ಬಗ್ಗೆ ತಾತ್ಕಾಲಿಕ ಏಕತಾನತೆ ಕಾರಣವಿರಬಹುದು.ಸಹಜ break ನಹಂಬಲವಿದ್ದು ' ಮತ್ತೆ ನೋಡೋಣ' ಏನಾದರೂ ಹೊಸದನ್ನು ಪ್ರಯತ್ನಿಸುವಾ ಎಂಬ ಮಾನವ ಸಹಜ ಸ್ವಭಾವವೂ ಕಾರಣಗಳಲ್ಲಿ ಒಂದಾಗಿರಬಹುದು..ಕಾರಣವೇನೇ ಇರಲಿ ಪರಿಣಾಮ ಒಂದೇ.. ಕೆಲಸ ಕೆಲಕಾಲ ನಿಲ್ಲಿಸುವದೇ ಆದರೆ.... ಖಂಡಿತ ಚಿಂತಿಸಬೇಕಿಲ್ಲ...ಬದುಕು ನಮಗೆ ಬೇಕಾದ್ದುಕೊಡುತ್ತದೆ...ಸ್ವೀಕರಿಸಲು ನಾವು ಸಾಮರ್ಥ್ಯ ಬೆಳೆಸಿಕೊಳ್ಳಬೇಕು...ತೆಗೆದುಕೊಳ್ಳಲು ತೆರೆದುಕೊಳ್ಳಬೇಕು..ಯಾವುದೋ ಒಂದನ್ನು ಬಿಟ್ಟುಕೊಡಲು ಧೈರ್ಯಮಾಡಿದಾಗ ಮಾತ್ರ ಇನ್ನೊಂದಕ್ಕೆ 'Hello' ಹೇಳಬಲ್ಲೆವು ನಾವು... ಶುರುವಾದುದು ಒಂದಿಲ್ಲ ಒಂದು ದಿನ ಮುಗಿಯಲೇ ಬೇಕು..ಇಲ್ಲದಿದ್ದರೆ ಹೊಸದು ಹುಟ್ಟೀತು ಹೇಗೆ? ಎಲ್ಲ ಒಳ್ಳೆಯದಕ್ಕೆ ಅಂದಾಗ ಕೆಲವೊಮ್ಮೆ ಕೆಲವನ್ನು ಹಿಂದಿಕ್ಕಲೇ ಬೇಕಾಗುವದು ಅನಿವಾರ್ಯವಷ್ಟೇ ಅಲ್ಲ...ಅತ್ಯವಶ್ಯಕವೂ ಹೌದು..ಅಂಥದೊಂದು ತಿರುವು ಸಮರ್ಥನೀಯ.ಅಲ್ಲದೇಒಂದು ಒಳ್ಳೆಯ,ಒಲವಿನ,ಸಂಗತಿ ' ಮುಕ್ತಾಯ'ವಾ ದಾಗಲೇ ಅದು ' ನೆನಪಿನ ಅಮೂಲ್ಯ ಖಜಾನೆ' ಯಲ್ಲಿ ಸದಾಕಾಲ ಬಂದಿಯಾಗಲು ಸಾಧ್ಯ..ನಂತರವೂ ಅದನ್ನು ನೆನೆನೆನೆದು ಸುಖಿಸಲು ಸಾಧ್ಯ ....ಅಷ್ಟಕ್ಕೂ ನಾವು ಪುಸ್ತಕವನ್ನೆಲ್ಲಿ ಮುಚ್ಚಿಡುತ್ತಿದ್ದೇವೆ...ಕೇವಲ ಪುಟ ತಿರುವಿ ಹಾಕುತ್ತೇವೆ ಅಷ್ಟೇ...ಅದಕ್ಕೆಂದೇ ಹೇಳುತ್ತಿರುವದು...ಯಾವಾಗಲೂ ಏನೋ ಒಂದು 'ಮುಗಿದುಹೋಯಿತೆಂಬ' ಭಾವ ಬೇಡ..ಅದು ನಮ್ಮ ಬದುಕಿನಲ್ಲಿ ಘಟಿಸಿತಲ್ಲ ಎಂದೇ ಆನಂದ ಪಡೋಣ..ಆಶಾವಾದಹೇಳುವದೂ ಇದನ್ನೇ..ಉತ್ತಮವಾದುದು ಕೊನೆಗೊಂಡರೆ ಅತ್ಯುತ್ತಮ ವಾದದ್ದೇನೋ ನಮಗಾಗಿ ಕಾಯುತ್ತಿದೆ ಎಂದೇ ಅರ್ಥ..ಆದ್ದರಿಂದ ಯಾವುದಕ್ಕೂ ಹಳಹಳಿಸುವ ಕಾರಣವಿಲ್ಲ..( ಆಧಾರ-ಮನೋಹರ ನಾಯಕರ ಲೇಖನ)
Labels:Haage-summane
Haage-summane
Monday, 16 July 2018
ಹಾಗೆ ಸುಮ್ಮನೆ...
