Tuesday, 1 July 2025

     ‌ನಾವು ಸಣ್ಣವರಿದ್ದಾಗ ಇಡೀ ಊರಿಗೆ ಒಬ್ಬರೋ/ಇಬ್ಬರೋ ಡಾಕ್ಟರ್
ಗಳು...ಅವರ ಡಿಗ್ರೀ ಏನೂಂತ ಗೊತ್ತಿಲ್ಲ... ಒಂದೊಂದು ಅಂಗಕ್ಕೆ ( ಕಣ್ಣು/ ಕಿವಿ/ ಮೂಗು ಇತ್ಯಾದಿ) ಒಬ್ಬೊಬ್ಬ ಡಾಕ್ಟರ್ ಕಲ್ಪನೆಯಲ್ಲೂ ಇರಲಿಲ್ಲ...ಇದ್ದ ಒಬ್ಬರೇ ಧನ್ವಂತರಿ ಪ್ರಸಾದ...ಔಷಧ ಬರೆದು ಕೊಡುವು ದೂ ಕಡಿಮೆಯೇ.ಹೋಗುವಾಗಲೇ ಒಂದು ಬಾಟಲಿ ಒಯ್ಯಬೇಕು .ಮರಳಿ ಬರುವಾಗ ಅದರಲ್ಲಿ ಬಣ್ಣದ ನೀರು/ಗುಳಿಗೆ- ಪುಡಿ ಎಂಥದೋ ಇದ್ದ
ನಾಲ್ಕೈದು ಔಷಧ ಚೀಟಿಗಳು...ಹಣ ಕೈ ಮೇಲೆ ಕೊಟ್ಟು ಬಂದದ್ದು ಇಲ್ಲವೇ ಇಲ್ಲ.
ಅಪ್ಪನ ಹೆಸರಲ್ಲಿ ಉದ್ರಿ...ಅಷ್ಟಾದರೂ
ಒಂದೇ ಒಂದು ಕ್ಷಣ ಡಾಕ್ಟರ್ ಮೇಲೆ
ಅಪನಂಬಿಕೆ ಇಲ್ಲ...ಎರಡು ದಿನ ನಮ್ಮ ಚಟುವಟಿಕೆ ಮಂದ...ನಂತರವೋ ಮತ್ತೆ ಫುಲ್ ಆನಂದ...ಮೈಮೇಲೆ ಒಂದೋ/ಎರಡೋ ಗಾಯದ ಪಟ್ಟಿ ಗಳು ನಿತ್ಯದಾಭರಣ...
             ‌ ಧಾರವಾಡಕ್ಕೆ ಬಂದಮೇಲೆ
ಸ್ವಲ್ಪು ಲೆವೆಲ್ ಮೇಲಾಯಿತು...ದವಾ ಖಾನೆ ಎಂದು ಕರೆಯಲಾಗದ/ ಒಂದೆರಡು ಬಾಕುಗಳನ್ನು ರೋಗಿಗಳಿಗೆ
ಕೂಡಲು ಹಾಕಿ/ ಡಾಕ್ಟರ್ ತಪಾಸಣಾ
ವಿಭಾಗಕ್ಕೆ ಒಂದು curtain ಜೋತು ಬಿಟ್ಟು ಬೇರ್ಪಡಿಸಿದ ಕೋಣೆ- ಇಷ್ಟು
Interiors...ಒಬ್ಬ  ಹುಡುಗ ಅಟೆಂಡರ್.ಹದಿನೈದು ನಿಮಿಷ ಮೊದಲು ಬಂದು ಕಸ ಉಡುಗಿದಂತೆ ಮಾಡಿ, ಒಂದು ಸ್ಟೂಲ್ ಹಾಕಿಕೊಂಡು ಕುಳಿತರೆ ಅವನೇ ರಿಸೆಪ್ಶನಿಸ್ಟ...