Saturday, 2 February 2019

[01/02, 6:34 pm] krishnakoulagi: ಭಾರ್ಗಿಯ ಸ್ವಗತ...

(ಎಲ್ಲರೂ ಎಲ್ಲ ತರಹದ comments ಹಾಕಿರ್ತಾರೆ..ಬರೆದದ್ದೇ ಬರೆದರೆ ಚನ್ನಾಗಿರೋಲ್ಲ..ನನಗೆ ತಿಳಿದ
ಮಟ್ಟಿಗೆ 'ಮಗಳು ಜಾನಕಿ' ಯ ಪಾತ್ರಗಳ ವಿಶ್ಲೇಷಣೆ...)

(ರಾಜರತ್ನಂ ಅವರ ಕ್ಷಮೆ ಕೇಳಿ)

ಮಾನವನಾಗಿ ಹುಟ್ಟಿದ್ಮೇಲೆ
ಮಾಡ್ಬೇಕ್ ಒಂದಿಷ್ಟ್  ದುಡ್ನಾ...
ಕೈಗೆ ಬಂದದ್ ಬಿಟ್ಕೋಡೋಕೆ
ನಾನೇನಂಥಾ  ಹೆಡ್ನಾ???

ಅಧಿಕಾರ್ಸಿಗೋದ್ ಪುಕ್ಕಟಲ್ಲಾ..
ಮಾಡ್ಬೇಕೊಂದಿಷ್ಟ್  ಯತ್ನ...
ಸಿಕ್ಬಿಟ್ರಾಯ್ತು ಆಮ್ಯಾಕಿಂದ
ಮಾಡ್ಕೋಬೌದು  ಜತ್ನ....

ಹೆಂಡ್ರು,ಮಕ್ಳು,ಸಂಸಾರಂತ
ಎಷ್ಟೊದ್ದಾಡಿದ್ರೇನು?
ಅದು ಮುಗಿಯೋ ಕಥೆನೇ ಅಲ್ಲ..
ಅದ್ಕೆ  ಬಾಕೀದ್ಬಿಡ್ಬೇಕೇನೂ...??

ಸಣ್ಣಾ ಪುಟ್ಟಾ ಅಡ್ಡಿ ಬಂದ್ರೆ
ಕಿತ್ಹಾಕ್ಬೇಕು ಮುಳ್ಳು...
ಇಂಥಾದ್ರಲ್ಲಿ ಅಡ್ಬರ್ಬಾರ್ದು
ನಮ್ ನಿಮ್ ಅಂಬೋ ಕಳ್ಳು...

" ಸೋಲು- ಗೆಲ್ವು ಇದ್ದದ್ದೇನೆ"- (ಅಂತ..)
ಮಾಡ್ಕೋಬಾರ್ದು ರಾಜಿ...
ಗೆದ್ದೇ ತೀರೋ ಛಲವಿರ್ಬೇಕು
ಬಿಟ್ಕೊಡ್ಬಾರ್ದು  ಬಾಜಿ...

ಯತ್ನಮಾಡೋ 'ರತ್ನಂ'ಗೇನೇ
ಒಲಿದು ಬರ್ತೈತೆ ದೈವ...
'"ಏನೇ ಬರ್ಲಿ ಗೆದ್ದೇಗೆಲ್ತೀನ್"
ಮನದಲ್ಲಿರ್ಬೇಕ್  ಭಾವ...

ಅವ್ಕಾಶ್ ಸಿಕ್ದಾಗ್ ಬಾಚ್ಗೋಬೇಕು
ಸದಾ ಸಿಗೋಲ್ಲಾ chanceಉ..
ಬಿಟ್ಬಿಟ್ವಂದ್ರೆ  ಹೋಗ್ಬಿಟ್ ಹಾಗೇ..
ಚೆಕ್ ಆದ್ಹಂಗೇ bounceಉ....
        _______ ______ ______

* ಹೆಡ್ಡನಾ_ ದಡ್ಡನಾ.?
ಆಮ್ಯಾಕಿಂದ_ ನಂತರದಲ್ಲಿ- ಆ ನಂತರ
ಜತ್ನ_ ಜತನ_ ಕಾಯ್ದುಕೊಳ್ಳು.
ಕಳ್ಳು_ ಕರುಳು_ ಅಂತಃಕರುಣ
[01/02, 6:43 pm] krishnakoulagi: C.S.P._ ಸ್ವಗತ...

'ಒಳ್ಳೆ ಜನಕ್ ಕಾಲವೇ'_ಯಿಲ್ಲ
ಕೇಳ್ತಿದ್ದೆ ಈ ಮಾತ್ನ...
ನಂಗೀಗ ಅರ್ಥ ಆಗ್ತಾಐತೆ..
ಮಾಡ್ತಿದ್ದೀನಿ ತಿಳ್ಕೊಳ್ಳೊ ಯತ್ನ...