ಈ ಬದುಕೂ ತುಂಬ ವಿಚಿತ್ರ..ಎಷ್ಟೋ ಸಲ ಕಾರಣವಿಲ್ಲದೆ ಎಲ್ಲವೂ ಮುಗಿದು ಹೋದ ಭಾವ ಕಾಡುತ್ತದೆ.. ಯಾವುದರಲ್ಲಿಯೂ ಉತ್ಸಾಹ ಉಳಿಯುವದಿಲ್ಲ..ಸಂಪೂರ್ಣ ಕುಗ್ಗಿಹೋಗುತ್ತೇವೆ..ಇದು ಎಂಥವರನ್ನೂ ಬಿಟ್ಟಿಲ್ಲ.
ಒಮ್ಮೊಮ್ಮೆ ನಾವು ಕಾರಣವಿಲ್ಲದೇ ಸೋತು ಕೈಯತ್ತಿ ಬಿಡುತ್ತೇವೆ...ಶರಣಾಗುತ್ತೇವೆ.ಶಸ್ರಾಸ್ತ್ರ ಚಲ್ಲಿಬಿಡುತ್ತೇವೆ..ಏನು ಮಾಡಲೂ ಉತ್ಸಾಹ ಬರುವದೇ ಇಲ್ಲ...ಕೆಲಸಗಳನ್ನು ತಪ್ಪಿಸಿಕೊಳ್ಳುವದು,ಕಾರಣವಿಲ್ಲದೇ ಮುಂದೂಡುವದು ಅನಿವಾರ್ಯ ವಾಗುತ್ತದೆ..
ಆದರೆ ನೆನಪಿರಲಿ...ಇದೇ ಕೊನೆಯಲ್ಲ.. ಕಾರ್ಯಮಧ್ಯದ ಚಿಕ್ಕಚಿಕ್ಕ ವಿಶ್ರಾಂತಿಗಳು
ಗುರಿಗಳನ್ನು ಹೆಚ್ಚು ಗಟ್ಟಿಗೊಳಿಸುತ್ತವೆ..ಮುಂದಿನ ಹಾದಿಯನ್ನು ಸುಗಮಗೊಳಿಸುತ್ತವೆ..
ಕಾರಣ ಯಾವುದಾದರೂ ಕಾರಣಕ್ಕೆ ಜೀವನದಲ್ಲಿ ' ಖಾಲಿತನ ಕಾಡಿದರೆ ಖೇದಗೊಳ್ಳಬೇಕಿಲ್ಲ...ಹತಾಶರಾಗಬೇಕಿಲ್ಲ..ಖಾಲಿತನಕ್ಕೂ ತನ್ನದೇ ಆದ ತೂಕವಿದೆ...ಅದು ಅರ್ಥಪೂರ್ಣವೂ ಆಗಿದೆ..
ಅಂತೆಯೇ ಬದುಕಿಗೊಂದು ಬಿನ್ನಹವಿರಲಿ...ಅದು ತನ್ನ ಕಷ್ಟ ನಷ್ಟ,ಅವಶ್ಯಕತೆಗಳನ್ನು ತಾನೇ ಸರಿದೂಗಿಸುತ್ತ ನಿರಂತರ ಚಲನೆಯಲ್ಲಿರಲಿ..ಅದು ಬತ್ತಲಾಗದಂತೆ ಚಂದಗೊಳಿಸುತ್ತಲೇ ಇರೋಣ..ಖಾಲಿ ಅನಿಸಿದರೆ ತುಂಬೋಣ..