ಹೆಸರು ಕರೆದು ಒಬ್ಬೊಬ್ಬರನ್ನೇ ಒಳಗೆ ಬಿಡುವುದೇ ಜಗತ್ತಿನ ಅತಿದೊಡ್ಡ ಕಾರ್ಯ ಎಂಬ ಭಾವ ಅವನಿಗೆ... ಒಮ್ಮೊಮ್ಮೆ ಡಾಕ್ಟರ್ ಸೂಚನೆ ಯ ಮೇರೆಗೆ ಅಳತೆ/ ಬಣ್ಣಗಳ ಅಂದಾಜಿನ ಮೇಲೆ ಅವನೇ ಔಷಧಿ ಕೊಡುವ  ಕಂಪೌಂಡರ್ ಆಗುತ್ತಿದ್ದುದೂ ಇತ್ತು. ಆದರೂ ಯಾರ ಮೇಲೂ ಕಿಂಚಿತ್ತೂ ಅನುಮಾನ/ಸಂಶಯ ಇದ್ದರೆ ದೇವರಾಣೆ...ಔಷಧದ ಸ್ವಭಾವ/ ಗಾತ್ರ/ಪ್ರಮಾಣ ಇದರಲ್ಲಿ ಕಿಂಚಿತ್ತೂ ಜ್ಞಾನವಿಲ್ಲದ, ಅದರಿಂದಾಗಿಯೇ ಎಳ್ಳಷ್ಟೂ ಸಂಶಯ+ ಶಂಕೆ ಇಲ್ಲದ ನಮ್ಮ ಬದುಕು ಸಮೃದ್ಧವಾಗಿತ್ತು...
 ‌ ‌          ಬೆಂಗಳೂರಿಗೆ ಬಂದ ಮೇಲಿನ
ಅನುಭವ ಬರೆಯಲು ಒಂದು ಪುಸ್ತಕ ವನ್ನೇ ಬರೆಯಬೇಕು.ಅದು ಅವಶ್ಯವೇ ಇಲ್ಲ...ಎಲ್ಲರಿಗೂ ವೇದ್ಯ...ನೆಗಡಿ+ ಕೆಮ್ಮಿಗೂ Hype...ಹತ್ತಾರು Appointments+ನೂರಾರು ಪರೀಕ್ಷೆ ಗಳು/ಲಕ್ಷಗಟ್ಟಲೇ ಖರ್ಚು/ಅದಕ್ಕನು ಗುಣವಾಗಿ ದಿನಕ್ಕೊಂದರಂತೆ ಅಷ್ಟೇ ಬಗೆಯ ರೋಗ - ರುಜಿನಗಳು.ಸವಾಲು ಗಳು- ಡಾಕ್ಟರ್ ಹಾಗೂ ರೋಗಿ
ಇಬ್ಬರಿಗೂ...ಸಮಪ್ರಮಾಣದಲ್ಲಿ...
      ‌ ಇಷ್ಟೆಲ್ಲವುಗಳ ಮಧ್ಯೆ ಡಾಕ್ಟರುಗಳ ಬದುಕು ಅದೆಷ್ಟು ಸಂಯಮ/ಸಮಯ/ಸಾವಧಾನಗಳಿಂದ ಇರಬೇಕೆಂದು ನೆನೆದರೆ ಗಾಬರಿಯಾಗು ತ್ತದೆ...ಎಲ್ಲವನ್ನೂ ಒತ್ತರಿಸಿಟ್ಟುಕೊಂಡು ಹಗಲು- ರಾತ್ರಿಯನ್ನದೇ ಸೇವೆ
ಮಾಡುವ ಎಲ್ಲ ವೈದ್ಯ ಸಮುದಾಯಕ್ಕೆ
ನನ್ನ ಹಾರ್ದಿಕ ಅಭಿನಂದನೆಗಳು/ಅಭಿವಂದನೆಗಳು...




No comments:

Post a Comment

ನೀನಿನ್ನೂ ಇರಬೇಕಿತ್ತು ಮನೋಜ...                       ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...