೩೦. ಕನ್ನಡವನ್ನು ಆರಾಧಿಸೋಣ...
ಉಳಿದ ಭಾಷೆಗಳನ್ನು ಗೌರವಿಸೋಣ...
ನನ್ನದು ಕುಗ್ರಾಮ. ಓದಿದ್ದು ರಟ್ಟಿಹಳ್ಳಿಯ ತುಳಜಾಭವಾನಿ ಗುಡಿಯಲ್ಲಿ. free special class ಕೇಳಿದ್ದು ಅಲ್ಲಿಯ ಆದಿಕೇಶವ ದೇವಸ್ಥಾನದಲ್ಲಿ. ಆಟೋಟಗಳಿಗೆ ಶ್ರೀ ಕದಂಬೇಶ್ವರ ದೇವಸ್ಥಾನದ ಅಂಗಳ . ಯಾವ ಮೂಲಭೂತ ಸೌಕರ್ಯಗಳಿಲ್ಲದ ಬಯಲು ಶಾಲೆಗಳು. ಆದರೆ ರ್ಯಾಂಕ್,
Competition, prize, fine, punishment ಮುಂತಾದ ಶಬ್ದಗಳು
ನಮ್ಮ ಪದಕೋಶದಲ್ಲಿ ಇರಲೇಯಿಲ್ಲ. ಎಲ್ಲವೂ 'ಆಡಿ ಕಲಿ' , 'ಮಾಡಿ ಕಲಿ', 'ನೋಡಿ ಕಲಿ' -ಗಳೇ. ನಾವು ABCD ತೀಡಿದ್ದು 8 ನೇ ವರ್ಗದಲ್ಲಿದ್ದಾಗ. ಇದ್ದ 26 ಅಕ್ಷರಗಳನ್ನು ಉಲ್ಟಾಪಲ್ಟಾ ಬರೆದದ್ದೇ ಹೆಚ್ಚು. ಅಂತೂ SSLC ದಾಟುವಷ್ಟು ರೂಢಿಸಿಕೊಂಡು, 'ನಾವೇ' ಉತ್ತರಗಳನ್ನು ಬರೆದು ಪಾಸಾದದ್ದು ಆಗ ಸಾಧನೆಯೇ ನಮಗೆ/ನಮ್ಮ ಪಾಲಕರ ಮಟ್ಟಿಗೆ ...ಆದರೆ ಯಶಸ್ಸು ಸಂಪೂರ್ಣವಾಗಿ ಶಿಕ್ಷಕರಿಗೆ, ಅವರ ವಿದ್ವತ್ಪೂರ್ಣ ಕಲಿಕೆಗೆ, ಅವರ ದಣಿವರಿಯದ ಶ್ರಮಕ್ಕೆ ಸಲ್ಲಬೇಕು.
ನಂತರ ಧಾರವಾಡದ JSS college ಗೆ
ಬಂದು English major, Hindi minor
ಮಾಡಿ ಒಂದು ವರ್ಷವೂ ನಪಾಸಾಗದಂತೆ degree ಮುಗಿಸಿ
ಮುಂದೊಮ್ಮೆ ಅವೇ ವಿಷಯಗಳು ನನ್ನ ಅನ್ನದ ಮಾರ್ಗವಾದಾಗ ನಾನು ಮನಸಾರೆ ನೆನೆದದ್ದು ನನ್ನ ಗುರುಗಳನ್ನೇ.
English major ಗೆ ಹನ್ನೊಂದು ಗಂಡು ಮಕ್ಕಳೊಂದಿಗೆ ನಾನೊಬ್ಬಳೇ ವಿದ್ಯಾರ್ಥಿನಿಯಾಗಿದ್ದರಿಂದ(1965/69)
ಸ್ವಲ್ಪ ಹೆಚ್ಚೇ ಅಕ್ಕರೆ ,ಕಾಳಜಿ ಸಿಕ್ಕಿದ್ದು ನನ್ನ ಪುಣ್ಯ.
ಇಷ್ಟೆಲ್ಲಾ ಸೌಲಭ್ಯಗಳ ಮಧ್ಯದಲ್ಲೂ ನನಗೇನೋ ನನ್ನ ಬಗ್ಗೆಯೇ ಕೀಳರಿಮೆ ಇತ್ತು. ಹಳ್ಳಿಯವಳು ಎಂಬ ಹಿಂಜರಿಕೆಯನ್ನು ಗೆಲ್ಲಲಾಗಲೇಯಿಲ್ಲ ನನಗೆ. ಇದಾವುದನ್ನೂ ಲೆಕ್ಕಿಸದೇ ದಿನಗಳು ಕಳೆದು ಹೋಗಿ ಮುಂದೊಂದು ದಿನ ಇಂಗ್ಲಿಷ್ ಶಿಕ್ಷಕಿಯಾಗಿ 58 ನೇ ವಯಸ್ಸಿನಲ್ಲಿ ನಿವೃತ್ತಿಯೂ ಆಗಿ ಹದಿನೇಳು ವರ್ಷಗಳೇ ಸಂದಿವೆ. ಆದರೆ ನನ್ನ ವಿಷಯದ
ಆಯ್ಕೆಯ ನಿಜವಾದ ಉಪಯೋಗ ನನಗೆ ಆದದ್ದು ನಿವೃತ್ತಿಯ
ನಂತರವೇ ಎನ್ನಬಹುದು.
