Tuesday, 12 February 2019

ಹಾಗೇ ಸುಮ್ಮನೇ..

ಮಾಡುವದೋ..ಬಿಡುವದೋ..ನೀವೇ ಹೇಳಿ..

   ‌‌‌             ‌‌‌ಇದು ಇಪ್ಪತೈದು ವರ್ಷಕ್ಕೂ ಮಿಕ್ಕಿದ ಹಿಂದಿನ ಕಥೆ...ನಾನಾಗ K.E.B' high School ನಲ್ಲಿ ಶಿಕ್ಷಕಿಯಾಗಿದ್ದೆ..ನನ್ನ ಜೊತೆಗೇ ಸಂದರ್ಶನ,ನೇಮಕವಾದ ಒಬ್ಬ ಶಿಕ್ಷಕಿ ನನ್ನ ಆಪ್ತ ಸ್ನೇಹಿತೆಯಾದುದು  ನನ್ನ ಭಾಗ್ಯ...ಅವರೇ ಶ್ರೀಮತಿ,ಸುನೀತಾ ದೇಸಾಯಿ...ತುಂಬಾ ಪಾಂಡಿತ್ಯವುಳ್ಳ ಮೇಧಾವೀ ಮಹಿಳೆ..ಸಾಲಿ  ರಾಮಚಂದ್ರರಾಯರ ಮೊಮ್ಮಗಳು...ಶ್ರೀ, ಹರಪನಹಳ್ಳಿ ಸರ್ ಅವರ ಮಗಳು..S.S.L.C ಯಿಂದ ಹಿಡಿದು B.A( maths) M.A ( ಸಂಸ್ಕೃತದಲ್ಲಿ), B.Ed ಎಲ್ಲದರಲ್ಲೂ ಪ್ರಥಮಸ್ಥಾನ...ತುಂಬಾ ಶಿಸ್ತು...ಸ್ವಲ್ಪು ಹೆಚ್ಚೇ ಅನಿಸುವಷ್ಟು ನೇರ ನಡೆ..ಆದರೆ ಕಲಿಸುವ ವಿಷಯದಲ್ಲಿ  ಅತ್ಯಂತ ಪ್ರಾಮಾಣಿಕ..committed...
                       ಆಗಿನ ಕಾಲದಲ್ಲಿ S.S.L.C ವಿದ್ಯಾರ್ಥಿಗಳಿಗೆ ಮಾರ್ಗದರ್ಶನಕ್ಕೆಂದು ಅನೇಕ magazines print ಆಗುವ ಪರಿಪಾಠವಿತ್ತು...ಹದ,ಮಿತ್ರ, ಸ್ನೇಹಿತ ,ಶಿಕ್ಷಕ,ಬಂಧು ಅಂತ ಹಲವಾರು ಏಕ ಕಾಲಕ್ಕೆ ಬರುತ್ತಿದ್ದುದರಿಂದ ಪೈಪೋಟಿ ಸಹಜವಾಗಿಯೇ ಇತ್ತು..ನುರಿತ ಶಿಕ್ಷಕರಿಂದ notes ಬರೆಸುವದರಲ್ಲೂ ಸ್ಪರ್ಧೆ..
                       ಶ್ರೀಮತಿ, ದೇಸಾಯಿ ಟೀಚರ್ ಗೂ offer ಬಂದದ್ದರಲ್ಲಿ ಆಶ್ಚರ್ಯವೇನು? ಸರಿ, ತಮ್ಮ ಯೋಗ್ಯತೆಯನ್ನು ಪಣಕ್ಕಿಟ್ಟು ಏನೇನೋ ಓದಿ, ಎಲ್ಲ ಮಕ್ಕಳಿಗೂ ಮುಟ್ಟಲೆಂಬ ಸದುದ್ದೇಶದಿಂದ  Extensive Notes ಬರೆದು ಕೊಟ್ಟೂ ಆಯ್ತು...ತಯಾರಿ ಒಂದು PHD ಗೆ  ಸರಿದೂಗುವಂತೆ ...April/ May ಎರಡೂ ತಿಂಗಳು  ಅದರಲ್ಲೇ  ಕಳೆದುಹೋದದ್ದೂ ಆಯ್ತು..ಪ್ರತಿದಿನ ಅದರ ಬಗ್ಗೆ ನನ್ನ ಜೊತೆ ಮಾತಾಗುತ್ತಿತ್ತು...ಅವರಿಗೆ ಅದಕ್ಕಾಗಿ ಆಗ ಸಿಕ್ಕದ್ದು ರೂ .೫೦೦/-.
   ‌‌    ‌    ‌‌‌      ‌‌ಜೂನ್ ತಿಂಗಳಲ್ಲಿ  ವರ್ಗಗಳು ಪ್ರಾರಂಭವಾದಾಗ ನಮ್ಮ ಟೀಚರ್  ನಿರಾಳ..ಎಲ್ಲ ತಯಾರಿ ರಜದಲ್ಲಿ ಸಿದ್ಧವಾದದ್ದರಿಂದ ಹಗುರವಾಗಿದ್ದರು... ಆದರೆ ಎರಡು ತಿಂಗಳು ಪೂರ್ತಿಯಾಗುತ್ತ ಬಂದಂತೆ