ಇದರಲ್ಲಿ ಏನೂ ತಪ್ಪಿಲ್ಲ ..ಹಿಮ್ಮೆಟ್ಟುವದು ಹೇಡಿತನವೇನೂ ಅಲ್ಲ.
ದಣಿವಿನ ಅರ್ಥಸಂಪೂರ್ಣ ಬಿಟ್ಟುಕೊಡುವದಲ್ಲ..ಅದು ಮನಸ್ಸು ಸ್ಥಿರವಾಗಿಲ್ಲದ್ದರ ನಿಮಿತ್ತವಾಗಿರಲೂ ಬಹುದು.ಒಂದು ದೊಡ್ಡ ಜಿಗಿತಕ್ಕೆ ಮೊದಲಿಗೆ ಹಾಕುವ ಒಂದೆರಡು ಅವಶ್ಯಕ ಹೆಜ್ಜೆಗಳಿರಬಹುದು.
ಅಂತೆಯೇ ಬದುಕಿನ ಚಿಕ್ಕ ಪುಟ್ಟ ಅಡ್ಡಿಗಳು ನಮಗೆ ಮುಂದಿನ ಜಿಗಿತಕ್ಕೆ ' ಚಿಮ್ಮು ಹಲಿಗೆ'ಗಳಾಗಲಿ...

(ಮನೋಹರ ನಾಯಕರ ಲೇಖನದ ಆಧಾರಿತ)
Labels:Haage-summane
Haage-summane
Thursday, 12 July 2018
ಹಾಗೇ ಸುಮ್ಮನೇ....
ಇತ್ತೀಚೆಗೆ ಮನೆಯಲ್ಲಿ ಅಡುಗೆ ಮಾಡುವದು ತುಂಬಾಕಡಿಮೆಯಾಗಿದೆ...ಹೆಣ್ಣುಮಕ್ಕಳೂ ಸಹ ದುಡಿಯುತ್ತಿರುವದರಿಂದ ಹೊರಗಿನ ಊಟವೇ ಪ್ರಧಾನವೆನಿಸುತ್ತಿದೆ...ನಮ್ಮ ಹಿರಿಯರಿಗೆ ಹೊರ ಊಟದ concept ಇರಲೇಇಲ್ಲ..ಅಡುಗೆ ಮಾಡುವದೂ ಒಂದು ಕಲೆ..ಅದೊಂದು ಪೂಜೆ, ಧ್ಯಾನ..ಅದಕ್ಕೇ ಅದಕ್ಕೆ ' ಪ್ರಸಾದವೆಂಬ ಹೆಸರೂ ಇದೆ...ಅದನ್ನರಿತು ಮಾಡುವ ಅಡುಗೆ ಉಣ್ಣುವವರಿಗೆ ಸಾತ್ವಿಕ ಗುಣ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ." ಶಿವಾನಿಯವರ ಮಾತು ಹಾಗೆಯೇ ಸಾಗಿತ್ತು..ಅವರ ಮಾತುಗಳು ಮುಗಿದರೂ ಅವರೆತ್ತಿದ ವಿಷಯದ ಗುಂಗು ನನ್ನನ್ನು ಬಿಡಲೇಯಿಲ್ಲ...ಅದೇ ಧಾಟಿಯಲ್ಲಿ ಸಾಗಿದಾಗ ನನಗೆ ಅನಿಸಿದ್ದಿಷ್ಟು...ಈಗ ಎಲ್ಲರ ಮನೆಯಲ್ಲೂ ಅಡುಗೆ ಮಾಡುವವರೇ ಇರುವದು ಜಾಸ್ತಿ...ಹಣಕ್ಕೆ ಬೇಯಿಸಿಟ್ಟು ಹೋದದ್ದರಲ್ಲಿ ಮನೆಯಡಿಗೆಯ ಆರೋಗ್ಯ,ಪ್ರೀತಿ,ಉಳಿತಾಯ,ರುಚಿ,ಸ್ವಚ್ಛತೆಯಾವುದೂ ಇರುವದಿಲ್ಲ...