ಹತ್ತಾರ್ ಕೇಸೂ ಹಿಡಿಯೋ ಹಾಗೆ
ಹಿಡ್ದೆ ಭಾರ್ಗೀದೂ ಕೇಸು...
ಈಗ್ನೋಡ್ದ್ರೆ ಅನಸ್ತಾ ಐತೆ
ಬಿಟ್ಬಿಟ್ಟಿದ್ರೆ ಆಗ್ತಿತ್ತು ಲೇಸು...

ಬೇತಾಳಾಗಿ ಬೆನ್ ಬಿದ್ದವ್ನೆ
ಮನಸ್ಗಿಲ್ಲ ಶಾಂತಿ...
ಜಾನಕಿ  ಬದಕನ್ನೆನಿಸ್ಗೊಂಡ್ರೆ
ಆದ್ಹಂಗೇ  ಮತಿಭ್ರಾಂತಿ...

ನನ್ ಮ್ಯಾಗೆ  ಕೋಪ ಇರ್ಲಿ
ಅದ್ರಲ್ಲಿ ಅವ್ಳದೇನಿದೆ ತಪ್ಪು...??
' ಗುಬ್ಬಿ ಮ್ಯಾಕದು ಬ್ರಮ್ಹಾಸ್ತ್ರ'
ತಿಳ್ಕೋಬಾರ್ದೆ  ' ಬೆಪ್ಪು'...

ಧೈರ್ಯ ಇದ್ರೆ ಎದರಿಗ್ ಬರ್ಲಿ
ಯಾಕ್ ಪರದೆ ಹಿಂದ್ಗಡೆ ಆಟ...??
ನಾನೇನಂತ್ಹೇಳಿ ತೋರ್ಸೇ ಬಿಡತೇನ್
ಕಲಿಸೇ ಬಿಡ್ತೇನ್ ಒಂದ್ಪಾಠ...

ಎಷ್ಟ ಹಾರಾಡ್ತಾನ್ ಹಾರೇಬಿಡ್ಲಿ
ಆಮ್ಯಾಲ್ ನೋಡ್ತೇನ್ ಒಂದ್ ಕೈ...
ಪಾಪದ್ಕೊಡ ತುಂಬಿಡ್ಲಿ ಒಮ್ಮೆ
ಅಂದೇಬಿಡ್ತೀನ್ ' ಜೈ '
[01/02, 6:57 pm] krishnakoulagi: ನಿರಂಜನನ ಸ್ವಗತ...

( ಜಿ.ಪಿ.ರಾಜರತ್ನಂ ಅವರ ಕ್ಷಮೆ ಕೇಳಿ...)

ನೀವೇ ಹೇಳಿ ನಾನೇನ್ಮಾಡ್ದೆ
ಅಂತಿಷ್ಟೊಂದು ಕ್ವಾಪ...
ದುಡ್ಬೇಕಿತ್ತು..ಹೇಳಿದ್ಮಾಡ್ದೆ
ನಂದೊಬ್ಬಂದೇ  ತಪ್ಪಾ?.

ಆದದ್ದಾಯ್ತು...ಸರಿ ಮಾಡಾಣ..
ನಂದೊಂದಿಷ್ಟು ಕೇಳು...
ಅಂದ್ರೆ ಕೇಳ್ದೆ ಸೆಟ್ಗೊಂಡು ಕುಂತ್ರೆ
ನಾನೇನ್ಮಾಡ್ಬೇಕ್ ಹೇಳು....

ಅಮ್ಮಂಜೊತೆ ನಿಮ್ಮಪ್ಪಂದು
ಮುಗೀಲಾರದ್ ಜಗ್ಳಾ...
ನಮ್ಮಪ್ಪನ್ನೂ ಅಂಗೇ ಬಿಡ್ಲಾ
ನೀನೊಡ್ತೀಯಾ ಅವರ್ಗೋಳಾ...

ಮಾತ್ಮಾತಲ್ಲಿ ಇರಿಯೋದ್ಯಾಕೆ..?
ನಾನೂ ಅಂಗೇ ಮಾಡ್ಲಾ..?
ತಲೆಕೆಟ್ಟೊಮ್ಮೆ ನಿಂತ್ರೆ ನೋಡು..
ಕಣ್ತೆರೆದೆಲ್ಲ ಸುಡ್ಲಾ??.

ಎಷ್ಟೊಂದ್ ಜನ್ರು ಒದ್ದಾಡ್ಬೇಕು
ನಮ್ಮಿಂದಾಗಿ ನೋಡು..
ಹಟದ್ಮ್ಯಾಲೆ  ಹಟ ಹಿಡ್ದ್ರೆ
ಕೊನೆಗ್  ನಾಯೀಪಾಡು...

