ಬಿಂಬ-೧
ಗೆಲುವು...
ನನ್ನ ಮನಶ್ಯಾಸ್ತ್ರದ ಸಂಶೋಧನೆಯ ಭಾಗವಾಗಿ ನನ್ನ ಅಜ್ಜಿಯ ಸಂದರ್ಶನ ತೆಗೆದುಕೊಳ್ಳುತ್ತಿದ್ದೆ."ಯಶಸ್ಸು ಅಂದ್ರೆ ನಿನ್ನ ದೃಷ್ಟಿಯಲ್ಲಿ ಯಾವುದು?" ನಿನ್ನ ಕಳೆದುಹೋದ ಬದುಕನ್ನೊಮ್ಮೆ ನೀನೇ ಹಿಂದಿರುಗಿ ನೋಡಿದಾಗ
ಆ ನೆನಪುಗಳು ನಿನ್ನ ಮುಖದ ಮೇಲೆ ಒಂದು ಸುಂದರವಾದ ಮುಗುಳ್ನಗೆ ಮೂಡಿಸಬೇಕು". ಅದು ಗೆಲುವು. ಯಶಸ್ಸು...
ಬಿಂಬ -೨.
ನೋವು...
ನನ್ನ ಸಾಕು ನಾಯಿ ಒಂದು ಕಾರಿನ ಗಾಲಿಗೆ ಸಿಕ್ಕು ಕೊನೆಯ ಉಸಿರು ಎಳೆಯುವಾಗ ಅದನ್ನು ಅಪ್ಪಿ ರಸ್ತೆಯ ಬದಿಗೆ ಕುಳಿತು ಅಳುತ್ತಿದ್ದೆ. ಸಾಯುವ ಕೊನೆಯ ಗಳಿಗೆಯಲ್ಲಿ ಅದು ಕಷ್ಟ ಪಟ್ಟು, ನನ್ನ ಗಲ್ಲದ ಮೇಲೆ ಇಳಿಯುತ್ತಿದ್ದ ಕಣ್ಣೀರು ನೆಕ್ಕಿ ಒರೆಸಲು ಹವಣಿಸುತ್ತಿತ್ತು.
ಬಿಂಬ-೩.
ಒಂದುಗೂಡುವಿಕೆ...
ನನ್ನ ತಂದೆ, ಅವರ ಮೂರು ಜನ ಅಣ್ಣ-ತಮ್ಮಂದಿರು, ಇಬ್ಬರು ಅಕ್ಕ ತಂಗಿಯರು ಆಸ್ಪತ್ರೆಯಲ್ಲಿ ನಮ್ಮಮ್ಮನ ಹಾಸಿಗೆಯ ಸುತ್ತ ನೆರೆದಿದ್ದರು. "ನನ್ನ ಮನಸ್ಸಿಗೆ ಎಷ್ಟೊಂದು ಹಿತವೆನಿಸುತ್ತಿದೆ ಈಗ . ಈ ಮೊದಲೂ ಹೀಗೆಯೇ ಹಲವು ಬಾರಿ ನಾವೆಲ್ಲರೂ ಕೂಡ ಬಹುದಿತ್ತು." - ಇವು ನಮ್ಮಮ್ಮನ ನುಡಿಗಳು...
ಬಿಂಬ-೪.
ಪ್ರೀತಿ...
ದವಾಖಾನೆಯ ಹಾಸಿಗೆಯಲ್ಲಿ ನನ್ನ ತಂದೆಯ ಪಾರ್ಥಿವ ಶರೀರ ಇನ್ನೂ ಇತ್ತು .ಕೊನೆಗೆ ಎಂಬಂತೆ ನಾನು ಅವರ ಮುಖವನ್ನೊಮ್ಮೆ ಚುಂಬಿಸಿದೆ.ಆಗಲೇ ನನಗೆ ನೆನಪಾಗಿದ್ದು, ನನ್ನ ಬಾಲ್ಯ ಕಳೆದ ಮೇಲೆ ನಾನವರಿಗೆ ಕೊಟ್ಟ ಮೊತ್ತ ಮೊದಲ ,ಹಾಗೂ ಕಟ್ಟ ಕಡೆಯ ಮುತ್ತು ಅದಾಗಿತ್ತು😒😒😒
ಬಿಂಬ-೫.