ವಿಶೇಷ ಸಂದರ್ಭಗಳಲ್ಲಿ ಅಡಿಗೆ ಮಾಡಿಸುವದು ಅಡ್ಡಿಯಿಲ್ಲ.ಸಮಯಾಭಾವದ ನೆವವೊಡ್ಡಿ ದಿನಾಲೂ ಹೊರಗೆ ಊಟಮಾಡುವದು ಅಥವಾ ಯಾರೋ, ಯಾವಾಗಲೋ ಬೇಯಿಸಿಟ್ಟದ್ದು ದಿನಾಲೂ ತಿನ್ನುವದೆಂದರೆ ಅಪಾಯ ಆಹ್ವಾನಿಸಿ ದಂತೆ... ಈಗಿರುವ ಪರಿಸ್ಥಿತಿ ನೋಡಿದರೆ _ kitchenless homes ಬರಬಹುದು...ಮಕ್ಕಳಿಗೆ ಅಡಿಗೆ ಏನೋ ನಮ್ಮದಲ್ಲದ ಪರಕೀಯ ವ್ಯವಸ್ಥೆ ಯನಿಸುವ ದಿನಗಳು ದೂರವಿಲ್ಲ...ನಾನು ಅಮೆರಿಕೆಗೆ ಹೋದಾಗ ಊಟಕ್ಕೆ ಹೋದ ಹೋಟೆಲ್ ಹೆಸರು clay oven...( ಮಣ್ಣಿನ ಒಲೆ) ನೈಜವಾಗಿ ಕಳೆದುಕೊಂಡದ್ದನ್ನು ಹೆಸರಿನಲ್ಲಿ ಹುಡುಕುವ ಹವಣಿಕೆ..' ಮನಪಸಂದ್'' ರಸೋಯಿ' 'ರಂಗೋಲಿ' ,ಹಳ್ಳಿಮನೆ'ಇಂಥ ಭಾವನಾತ್ಮಕ ಹೆಸರಿನಡಿಯಲ್ಲಿ ' ನಮ್ಮತನ' ದ ಹುಡುಕಾಟ... ಬಾಲವಿಹಾರಕ್ಕೆ ' ಅಜ್ಜಿಮನೆ' ಅಂದು ಖುಶಿಪಟ್ಟಂತೆ... ಯಾವುದೂ ತಪ್ಪಲ್ಲ...ಅನಿವಾರ್ಯವೆಂದಾದಲ್ಲಿ ಕೆಲಮಟ್ಟಿಗೆ ಅಪೇಕ್ಷಣೀಯವೂ ಹೌದು.ಅಷ್ಟೇ ಏಕೆ? ಕೆಲವೊಂದು ಪರ್ಯಾಯ ವ್ಯವಸ್ಥೆಗಳು ಅಸಲನ್ನು ಮೀರಿಸಿ ಉತ್ತಮವಾಗಿರಲೂ ಬಹುದು...ಹಾಗೆಂದು ಮೂಲ ವ್ಯವಸ್ಥೆ ಮರೆತು ಅದಕ್ಕೇಅಂಟಿಕೊಳ್ಳುವದು ಅವಶ್ಯಕವೂ ಇರುವದಿಲ್ಲ..ಅನಿವಾರ್ಯವೂ ಇರುವದಿಲ್ಲ ...ಅತಿಯಾದರೆ ಅಮೃತವೂ ವಿಷವಂತೆ ..ಹಾಗಾಗದೆ ನಡುವಿನ golden mid point ನ ಆಯ್ಕೆ ಮಾಡುವದು ಪರ್ಯಾಯವೆನಿಸಬಹುದು.. ಹಾಗೇ fb ತಿರುವಿಹಾಕುವಾಗ ಸಾಧ್ವಿ ಶಿವಾನಿಯವರ ಭಾಷಣ ಕೇಳಿದಾಗ ತಲೆಯಲ್ಲಿ ಹಾದುಹೋದ ವಿಚಾರಗಳಿವು..ನನ್ನವು..ಕೇವಲ ನನ್ನ ದೃಷ್ಟಿಯಿಂದ...
Labels:Haage-summane
Haage-summane
Saturday, 7 July 2018
ಹಾಗೇ ಸುಮ್ಮನೇ...