ನನ್ನನ್ ಜೇಲ್ಗೆ ಅಟ್ಲೇಬೇಕಾ?
ನಾನ್   ಯಾವಾಗ್ಲೂ  ಸಿದ್ಧ...
ಅಮ್ಮ,ಅಪ್ಪ ಖುಶಿ ಖುಶಿ ಇದ್ರೆ
ನನ್ ತಪ್ಪಿಗ್ ನಾನೇ ಬದ್ಧ....

ನಿಂಗೆನ್ಬೇಕು ಹೇಳ್ಬಿಡು ಒಮ್ಮೆ..
ಇಬ್ರೂ ಹಾಯಾಗೋಣ...
ಮಾತ ನ್ನಾಡ್ದೆ  ಮುಖ ಬಿಕ್ಕೊಂಡ್ರೆ
ನಾವಾದ್ರೂ ಏನ್ ಮಾಡಾಣ...
[01/02, 7:00 pm] krishnakoulagi: ಶಾಮಲತ್ತೇ ಸ್ವಗತ...

" ಯಾರ್ಮುಂದೇನು ಹೇಳ್ಬೇಕಂಬೋ
ಬುದ್ಧಿಯಿಲ್ಲ ನಿಂಗೆ...
ಅಂತ್ಹೇಳಿ ಚಂದ್ರಣ್ಣ ಬಯ್ತಿರ್ತಾನೇ
ಹಗಲೂ- ರಾತ್ರಿ ನಂಗೇ..

ಬೆಳ್ಗಿಂದೆಲ್ಲ ಹಾಲಂತ ನಂಬೋ
ಮಗುವಿನ್ ಮನಸ್  ನಂದು...
ಎಲ್ಲಾರ್ ಖುಶಿ ಖುಶಿ ಯಾಗಿರ್ಬೇಕು
ಅನ್ನೋ ಕಾರಣಾನೂ ಒಂದು..

ರಶ್ಮಿ, ಜಾನ್ಕಿ, ಮಧು ಎಲ್ಲಾ
ನಮ್ಮ ಜನಾನೇ  ಅಲ್ವಾ!!!?
ಒಬ್ರಿಗೊಬ್ರು ಚಂದಾಕಿದ್ರೆ
ಎಲ್ರೂ  ತಿಂದ್ಂಗೆ  ಹಲ್ವಾ...

ಗಂಡ, ಮಕ್ಳು  ಕಳ್ದ್ಹೋಗೋ ನೋವು
ನಾನ್ ಚನ್ನಾಗಿ  ಬಲ್ಲೆ...
ಯಾರೂ ಅಂಗೆ ನೊಂದ್ಕೋಬಾರ್ದು....
ಕಷ್ಟಾ ಕೊಡೋಕ್ ಒಲ್ಲೆ..

ಚಂದ್ರಣ್ಣಂದೂ ಬಾಯ್ಮಾತ್ ಜೋರು
ಮನಸ್ ಬೆಣ್ಣೆ ಮುದ್ದೆ..
ನಕ್ಕೋತ್ ನಕ್ಕೋತ್ ಎಲ್ರೂ ಇದ್ರೆ
ಬೇಕಿನ್ನೇನ್??? ನಾನ್  ಗೆದ್ದೆ....

ಸುದ್ದಿ ಅತ್ತಿತ್ ಹೇಳ್ತೀನ್ ನಿಜ,
" ಸುದ್ದಿ- ಸೂರಕ್ಕಲ್ಲ..."
ಒಳ್ಳೇದ್ಮಾಡೋ ಉದ್ದೇಶಷ್ಟೇ
ಅಷ್ಟ್  ಗೊತ್ತಾಗ್ಬೇಕ್ ನಿಮ್ಗೆಲ್ಲ....
            ‌**********
[01/02, 7:31 pm] krishnakoulagi: ಜಾನಕಿಯ " ಸ್ವಗತ"( soliloquy)

ನನ್ನಲ್ಲಿ ನಿಮ್ಮನೆಯ  ಮಗಳ ಕಂಡಿರಿ..
ಅರಳುವ  ಪೂರ್ವ 'ಮುಗುಳು 'ಕಂಡಿರಿ..
' ನರಳಿ -ನರಳಿಸುವ ' ಗೋಳು ' ಕಂಡಿರಿ...
ಅಷ್ಟು  ಸಾಕು...

