Thursday, 3 July 2025

           ನಿನ್ನೆ ಫೇಸ್ಬುಕ್ ನೋಡುತ್ತಿದ್ದೆ.
ಚಿತ್ರಮಿತ್ರರಿಂದ ನಿರ್ಮಿತ ಅನೂ ಳ ಹಲವು ರೂಪಗಳನ್ನು ಒಂದು Frame ನಲ್ಲಿ ನೋಡಿ/ಹಿಗ್ಗಿ/ಆನಂದಿಸುತ್ತಿದ್ದಾಗ ಲೇ ರಚನಾ ಸೋಮ ಅದರಲ್ಲಿ ಇಣುಕಿದರು...ನಾನೂ ನನ್ನನ್ನೇ ಹಾಗೆ
ಕಲ್ಪಿಸಿಕೊಂಡು ಚಿತ್ರಮಿತ್ರನಿಗೆ 'ನನಗೂ
ಅದನ್ನು ಕಲಿಸಿ'- ಅಂದೆ.'ಅಸಾಧ್ಯ'- ಅನ್ನ
ಲಾಗದೇ/'ಪಾಪ! ಅಜ್ಜಿ ಕೇಳಿದೆ' ಅನ್ನೋ ಕನಿಕರದಿಂದಲೇ ಇವುಗಳನ್ನು ಹದಿನೈ ದು ನಿಮಿಷಗಳಲ್ಲಿ‌ ಮಾಡಿ ಕಳಿಸಿದರು.
ನಾನು ಇಂಥದಕ್ಕೆ ತಕ್ಕವಳಲ್ಲ, ಗೊತ್ತು,-
ಆದರೆ ನನ್ನ ' ಚಿನ್ನಿ ಚಿನ್ನಿ ಆಸೆಗೆ ಅದು ಗೊತ್ತಿಲ್ಲ'-
             ‌ಅದಕ್ಕೆ ಇದು ನೈವೇದ್ಯ... ಚಿತ್ರನಿಗೆ/ ಅವನ ಉದಾರತನಕ್ಕೆ/ ಅವನ ಕ್ರಿಯಾಶೀಲತೆಗೆ,
  ‌‌‌ ನನ್ನದೊಂದು ನಮಸ್ಕಾರ...

       

No comments:

Post a Comment

ನೀನಿನ್ನೂ ಇರಬೇಕಿತ್ತು ಮನೋಜ...                       ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...