ದಿನ ಕಳೆದವು. ಈ ಸಲ ಅದರ ಬಗ್ಗೆ ಬರೆಯಲು ತುಂಬಾನೆ ನೋವು ಹಾಗೂ ಬೇಸರವಾಗುತ್ತಿದೆ.ಅದೇ ಜನ/ಅವೇ ಮನೆಗಳು/ಭಾವ ಬೇರೆ/ನೋವು ಬೇರೆ...
ಮನೆ ತುಂಬ ಜನ- ಮಾತಿಲ್ಲ...
ಏನೇನೋ ಕೆಲಸ---ಖುಶಿಯ ಸದ್ದಿಲ್ಲ... ಎಲ್ಲವೂ ತನ್ನಷ್ಟಕ್ಕೇ/ಒಂದು ಒಪ್ಪಂದಕ್ಕೆ
ಕಟ್ಟುಬಿದ್ದಂತೆ ನಡೆದು ಹೋಗುತ್ತಿದ್ದಂತೆ
ಭಾಸ...ಒಬ್ಬರಿಗೊಬ್ಬರದು ಅನಿವಾ
ರ್ಯವಾಗಿ - ಅವಶ್ಯವಿದ್ದಷ್ಟೇ ಮಾತು ಕತೆ.ಮಾತನಾಡದಿದ್ದರೇ ಹಿತ-ಎಂಬ ಭಾವ..ಏನು ಮಾತನಾಡಿದರೆ ಯಾರಿಗೆ
ಏನು ನೋವೋ ಎಂಬ ದುಗುಡ... ಏನೋ ಮನಸ್ಸಿನಲ್ಲಿ ಚಡಪಡಿಕೆ/ತೀರ ದ ಕಸಿವಿಸಿ...
ಮನೋಜ ನನ್ನ ಕೊನೆಯ ಮಗಳ ನಂತರ ಒಂದು ವರ್ಷಕ್ಕೆ ಹುಟ್ಟಿ ದವ... ಒಂದೇ ಊರಲ್ಲಿದ್ದುದರಿಂದ ನಮ್ಮದೂ ಕೈಗೂಸಾಗಿ ಬೆಳೆದು ನನ್ನ
ಮಕ್ಕಳ ಜೊತೆ ಆಡಿ ಬೆಳೆದವ...ಶಾಲೆ ಯಲ್ಲಿ ನನ್ನ ವಿದ್ಯಾರ್ಥಿ...ಕಲಿತು ಅಪ್ಪನ
ಜೊತೆ ಶಿಕ್ಷಣ ಸಂಸ್ಥೆಗಳ ಉಸ್ತುವಾರಿಗೆ
ನಿಂತು ತನ್ನದೇ ಕನಸಾದ ' Internatio
nal school ಒಂದನ್ನು ಸ್ಥಾಪಿಸಿದಾಗ
ತನ್ನ ಮಹದಾಸೆಯ ಯೋಜನೆಗಳನ್ನು
ನಮ್ಮೆಲ್ಲರೊಂದಿಗೆ ಹಂಚಿಕೊಂಡು
ಹರ್ಷಿಸಿದವ...ಅಲ್ಪ ಸಮಯದಲ್ಲಿಯೇ
ತನ್ನೆಲ್ಲ ಶಕ್ತಿ ಒಗ್ಗೂಡಿಸಿ ಕೆಲಸ ಮಾಡುತ್ತ
ಕನಸಿನ ಹಾದಿಯಲ್ಲಿಯೇ ನಡೆದವ...
ಅವನೀಗ ಇಲ್ಲ...ದಾರಿಯು
ದ್ದಕ್ಕೂ ಅವನ ಕನಸುಗಳೇ ಹರಡಿವೆ...
ಅವು ಫಲಿಸಬೇಕು...
ಇದು ನಮ್ಮೆಲ್ಲರ ಕನಸೂ
ಹೌದು...
ಕಾಲವೇ ಮದ್ದು - ಅಂತಾರೆ... ಕಾದು ನೋಡಬೇಕು
No comments:
Post a Comment