ಬದುಕು' ಬವಣೆ 'ಮಾಡಿದ ಸುಳ್ಳು ಕಂಡಿರಿ..
ಯಾರೋ ಮಮತೆಯಿತ್ತ ಕಳ್ಳು ಕಂಡಿರಿ..
ಅಪರಿಮಿತ ಸಿರಿವಂತಿಕೆಯ' ಜೊಳ್ಳು' ಕಂಡಿರಿ..
ಅಷ್ಟು ಸಾಕು...

ನಮ್ಮವರು " ಪರರಾದ" ಪರಿಯ ಕಂಡಿರಿ..
ಪರರು 'ನಮ್ಮವರಾದ' ಸಿರಿಯ ಕಂಡಿರಿ...
ಮಾನವ ಸಂಬಂಧಗಳ ಸರಾಸರಿಯ ಕಂಡಿರಿ..
ಅಷ್ಟುಸಾಕು..

"ಕಂಡದ್ದೆಲ್ಲ ನಿಜವಲ್ಲ"- ಎಂಬ ಸತ್ಯ ಕಂಡಿರಿ...
ಉಂಡದ್ದೆಲ್ಲ ದಕ್ಕುವದಿಲ್ಲ - ತಥ್ಯ ಕಂಡಿರಿ..
ಮಾತಿಗೂ ಮನಸಿಗೂ ಇರುವ ಮಿಥ್ಯ ಕಂಡಿರಿ...
ಅಷ್ಟುಸಾಕು...

ಬದುಕಿನ ಆಯ್ಕೆ ಸುಲಭವಲ್ಲ- ರೀತಿ  ಕಂಡಿರಿ...
ಕಳೆದು ಹೋಗಿ ಕನಸಾಗಿದ್ದ ಪ್ರೀತಿ ಕಂಡಿರಿ...
ಕೈಲಾದುದ ಮಾಡು, ದೇವರಿಗೆ ಬಿಡು"..ನೀತಿ ಕಂಡಿರಿ..
ಅಷ್ಟು ಸಾಕು...
[02/02, 9:10 am] krishnakoulagi: 'ದೇವ'ಕಿ...(ದೇವರಿಗೆ..)

ಸ್ವಗತವಲ್ಲ

ಏನ್ ಪಾಪ ಮಾಡೀವ್ನೀಂತ
ನನ್ಮ್ಯಾಕ್ ಇಷ್ಟೊಂದು ಕ್ವಾಪ...?
ಇಷ್ಟೆಲ್ಲಾ ಜನಾ ಇದ್ದಾಗ್ಲೂನೂ
ನನ್ನೊಬ್ಳಿಗ್ಯಾಕ್  ಶಾಪ???

ಮನೆಗ್ ಗಂಡು ದಿಕ್ಕಲ್ದ್ಹಂಗೆ
ಗಂಡನ್ನೋಡ್ಸಿದೆ ಮನೆಬಿಟ್ಟು..
ಅಣ್ಣ- ತಮ್ಮ ಹಾಯಾಗಿದ್ರು..
ಈಗ್ ಅವರ್ ಬದ್ಕೂ ಎಡವಟ್ಟು...

ತಪ್ಮಾಡವ್ರೆ....ನಿಜಾ ಐತೆ...
ಮಾಡಿದ್ಯಾಕೆ  ನೋಡು..
ಚಂದಕ್ಕಲ್ಲ...ಚೈನಿಗಲ್ಲ...
ಕಣ್ಬಿಟ್ ನೋಡವರ ಪಾಡು...

' ಕರುಣಾ ಸಿಂಧು' ಅಂತಾರ್ನಿಂಗೆ
ಇದೇನಾ ನಿನ್ನಯ  ಕರುಣೆ???
' ಅನಾಥ ಬಂಧು ' ಅನ್ಸೊಂಡವನ್ಗೆ
ಕಾಣ್ತಿಲ್ವಾ ನಮ್ ಬವಣೆ????

ಮನೆಗ್ಬಂದ್ ಮಗಳ್ಗೆ ಸುಖಾಯಿಲ್ಲ
ಮೊಮ್ಮಗ್ಳ ಗತಿ ಏನು???
ಒಂದಿಷ್ಟಾದ್ರೂ ಯೋಚ್ನೆ ಬೇಡ್ವಾ?
' ಬಡವರ ಬಂಧು' ನೀನು...

' ಹಾಲಲ್ಹಾಕು...ನೀರಲ್ಹಾಕು'
ಮಂಗ್ಳಾ  ಹಾಡೊಮ್ಮೀ ಕಥೆಗೆ... 
ದಿನಾ ಸತ್ಸತ್  ಸಾಕಾಗೈತೆ
ಒಮ್ಮೆ ಗತೀ ಕಾಣ್ಸೀ ವ್ಯಥೆಗೆ..

      ‌‌‌‌   ******    ******  ******

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...