ಕ್ರಮೇಣ ಸಂಸ್ಕೃತ ವರ್ಗಗಳ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹಾಜರಿ ಕಡಿಮೆಯಾಗ ತೊಡಗಿತು..ಮಕ್ಕಳನ್ನು ಉಪಾಯವಾಗಿ ಕೇಳಿದಾಗ ಬಂದ  ಉತ್ತರ ಆಘಾತಕಾರಿಯಾಗಿತ್ತು..
             ‌‌‌‌‌‌‌‌" ಅವರು ಹೇಳುವ ವಿಷಯ,ಕೊಡುವ 
notes ಹೂಬೇಹೂಬು " ____  magazine
ನ ಕಾಪಿಯಿದೆ...ಎಲ್ಲವೂ ready ಸಿಕ್ಕದ್ದರಿಂದ ಹುಡುಗರು ಕಡಿಮೆಯಾಗುತ್ತಿದ್ದಾರೆ"...
                ‌‌‌‌ತಮ್ಮ ಸಂಪೂರ್ಣ ಸಾಮರ್ಥ್ಯ ಒರೆಗೆ ಹಚ್ಚಿ ಮಕ್ಕಳಿಗೆ ಏನು ಬೇಕೋ ಅದೆಲ್ಲ ' ಎಲ್ಲ S.S.L.C ಮಕ್ಕಳಿಗೂ'  ದಕ್ಕಲೆಂದು ಪಟ್ಟ ಶ್ರಮ ಹೀಗೆ back fire ಆಗಿತ್ತು..ಜಾಣ ಹುಡುಗರಿಗೇನೂ ವ್ಯತ್ಯಾಸವಾಗದೇ ಹೆಚ್ಚೇ ಪ್ರಯೋಜನಕಾರಿಯಾಗಿದ್ದರೂ ನೆವ ಹುಡುಕುವ
ಮಧ್ಯಮ ವಿದ್ಯಾರ್ಥಿಗಳಿಗೆ ಸೋಮಾರಿತನ ಕಲಿಯಲು ಸಾಧ್ಯವಿತ್ತು..
                 ಕೊನೆಗೆ ನಾವು ಅವರಿಗೆ ,notes ಗಳು ಯಾರದೋ ' copy' ಅಲ್ಲವೆಂದೂ,ಆ magazine ಗಳಿಗೆ ಬರೆದವರೇ ಇವರೆಂದೂ ,ಉಳಿದವರೇ ಅವರ ಸಹಾಯ ಪಡೆಯುತ್ತಿದ್ದಾರೆಂದೂ, ಅಂಥವರಿಂದ ಪ್ರತ್ಯಕ್ಷ ಕಲಿಕೆ  ಮಕ್ಕಳ  ಸೌಭಾಗ್ಯ ಎಂದೂ ತಿಳಿಸಿ  ಹೇಳಿದ  ಮೇಲೆ ಕೆಲವೇ ವಾರಗಳಲ್ಲಿ class ಗಳು ಮೊದಲಿನಂತೆ
ತುಂಬಿ ತುಳುಕ ಹತ್ತಿದವು...
                ಈ ಘಟನೆ ಅವರಿಗಷ್ಟೇ ಅಲ್ಲ...ನಮಗೆಲ್ಲರಿಗೂ ಒಂದು ಪಾಠವಾಗಿ ಏನಾದರೂ ಒಂದು ಹೊಸ ಕೆಲಸ ಮಾಡಬೇಕೆನ್ನುವಾಗ ' TO  be...or..Not be' ಎಂಬಂತೆ ' To do... or ..Not to do'' ಎಂದು ಮನಸ್ಸನ್ನು ಗೊಂದಲಗೊಳಿಸಿಕೊಂಡದ್ದು ಮಾತ್ರ ನಿಜ..
                ‌‌  ಮುಂದಿನ  ತಿಂಗಳು ೧೧ ಕ್ಕೆ ಅವರಿಲ್ಲವಾಗಿ ೨೩ ವರ್ಷ..ನನ್ನ ಗೆಳತಿ, ಅಕ್ಕ, ಮಾರ್ಗದರ್ಶಿ, ಬೆಂಬಲಿಗಳಾಗಿ ಅವಶ್ಯವಿದ್ದಾಗ ಇಡೀ ಕುಟುಂಬ ಸಮೇತ ಸದಾಕಾಲ ನನ್ನ ಬೆಂಬಲಿಕ್ಕೆ ನಿಂತಿದ್ದ ಅವರು ನನ್ನ ಪಾಲಿಗೆಂದೂ ವ್ಯಕ್ತಿಯಲ್ಲ....ಒಂದು ಮಹಾಶಕ್ತಿ...

No comments:

Post a Comment

Smt. Veena Nayak  Flat no 402, 4th floor  Presidency Crown Court Apts, C.G.Kamath Road, Karagalapady, Mangalore 575003 Mobile: 7760774037