ವನವಾಸಗಳು ತಕ್ಕಮಟ್ಟಿಗೆ ಯಶಸ್ವಿ ಅನಸ್ತಾಯಿದೆ...ಆ ಮಾತಿಗೆ ಇಂದಿಗೆ ಎರಡೂವರೆ ತಿಂಗಳಾದ ಮೇಲೆ supporting belt ರಾತ್ರಿಹೊತ್ತಿನಲ್ಲಿ ಮಲಗುವಾಗಷ್ಟೇ ಸಾಕು...ಇನ್ನೂ ಕೆಲ
ದಿನ Exercises ಬೇಕು ಎಂಬಲ್ಲಿಗೆ
ನಿಂತಿದೆ.ಇನ್ನೆರಡು ದಿನಗಳ ನಂತರ ಮತ್ತೊಂದು ಡಾಕ್ಟರ್ visit ಆದ ಮೇಲೆಯೇ ಮುಂದಿನದು ಗೊತ್ತಾಗಬೇಕು...
ಪರಿಸ್ಥಿತಿ ಗಂಭೀರವಿಲ್ಲ.
ಮನೆಗೆ ಬರುವ maids ಗಳ ಸಹಾಯದಿಂದ ದಿನಚರಿ ವ್ಯತ್ಯಾಸ ವಿಲ್ಲದೆ ಎಂದಿನಂತಿದೆ.ಆದರೆ ಈ ಅವಧಿಯಲ್ಲಿ ಓದು- ಬರಹ- ಫೇಸ್ಬಕ್ಗಳ ಗಂಭೀರ ಪಥ್ಯ ನಡೆದು complete
Control ಸಿಕ್ಕದ್ದು ಒಳ್ಳೆಯದೋ/ ಕೆಟ್ಟದ್ದೋ ತಿಳಿಯುತ್ತಿಲ್ಲ.ರೂಢಿ ತಪ್ಪಬಾರದೆಂದು ಆಗಾಗ ಏನೋ ಒಂದಿಷ್ಟು ಹಾಕಿದರೂ ಅದಕ್ಕೆ ಗಾಂಭೀರ್ಯ- ಘನವಾದ ಉದ್ದೇಶ ಗಳೇನೂ ಇಲ್ಲ.ಸಧ್ಯದ ಪರಿಸ್ಥಿತಿಯಲ್ಲಿ ಒಬ್ಬಳೇ ಇದ್ದಾಗ ಏನಾದರೂ ಮಾಡಲೇಬೇಕಲ್ಲ, ಅದಕ್ಕೊಂದು ಮಾರ್ಗ ಅಷ್ಟೇ...
ಹಾಗೆ ನೋಡಿದರೆ ಫೇಸ್ಬುಕ್
ನಲ್ಲೂ ಮೊದಲಿನ ಹಸಿವು ಉಳಿದಿಲ್ಲ. ಕಣ್ಣಾಡಿಸುವದು- ಎಷ್ಟು ಬೇಕೋ ಅಷ್ಟಕ್ಕೇ ಮೊಬೈಲ್ ಆರಿಸುವುದು ಚನ್ನಾಗಿ ರೂಢಿಯಾಗಿದೆ.ಮೊದಲಿನ ಚಡಪಡಿಕೆ ಕಾಣುವುದಿಲ್ಲ.ಇದು ನನ್ನ
ವಯೋಸಹಜ ಲಕ್ಷಣವೋ,ಅಥವಾ
ಮೊಬೈಲಿನಲ್ಲಿಯ ಅಧ್ವಾನಗಳೋ
ಸ್ಪಷ್ಟವಾಗಿಲ್ಲ...
ಏನಾದರೇನು, ಆದದ್ದೆಲ್ಲ
ಒಳ್ಳೆಯದಕ್ಕೇ...
No comments:
Post a Comment