ನಾವು ಈ ಮನೆಗೆ ಬಂದು ಮೂರು ವರ್ಷಗಳಾಗಿದೆ...ಗಡಿಬಿಡಿಯಲ್ಲಿ shift ಆದ ಕಾರಣ ಬಾಕಿ ಇದ್ದ ಕೆಲ ಚಿಕ್ಕ ಪುಟ್ಟ ಕೆಲಸಗಳಾಗಬೇಕಿತ್ತು..Association ನವರು ಒಬ್ಬನನ್ನು ಕರೆದುತಂದು ಇವನು ನಿಮ್ಮೆಲ್ಲ ಕೆಲಸ ಮಾಡುತ್ತಾನೆ ಎಂದು ಪರಿಚಯಿಸಿ ಹೊರಟುಹೋದರು... ಅವನನ್ನು ನೋಡಿದಾಗ ನನಗೆ ತಟ್ಟನೇ ರವೀಂದ್ರನಾಥ ಟಾಗೋರರ ಕಾಬೂಲಿವಾಲಾ ನೆನಪಾದ...ದೊಡ್ಡ ಆಕಾರ,ಸಡಿಲು ಬಟ್ಟೆ,ಮುಖ ಕಾಣದಷ್ಟು ಗಡ್ಡ, ಮೀಸೆ..ಸುಣ್ಣ ಬಣ್ಣದ ಕೆಲಸವಾದ್ದರಿಂದ ಆಗಲೇ ಸಾಕಷ್ಟು ಬಣ್ಣ ಬಣ್ಣಗಳಿಂದ ಮೂಲ ಬಣ್ಣವೇ ತಿಳಿಯದಂಥ ಬಟ್ಟೆ,ಮಿಶ್ರ ಬಣ್ಣದ ಪೆಂಡಿ ಪೆಂಡಿ ತಲೆಕೂದಲು...ನೋಡಿದಕೂಡಲೇ ಮನೆಯಲ್ಲಿ ಒಬ್ಬಳೇಇದ್ದ ನಾನು 'ಮಿನಿ'ಯ ತಾಯಿ ಕಾಬೂಲಿವಾಲಾನ ದರ್ಶನವಾದಾಗ ಬೆಚ್ಚಿದಂತೆ ಬೆಚ್ಚಿದೆ... ನನ್ನ ಒಳತೋಟಿ ಅರಿಯದ ಕೆಲಸದವ ಮೇಲೆ ಹೋಗಿ ಕೆಲಸ ಪ್ರಾರಂಭಿಸಿದ..ಸ್ವಲ್ಪವೂ ಸದ್ದಿಲ್ಲದೇ ಅರ್ಧ ದಿನ ಕಳೆದು ಅವನು ಊಟದ ಸಮಯದಲ್ಲಿ ಹೊರಟು ಹೋದ ಮೇಲೆಯೇ ನಾನು ನಿರಾಳವಾಗಿ ಒಂದೆಡೆ ಕುಳಿತದ್ದು...ಈ ಮೊದಲೇ ಹೇಳಿದಂತೆ ನಾಲ್ಕೈದು ದಿನದ ಕೆಲಸವಿದ್ದು ಮರುದಿನವೇ ಮನೆ ಮಂದಿಯಲ್ಲ ಅನಿವಾರ್ಯವಾಗಿ ಹೊರಗೆ ಹೋಗಲೇಬೇಕಾದ, ಆದರೆ ಅವನಿಗೆ ರಜೆ ಹೇಳಲಾಗದ ಸಂದಿಗ್ಧ..ಕೆಲಸದವಳೂ ಮನೆಯಲ್ಲಿ ಒಬ್ಬಳೇ ಇರಲೇಬೇಕಾಗಿ ಬಂದ ಕಾರಣ ಹೆಚ್ಚು ಆತಂಕ...ಅವಳಿಗೆ ಯಾವುದೇ ಬಾಗಿಲು ಬಂದ್ ಮಾಡದೇ ಆದಷ್ಟೂ ಮೇಲಿನ ಕೆಲಸ ಬಿಟ್ಟು ಕೆಳಗಿನದೇ ಕೆಲಸ ಮಾಡಿಕೊಂಡಿರಲು ಹೇಳಿ ಮತ್ತೆ ಮತ್ತೆ ಎಚ್ಚರಿಸಿದ್ದಲ್ಲದೇ,ಪಕ್ಕದ ಮನೆಯವರಿಗೆ ಆಗಾಗ ಸಾಧ್ಯವಾದರೆ ಬಂದು ಐದು- ಹತ್ತು ನಿಮಿಷ ಅವಳೊಡನೇ ಇದ್ದು ಹೋಗಲು ಬಿನ್ನವಿಸಿಕೊಂಡದ್ದೂ ಆಯಿತು...' ಕೋಣೆಯೊಳಗೆ ಅಜ್ಜಿ ಮಲಗಿದ್ದಾರೆ..