ಸಹ ಶಿಕ್ಷಕಿಯರು/ಪರಿಚಯಸ್ಥರು/ ಸಂಬಂಧಕರು ಅನ್ನುತ್ತ ಅಷ್ಟಿಷ್ಟು ಭೇಟಿಗಳು/ಕೆಲ ಕಾರ್ಯಗಳು ವೈದ್ಯಕೀಯ ತಪಾಸಣೆಗಳು ಹೀಗೆಯೇ
ಏನೇನೋ...
ಈ ನಡುವೆ ಕೆಲದಿನ ಆರೋಗ್ಯ ಸಮಸ್ಯೆಯಿಂದಾಗಿ bed rest ಕೂಡ ಆಯಿತು.ಆ ಕಾರಣಕ್ಕೆ ಅಂದುಕೊಂಡಷ್ಟು
Plan ಪ್ರಕಾರ ದಿನಗಳು ಕಳೆಯಲಿಲ್ಲ. ಆದರೆ ಸಿಕ್ಕ ದಿನಗಳಲ್ಲೇ ಆದಷ್ಟೂ ದಕ್ಕಿಸಿ
ಕೊಂಡು ಬಂದೆ.ಉಳಿದವರದು ನಮ್ಮನೆ
Function ನಲ್ಲಿಯೂ ಭೇಟಿಯ ಅವಕಾಶ ಒದಗಿತು...
ಧಾರವಾಡವೂ ಉಳಿದ ಸ್ಥಳ ಗಳಂತೆ ಒಳಗೂ/ಹೊರಗೂ ಸಾಕಷ್ಟು ಬದಲಾಗಿದೆ.ನಮ್ಮಂತೆಯೇ ಅನೇಕರಿಗೆ
ವಯಸ್ಸು ಮಾಗಿ,ದೇಹ ಬಾಗಿ,ಆಯುಷ್ಯ ಸರಿದು, ಮನಸ್ಸು ಮುರಿದ ಭಾವ ಕಾಡುತ್ತಿದೆ ಅನಿಸಿತು ನನಗೆ...ನನಗೆ ಮಾತ್ರ ಹಾಗೆನಿಸಿರಲಿಕ್ಕೂ ಸಾಕು... ಏಕೆಂದರೆ ಇತ್ತೀಚೆಗೆ ನಾನು ಸ್ವಲ್ಪ
ಮಟ್ಟಿಗೆ ' ಹಾಗಾಗಿದ್ದೇನೆ'- ಅನಿಸಿದ್ದೂ ಇದೆ...
ಹಾಗಿದ್ದರೂ ಅದೂ ಒಂದು ತಾತ್ಕಾಲಿಕ ಬದಲಾವಣೆ ಎಂಬ ಅರಿವಿದೆ
ನನಗೆ.ಕೆಲಕಾಲವಿದ್ದು ಸರಿದು ಹೋದೀತು, ಹಾಗಾಗಲಿ, ಬದುಕಿನ ಲವಲವಿಕೆ ಹಾಗೇ ಉಳಿದು ಮುಂದೆಯೂ ಮುನ್ನಡೆಸಲಿ ಎಂಬುದಷ್ಟೇ
ಸಧ್ಯದ ಇಚ್ಛೆ- ಬಯಕೆ...
No comments:
Post a Comment