ಹಾಗೇ ಸುಮ್ಮನೇ...
ಮೈಕೆಲ್ ಜಾಕ್ಸನ್ ಗೆ ನೂರೈವತ್ತು ವರ್ಷ ಬದುಕಬೇಕೆಂಬ ಅಭಿಲಾಷೆಯಿತ್ತು.ಯಾರದಾದರೂ ಕೈಕುಲುಕುವಾಗ ಕೈಗವುಸು ಧರಿಸುತ್ತಿದ್ದ.ಜನರ ಮಧ್ಯ ಹೋಗುವಾಗ ಮುಖವನ್ನು ಮಾಸ್ಕದಿಂದ ಮುಚ್ಚಿಕೊಳ್ಳುತ್ತಿದ್ದ. ಪ್ರತಿದಿನದ ಆರೋಗ್ಯ ತಪಾಸಣೆಗೆ ಹನ್ನೆರಡು ಜನರ ವೈದ್ಯರ ತಂಡದ ನಿಯುಕ್ತಿಯಾಗಿತ್ತು.ತಲೆಯ ಕೂದಲಿನಿಂದ ಹಿಡಿದು ಕಾಲಿನ ಉಗುರುಗಳ ತಪಾಸಣೆ ಪ್ರತಿದಿನ ಆಗಲೇಬೇಕಿತ್ತು....ಅವನುಣ್ಣುವ ಆಹಾರವನ್ನು ಪ್ರಯೋಗಶಾಲೆಯಲ್ಲಿ ಪರೀಕ್ಷಿಸಿದ ನಂತರವೇ ಅವನಿಗೆ ಕೊಡಲಾಗುತ್ತಿತ್ತು..ನಿತ್ಯದ ವ್ಯಾಯಾಮ ತರಬೇತಿಗೆ ಹದಿನೈದು ಜನರ team ಸದಾ ಸಿದ್ಧವಿರುತ್ತಿತ್ತು.. ಮೂಲವಾಗಿ ಕರಿಜನಾಂಗಕ್ಕೆ ಸೇರಿದ Jackson ಚರ್ಮದ plastic surgery ಯಿಂದ ಬಿಳಿಯನಾಗಿದ್ದ.oxygen ನ ಹಾಸಿಗೆಯ ಮೇಲೆಯೇ ಮಲಗುತ್ತಿದ್ದ.ಆಪತ್ಕಾಲದಲ್ಲಿ ಬೇಕಾದರೆ ಎಂದು ಕಿಡ್ನಿ,ಹೃದಯ,ಮುಂತಾದ ಅಂಗಾಂಗ ದಾನಮಾಡುವವರನ್ನೂ ಸಿದ್ಧಮಾಡಿಟ್ಟುಕೊಂಡಿದ್ದ.2009ದಲ್ಲಿ ಜೂನ್೨೫ ರಂದು ಹೃದಯಬಡಿತದಲ್ಲಿ ಇಳಿಕೆ ಪ್ರಾರಂಭವಾದಾಗ ಹನ್ನೆರಡು ಜನ ವೈದ್ಯತಂಡಕ್ಕೂ ಏನೂ ಮಾಡಲಾಗಲಿಲ್ಲ.ನೂರೈವತ್ತು ವರ್ಷ ಇರಬೇಕೆಂಬ ಅವನಾಸೆ ಅವನ ಜೊತೆಗೆ ಅಕಾಲವಾಗಿ ಕೊನೆಯುಸಿರೆಳೆಯಿತು..
ಪೋಸ್ಟ ಮಾರ್ಟಮ್ ಮುಗಿದಾಗ ಅವನೊಂದು ಅಸ್ಥಿಪಂಜರಮಾತ್ರವಾಗಿದ್ದ.ಮೈಮೇಲೆ ಅಸಂಖ್ಯಾತ ಸೂಜಿಚುಚ್ಚಿದ ಗುರುತುಗಳಿದ್ದವು.ನೋವುನಿವಾರಕ ಚುಚ್ಚುಮದ್ದಿನ ಪರಿಣಾಮಗಳವು. ಹಣದಿಂದ ಬದುಕನ್ನು ಖರೀದಿಸಿ ಇಟ್ಟುಕೊಳ್ಳ ಬಹುದೆಂಬ ಭ್ರಮೆಯೊಂದರ ದಾರುಣ ಅಂತ್ಯವಾದದ್ದು ಹೀಗೆ...
ಮೃತ್ಯುವನ್ನು ಗೆಲ್ಲುವದು ಆಗದ ಮಾತು.ಕೃತಕ ಬದುಕು ಬದುಕಬೇಕೆಂಬುವವರ ಮರಣವೂ ಸ್ವಾಭಾವಿಕವಾಗಿರುವದಿಲ್ಲವೆಂಬುದಕ್ಕೊಂದು ಸಶಕ್ತ ಉದಾಹರಣೆ.ತಮ್ಮ,ಆಸ್ತಿ,ಅಂತಸ್ತು,ಅಧಿಕಾರದ ಮದದಿಂದ ಮೆರೆಯುವವರಿಗೊಂದು ಸದಾ ನೆನಪಿರಲೇಬೇಕಾದ ಜೀವನಪಾಠ.
No comments:
Post a Comment