ಹೆಚ್ಚು ಸಪ್ಪಳ ವಾಗುವದು ಬೇಡ ' ಎಂದು ಅವನಿಗೆ ಒಂದು ಪುಟ್ಟ ಸುಳ್ಳು ಹೇಳಲೂ ಸೂಚಿಸಲಾಯಿತು.ನಮ್ಮ ದೈವ .ಕೆಲಸದವಳೂ ಎಲ್ಲದ್ಕೂ ಹೂಗುಟ್ಟಿ ನಮ್ಮನ್ನು ಕಳಿಸಿದಳು...ನಾವು ಸಾಯಂಕಾಲ ಮರಳಿ ಬಂದಾಗ ಎಲ್ಲ ಯಥಾ ಸ್ಥಿತಿ ಇದ್ದುದನ್ನು ಕಂಡು ಎರಡುದಿನ ನಿರಾಳವಾಗಿ ಕಳೆದದ್ದರ ಬಗ್ಗೆ ಸಮಾಧಾನ... ಮರುದಿನ ನಮ್ಮ ಕೆಲಸದವಳು ಹಿಂದಿನ ದಿನದ ವರದಿ ಒಪ್ಪಿಸಿದ ಮೇಲಂತೂ ನಮ್ಮ ಮೂರ್ಖತನಕ್ಕೆ ನಮಗೇ ನಾಚಿಕೆ... ಇಡೀ ದಿನ ಒಂದು ಚೂರೂ ಸದ್ದಿಲ್ಲದೇ ಎಲ್ಲ ಸಾಮಾನುಗಳನ್ನು ತಾನೇ ಹೊಂದಿಸಿಕೊಂಡು ಕೆಲಸ ಮಾಡಿದ್ದು,ಹೊರಗೆ ಹೋಗುವಾಗ ಬಾಗಿಲು ಹಾಕಿಕೊಳ್ಳುವಂತೆ ನಿವೇದಿಸಿಕೊಂಡದ್ದು, ಚಹ ಬೇಕೇ ಎಂಬ ಪ್ರಶ್ನೆಗೆ, ಬೇಡಮ್ಮಾ,ನಿಮ್ಮ ಕೆಲಸದಲ್ಲಿ ತೊಂದರೆ ಬೇಡ ..ನಾನು ಕುಡಿದೇ ಬಂದಿದ್ದೇನೆ..ಹೆಚ್ಚು ಕುಡಿಯುವ ಅಭ್ಯಾಸ ಇಟ್ಟುಕೊಂಡಿಲ್ಲ ಅಂದದ್ದು,..ಕೆಲಸದ ಕೊನೆಗೆ ಆದಷ್ಟೂ ಜಾಗ clean ಮಾಡಿ ಸಾಮಾನುಗಳನ್ನು ಸುವ್ಯವಸ್ಥಿತವಾಗಿ ಹೊಂದಿಸಿದ್ದು..ಒಂದೆರಡು ಬಾಟಲಿ ಕುಡಿಯುವ ನೀರು ಬಿಟ್ಟು ಯಾವುದಕ್ಕೂ ತೊಂದರೆ ಕೊಡದಿದ್ದುದು...ಹೆಚ್ಚು ಒಳ ಹೊರಗೆ ಅಡ್ಡಾಡದೇ ' ತಾನಾಯ್ತು..ತನ್ನ ಕೆಲಸವಾಯ್ತು' ಅಂತಿದ್ದುದು..