ನನಗೆ ಮೊದಲಿನಿಂದಲೂ ದೊಡ್ಡ ದೊಡ್ಡ ಆಶೆಗಳಿಲ್ಲ. ಹುಚ್ಚು ಮಹಾತ್ವಾ ಕಾಂಕ್ಷಿಯಲ್ಲ.ಹತ್ತಾರು ಜನರಿದ್ದ ಬಡ ಕುಟುಂಬದಲ್ಲಿ ಬೆಳೆದ ಕಾರಣವೋ ಏನೋ ಒಂದು ಚಿಕ್ಕ ಮನೆ/ ಕುಮದ್ವತಿ ನದಿ/ ಊರ ಹೊರಗೊಂದು ಶಾಲೆ/ದೊಡ್ಡದಾದ ಕುಟುಂಬ/ ಊರತುಂಬ ಸ್ನೇಹಿತರು ಇದು ನಮ್ಮ ಬದುಕು. SSLC ನಂತರ ಮೂರು ವರ್ಷ ಕಾದು ೧೯ವರ್ಷಕ್ಕೆ ಧಾರವಾಡಕ್ಕೆ ಬಂದಮೇಲೆ degree ಅಂತ ಸಿಕ್ಕದ್ದು.ಆದರೆ ನಲವತ್ತು ವರ್ಷಗಳಿಗೂ ಮಿಕ್ಕಿ ಬಾಡಿಗೆ
ಯವರೊಂದಿಗೆ ಒಂದೇ ಮನೆಯಲ್ಲಿ ಕಳೆದ ಬದುಕು ನನಗೆ ವಿಶ್ವವಿದ್ಯಾಲಯ ದ ಅನುಭವ ಕೊಟ್ಟಿತು. ಸಹನೆ/ಸಹಕಾರ/ಕಷ್ಟಗಳನ್ನು ಕೊಟ್ಟಷ್ಟೇ ಅಪರೂಪದ ಸವಿ ನೆನಪುಗಳನ್ನು ಮಡಿಲು ತುಂಬಿತು. ಮೂರು ಪುಸ್ತಕಗಳನ್ನು ಬರೆದರೂ ಇನ್ನೂ ಅರ್ಧ ಆಗಿಲ್ಲ ಎಂಬ ಭಾವ.ಒಡಹುಟ್ಟಿದವರು /ಸ್ನೇಹಿತರ ಅಭಯ ಹಸ್ತವಿದೆ.ಮಕ್ಕಳು ಚನ್ನಾಗಿ ನೆಲೆಗೊಂಡಿದ್ದಾರೆ.ಆಗಾಗ ಎದುರಾಗುವ ಕಷ್ಟಗಳನ್ನು ಎದುರಿಸುವ ತಾಕತ್ತು ಬಂದಿದೆ...ಸಧ್ಯಕ್ಕೆ ಬದುಕಿನಲ್ಲಿ ಚಿಕ್ಕ ಪುಟ್ಟ ಖುಶಿಯ ಅನ್ವೇಷಣೆಯಲ್ಲಿ ದ್ದು ಪ್ರತಿಯೊಂದನ್ನೂ ಇಡಿಯಾಗಿ ಸಂಭ್ರಮಿಸುವ ನಿಟ್ಟಿನಲ್ಲಿ ಪ್ರಯತ್ನ ಅಷ್ಟೇ...ಬದುಕು ಉಳಿದದ್ದಾದರೂ ಇನ್ನೆಷ್ಟು???
ಪ್ರತಿದಿನದ ಸುದ್ದಿ/ ಸಮಾಚಾರ ಗಳನ್ನು ನೋಡಿದರೆ/ಓದಿದರೆ ಪ್ರತಿ ಕ್ಷಣವೂ/ಪ್ರತಿ ದಿನವೂ ನಮಗೆಲ್ಲ ಹೊಸ ಹುಟ್ಟೇ!!!
No comments:
Post a Comment