ನಮ್ಮ ತಂದೆ ಪುಸ್ತಕಪ್ರಿಯರು.ದಿನನಿತ್ಯದ ಕೆಲಸ ಮುಗಿಸಿ ಎಷ್ಟೇಸಮಯ ಸಿಗಲಿ ಕೈಯಲ್ಲಿ ಪುಸ್ತಕವಿರಲೇ ಬೇಕು..ಮನೆಗೆ ಯಾರೇಬರಲಿ ಉಭಯ ಕುಶಲೋಪರಿಗೂ ಮುನ್ನವೇ ಪುಸ್ತಕ ಪ್ರಸ್ತಾಪ...ಯಾವ ಹೊಸ ಪುಸ್ತಕ ಬಂದಿದೆ? ಯಾವುದಾದರೂ ಖರೀದಿಸಿದೆಯಾ?ಯಾವುದು ಇತ್ತೀಚೆಗೆ ಮುದ್ರಣ ಕಂಡಿದೆಯಾ?.. ಮುಂತಾಗಿ ಪ್ರಶ್ನೆಗಳ ಸುರಿಮಳೆ...ಅಂದಮಾತ್ರಕ್ಕೆ ನಾವೆಲ್ಲ ಖರೀದಿಸಿಯೇ ಓದುತ್ತಿದ್ದೆವು ಎಂದಲ್ಲ...ನಮಗೆ ಆ ಯೋಗ್ಯತೆ ಎಳ್ಳಷ್ಟೂ ಇರಲಿಲ್ಲ..ನಮ್ಮ ತಂದೆಯ ಪ್ರಾಮಾಣಿಕ ಹುಚ್ಚಿಗೆ ಮನಸೋತು ಆಪ್ತರು,ಮಿತ್ರರು,ಸಂಬಂಧಿಕರೆಂಬ ಭೇದವಿಲ್ಲದೆ ಖರೀದಿಸಿದ ದಿನದಂದೇ ಮನೆಯವರೆಗೂ ತಂದುಕೊಟ್ಟು,'ನೀನು ಓದಿಕೊಡು ರಾಮಣ್ಣಾ' ಅನ್ನುತ್ತಿದ್ದುದೂ ಇತ್ತು...
ಇದರ ಪ್ರಭಾವ, ಉಪಯೋಗ ಅವನ ಎಲ್ಲ ಮಕ್ಕಳಿಗೂ ಪುಸ್ತಕದ ಗೀಳು ಅಂಟಿಸಲು ಸಾಕಷ್ಟಾಯಿತು..ಮನೆಗೆ ಪುಸ್ತಕಗಳು ಬಂದು ನಮ್ಮ ತಂದೆ ಬೇರೆ ಕೆಲಸದಲ್ಲಿದ್ದಾಗ ಅವಸರವಸರಾಗಿಯಾದರೂ ಪರವಾಗಿಲ್ಲ ಉಳಿದವರೂ ಓದುತ್ತಿದ್ದೆವು...
ಇದರ ಪರಿಣಾಮ ನಾನು ಏಳನೇ ವರ್ಗಕ್ಕೆ ಬರುವಷ್ಟರಲ್ಲಿ ನೂರು ಕಾದಂಬರಿಗಳನ್ನು( ಇನ್ನೂ ನೆನಪಿದೆ ..ನೂರನೇಯದು ಅ.ನ.ಕೃ ಅವರ ' ಗರುಡಮಚ್ಚೆ) ಓದಿ ಮುಗಿಸಿದ್ದೆ...ಪುಸ್ತಕ ನಮ್ಮವಲ್ಲವಾದ್ದರಿಂದ ವಿಷಯದ ಆಯ್ಕೆಗಳೂ ನಮ್ಮವಾಗಿರಲಿಲ್ಲ...ಆದರೆನಮ್ಮ ದೂರದ ಸಂಬಂಧಿಕರ ಮನೆಯ ಒಂದು ದೊಡ್ಡ ಕೋಣೆಯೇ ಲೈಬ್ರರಿಯಾದ್ದರಿಂದ,ಕೊಟ್ಟ ಪುಸ್ತಕಗಳನ್ನು ಯಾವುದೇ ರೀತಿಯ ಹಾನಿಗೊಳಗಾಗಿಸದೇ ವಾಪಸ್ ಕೊಡುತ್ತಿದ್ದುದರಿಂದ ನಮಗಲ್ಲಿ ಮುಕ್ತ ಪ್ರವೇಶವಿರುತ್ತಿತ್ತು.....( ಇಂದಿಗೂ ನಾವೆಲ್ಲ ಶ್ರೀ ಭೀಮರಾವ್ ಕುಲಕರ್ಣಿಯವರಿಗೆ ಋಣಿಗಳು) ನಂತರ ಪುಸ್ತಕ ಖರೀದಿಸುವ ಯೋಗ್ಯತೆ ಬಂದಮೇಲೆ ನಾವೆಲ್ಲ ಸೋದರ ಸೋದರಿಯರು ಸಾಕಷ್ಟು ಪುಸ್ತಕಗಳನ್ನು ಖರೀದಿಸಿ ಪುಸ್ತಕ ಪ್ರಿಯರಿಗೆ ಕೊಡಲು ಸಾಧ್ಯವಾದದ್ದು ಧನ್ಯತೆಯ ಭಾವ ವೊಂದನ್ನು ತಂದದ್ದಿದೆ..