ಎಲ್ಲ ಹೇಳಿದಾಗ ಅಚ್ಚರಿಯ ಜೊತೆಗೆ ಆನಂದ ಕೂಡ ಆದದ್ದು ಸುಳ್ಳಲ್ಲ.... ಮುಂದೆರಡು ದಿನ ನಾನೇ ಇದ್ದು ಕೆಲಸಮಾಡಿಸಿಕೊಂಡಾಗ ಅವಳು ಹೇಳಿದ್ದು ಹದಿನಾರಾಣೆ ಸತ್ಯವೆಂದು ತಿಳಿಯಲು ಬಹಳಹೊತ್ತು ಹಿಡಿಯಲಿಲ್ಲ... ಕೆಲಸವೆಲ್ಲ ಮುಗಿಸಿ ಹೊರಟು ನಿಂತಾಗ ಮನೆಯ ಸದಸ್ಯನೊಬ್ಬನನ್ನು ಕಳಿಸಿಕೊಟ್ಟಂಥ ಆತ್ಮೀಯತೆ ಇತ್ತು... FACE IS THE INDEX OF MAN ಅನ್ನುವದು ಸದಾ ನಿಜವಲ್ಲ...ಹೊರಗೆ ಕಾಣುವ ಆಧಾರದ ಮೇಲೆ ವ್ಯಕ್ತಿತ್ವನಿರ್ಣಯ ಅಸಾಧು...ಎಂಬುದನ್ನು ಅರ್ಥೈಸಿಕೊಂಡೆ... ಸೂಟು ಬೂಟು ಧರಿಸಿ,ಸುಳ್ಳು ನಯ- ನಾಜೂಕಿನಿಂದ ಮರುಳುಮಾಡಿ ಹಿತೈಷಿಗಳಂತೆ ಬಂದು ಎಷ್ಟೋಸಲ ವಂಚಿಸುವದನ್ನು ದಿನ ನಿತ್ಯ ನೋಡುವ,ಕೇಳುವ,ಓದುವ ನಾವು ಎಲ್ಲರನ್ನೂ ಅನುಮಾನಿಸುವ ಸ್ವಭಾವದವರಾಗಿದ್ದರೆ ಯಾರನ್ನು ದೂಷಿಸಬೇಕು....???? ತಪ್ಪು ಯಾರದು...???
Labels:Haage-summane
Haage-summane
Subscribe to:
Posts (Atom)
*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...
-
ಬಿಂಬ-೧ ಗೆಲುವು... ನನ್ನ ಮನಶ್ಯಾಸ್ತ್ರದ ಸಂಶೋಧನೆಯ ಭಾಗವಾಗಿ ನನ್ನ ಅಜ್ಜಿಯ ಸಂದರ್ಶನ ತೆಗೆದುಕೊಳ್ಳುತ್ತಿದ್ದೆ."ಯಶಸ್ಸು ಅಂದ್ರೆ ನಿನ್ನ ದೃಷ್ಟಿಯಲ್ಲಿ ಯಾವುದು...
-
ಮಗುವಿನ ಸ್ವಗತ ಏನು ಹೇಳಲಿ ನಿಮಗೆ ನನ್ನ ಮನಸಿನ ಪೇಚು..? ದೊಡ್ಡವರು ಎಂಬುವರು ಒಗಟು ನನಗೆ... ಮಾಡಬಾರದುದೆಲ್ಲ ಮರೆಯದೆ ಹೇಳುವರು.. ಮಾಡಬಾರದ್ದನ್ನೇ ಮಾಡುವರು ...
-
ಒಮ್ಮೆ ಒಬ್ಬ ಹಿರಿಯ ಸಾಧಕರನ್ನು ,ಅವರ ' ಶತಾಯುಷ್ಯದ' ಗುಟ್ಬಿನ ಬಗ್ಗೆ ಸಂದರ್ಶಕನೊಬ್ಬ ಪ್ರಶ್ನಿಸಿದಾಗ ಅವರು ಹೇಳಿದ್ದು," ಗುಟ್ಟೂ ಇಲ್ಲ, ಮಣ್ಣೂ ಇಲ್ಲ,...