ಖುಶಿ...
ಇಪ್ಪತ್ತೇಳು ವರ್ಷಗಳ ಕ್ಯಾನ್ಸರ್ ಪೀಡಿತ ಯುವಕನೊಬ್ಬ ತನ್ನ ಎರಡು ವರ್ಷಗಳ ಮಗಳ ತುಂಟಾಟಗಳನ್ನು ನೋಡುತ್ತಾ ಗಹಗಹಿಸಿ ನಗುತ್ತಿದ್ದ. ಇನ್ನು ನನ್ನ ಬದುಕಿನ ಅಪಸವ್ಯಗಳ ಬಗ್ಗೆ ಗೊಣಗುಟ್ಟದೇ ಅದನ್ನು ಇದ್ದಂತೆಯೇ ಆನಂದಿಸಬೇಕೆಂದು ಆಗಲೇ ನಿರ್ಧರಿಸಿದೆ.
ಬಿಂಬ-೬.
ಕರುಣೆ...
ನಾನು ಎರಡೂ ಬಗಲಲ್ಲಿ
ಊರುಗೋಲುಗಳನ್ನು ,ಹಾಗೂ ಪುಸ್ತಕ ಗಳನ್ನು ಹಿಡಿದು ಕೊಂಡು fracture ಆದ ಕಾಲಿನೊಂದಿಗೆ ನಡೆಯುವುದಕ್ಕೆ ಹೆಣಗುತ್ತಿರುವದನ್ನು ಕಂಡ ಗಾಲಿ ಕುರ್ಚಿಯಲ್ಲಿ ಹೋಗುತ್ತಿದ್ದ ಎರಡೂ ಕಾಲಿಲ್ಲದ ವಿದ್ಯಾರ್ಥಿ ನನ್ನ ಪುಸ್ತಕಗಳನ್ನು ಹಾಗೂ ಬೆನ್ನು ಮೇಲಿದ್ದ ಚೀಲವನ್ನು ನನ್ನಿಂದ ಪಡೆದು ನನ್ನನ್ನು ನನ್ನ ವರ್ಗದ ಕೋಣೆಯವರೆಗೂ ತಲುಪಿಸಿ ಮರಳಿ ಹೋಗುವಾಗ ನನಗೆ ಹೇಳಿದ," ಚಿಂತಿಸಬೇಡಿ, ಬೇಗನೇ ಗುಣವಾಗಿ ಮೊದಲಿನಂತೆ ನಡೆಯುತ್ತೀರಿ."
ಬಿಂಬ-೭.
ಹಂಚಿಕೊಳ್ಳುವಿಕೆ...
ನಾನು ಕೆನ್ಯಾದ ಪ್ರವಾಸದಲ್ಲಿದ್ದೆ. ಒಮ್ಮೆ ಜಿಂಬಾಬ್ವೆಯಿಂದ ವಲಸೆ ಬಂದ ಪ್ರವಾಸಿಯೊಬ್ಬನ ಭೇಟಿಯಾಯಿತು. ತುಂಬಾ ತೆಳ್ಳಗೆ, ತೀರಾ ಅಶಕ್ತನಂತೆ ಕಂಡ ಅವನು ಮೂರು ದಿನಗಳಿಂದ ಏನನ್ನೂ ತಿಂದಿಲ್ಲ ಎಂಬುದು ತಿಳಿದು ಬಂದಾಗ, ನನ್ನ ಗೆಳೆಯ ತನ್ನ ಕೈಯಲ್ಲಿದ್ದ ಅರ್ಧ sandwichನ್ನು ಅವನಿಗೆ ಕೊಟ್ಟ. ತಕ್ಷಣ ಆ ಮನುಷ್ಯ ಹೇಳಿದ್ದು,"
ನಾವಿದನ್ನು ಹಂಚಿಕೊಂಡು ತಿನ್ನಬಹುದು."😍
(ಇಂಗ್ಲಿಷ ಮೂಲ)
No comments:
Post a Comment