ಮಕ್ಕಳ ಬೆನ್ನು ಹತ್ತಿ ಹೊರಟ, West/ East ಅಮೇರಿಕಾ, ಲಂಡನ್, ಇಟಲಿ, ಫ್ರಾನ್ಸ್, ದುಬೈ, ಮಲೇಶಿಯಾ, ಥಾಯ್ಲೆಂಡ್, ಸಿಂಗಪುರಗಳ ಪ್ರವಾಸದ ವೇಳೆಯಲ್ಲಿ ನನ್ನನ್ನು ಕಾಯ್ದದ್ದು ಇದೇ ಭಾಷೆಯೇ. ಬೆಂಗಳೂರಿನಂಥ metro city ಯಲ್ಲಿ ಎಡಕ್ಕೆ ತಮಿಳು, ಬಲಕ್ಕೆ, ತೆಲುಗು, ಮುಂದೆ ಮಲೆಯಾಳಿ, ಹಿಂದೆ ಹಿಂದಿಯ ಜನರಿದ್ದ ವಾತಾವರಣದಲ್ಲಿ ಅಷ್ಟಿಷ್ಟು ಇಂಗ್ಲೀಷ್/ ಹಿಂದಿ ಬರದಿದ್ದರೆ
ದಿನ ದೂಡುವದೇ ದೊಡ್ಡದೊಂದು ಸಮಸ್ಯೆಯಾಗುತ್ತದೆ. ಅಂಥ ಪರಿಸ್ಥಿತಿಯನ್ನು ಎದುರಿಸಿ ಗೆಲ್ಲಲಾದರೂ ನಮಗೆ ಬೇರೆ ಭಾಷೆಗಳು ಬೇಕೇ ಬೇಕು...
ಇಂಥ ಪ್ರಸಂಗಗಳು ಎಲ್ಲರಿಗೂ ಒಮ್ಮಿಲ್ಲ ಒಮ್ಮೆ ಜೀವನದಲ್ಲಿ ಬಂದೇ ಬರುತ್ತವೆ. ಅವುಗಳನ್ನು ನಿಭಾಯಿಸಲು ಜೀವನದಲ್ಲಿ update ಆಗಬೇಕಾದುದು ನಮ್ಮ ಮಟ್ಟಿಗೆ ಅನಿವಾರ್ಯವೂ ಹೌದು.
ಕಲಿಕೆಗೆ ಆಯುಷ್ಯದ ಹಂಗಿಲ್ಲ. ತಪ್ಪಬಹುದು ಎಂಬ ಭಯ ಬೇಡ.ಇದೆಲ್ಲ ಯೋಚಿಸಿಯೇ ಯಾರೂ ,ಹೇಗೂ,
ಎಂದೆಂದಿಗೂ ಬೇಕೆಂದಾಗ ಬಳಸಿಕೊಳ್ಳಲಿ ಎಂಬ ಸದುದ್ದೇಶದಿಂದ post ಮಾಡಿದೆ. ನಿಮ್ಮೆಲ್ಲರ ಪ್ರತಿಕ್ರಿಯೆ ಗಳಿಗೆ ನನ್ನ ಹಾರ್ದಿಕ ನಮನಗಳು.
ನಮ್ಮ ಭಾಷೆಯನ್ನು ಹೆಚ್ಚಾಗಿಯೇ ಪ್ರೀತಿಸೋಣ...ಆರಾಧಿಸೋಣ...ಅದರೊಂದಿಗೆ ವ್ಯಕ್ತಿತ್ವ ಬೆಳವಣಿಗೆಗೆ ಇತರ ಭಾಷೆಗಳನ್ನೂ ಕಲಿಯೋಣ.
" ಅವಳ ತೊಡಿಗೆ ಇವಳಿಗಿಟ್ಟು ನೋಡಬಯಸಿದೆ"- ಎಂದು ಬಿ.ಎಮ್.ಶ್ರೀ.ಯವರೇ ತಮ್ಮ ಇಂಗ್ಲಿಷ್ ಗೀತೆಗಳ ಅನುವಾದಕ್ಕೆ ಚೆಂದದೊಂದು ವಿವರಣೆ ಕೊಟ್ಟಿದ್ದಾರೆ.
ನಾವೂ ಬೆಳೆಯೋಣ... ಭಾಷೆಗಳನ್ನೂ ಬೆಳೆಸೋಣ... ಶುದ್ಧ ಗಾಳಿ ಯಾವ ದಿಕ್ಕಿನಿಂದ ಬಂದರೂ ಉಸಿರಾಟ ಯೋಗ್ಯವೇ!!! ನಮ್ಮದನ್ನು ಅಪ್ಪಿಕೊಂಡು, ಒಪ್ಪಿಕೊಂಡು, ಬೇರೊಂದು ಭಾಷೆಯನ್ನು ಬಳಸಿ, ಬೆಳೆಸಿದರೆ ಅಡ್ಡಿಯಾಕಾಗಬೇಕು? ಈ ಹಿಂದೆ ಹದಿನಾಲ್ಕು ಭಾಷೆಗಳನ್ನು ಆಡಬಲ್ಲ ಓರ್ವ ವ್ಯಕ್ತಿ ನಮ್ಮ ಪ್ರಧಾನಿಯಾದದ್ದು
ನಾವೆಂದಿಗೂ ಮರೆಯುವದು ಬೇಡ.
ಕಲಿಯೋಣ...ಕಲಿಸೋಣ...
No comments:
Post a Comment