ಇಷ್ಟೆಲ್ಲ ಹೇಳಿದ್ದು ದೊಡ್ಡಸ್ತಿಕೆಗಲ್ಲ...ನನ್ನದೊಂದು ಭ್ರಮನಿರಶನವಾದ ಬಗ್ಗೆ....ಇದುವರೆಗೂ ನಾನು ಬಹಳ ಓದಿದ್ದೇನೆ ಎಂಬುದೊಂದು ಪೊಳ್ಳು ಅಭಿಮಾನ ನನ್ನಲ್ಲಿತ್ತು...ನನ್ನ ಸುತ್ತಲಿದ್ದವರನ್ನಷ್ಟೇ ಹೋಲಿಸಿ ಸಾಕಿಕೊಂಡ ಭಾವನೆಯದು, ನನ್ನ ಓದು ಸಾಸಿವೆಕಾಳಿನಷ್ಟೂ ಇಲ್ಲ ಎಂಬುದು ನಾನು ನಿವೃತ್ತಳಾಗಿ ಬೆಂಗಳೂರಿನಲ್ಲಿ ನೆಲೆಸಿ ವಿವಿಧ ಜನ, ಗುಂಪುಗಳು, ಫೇಸಬುಕ್ ಸ್ನೇಹಿತರು, ಅದರಲ್ಲಿಯ ಅಸಂಖ್ಯಾತ ಬರಹಗಾರರ blog ಗಳು,ಪುಸ್ತಕ ಬಿಡುಗಡೆಗಳು,ಅಂತಃಪುರದ ಅಗಣಿತ ಸಾಹಿತಿಗಳ ಸಾಂಗತ್ಯ...
ಅಬ್ಬ! ಟಿ.ನ್ ಸೀತಾರಾಮ್ ಅವರು ಇಂದಿನ post ನಲ್ಲಿ ಬರೆದಂತೆ' ಪುಸ್ತಕ ಸಂತೆಯಲ್ಲಿ ಕಳೆದುಓದ ಬಾಲಕ'...ನ ಅವಸ್ಥೆ..
ಬಾವಿಯಕಪ್ಪೆ ಹೊರಜಿಗಿದು ಬಂದಾಗಿನಷ್ಟೇ ಕಂಗಾಲು...ಎಷ್ಟು ಗಾಬರಿಯಾಗಿದ್ದೇನೆ ಅಂದರೆ ಯಾವುದಾದರೂ ಬರಹಕ್ಕೆ ಒಂದು comment ಹಾಕಲು ಹಿಂಜರಿಕೆಯಾಗುವಷ್ಟು..
ಎಲ್ಲೇ ಹೋಗಲಿ ನನ್ನ ಹರಟೆ ಬಿಚ್ಚುತ್ತಿದ್ದ ನಾನು ಬಾಯಿ ತೆಗೆಯಲು ಬೆದರಿ ಬೆವರುವಷ್ಟು..
' ದೇಶ ಸುತ್ತು..
ಕೋಶ ಓದು...' ಅಂತ ಅಷ್ಟಿಲ್ಲದೇ ಹೇಳಿದ್ದಾರೆಯೇ ಹಿರಿಯರು...
ಕೊನೆಯಲ್ಲೊಂದು ಮಾತು....ನನ್ನ ಈಸೋಲು ನನ್ನನ್ನು ಕುಗ್ಗಿಸಿಲ್ಲ....ಬದಲಾಗಿ ನೂರ್ಮಡಿ ಹಿಗ್ಗಿಸಿದೆ...
ಸಧ್ಯ ಫೇಸಬುಕ್ ನಲ್ಲಿಯ book cover challenge ಹಾಗೂ ರಾಜಕುಮಾರ ಮಡಿವಾಳ ಅವರ ಬ್ರಹತ್( ಅವರಮಟ್ಟಿಗಲ್ಲ) ಪುಸ್ತಕ ಸಂಗ್ರಹ ನನ್ನೆಲ್ಲ ನೆನಪುಗಳನ್ನು ಹಸಿರಾಗಿಸಿದ್ದಕ್ಕೆ ಸಂಬಂಧಿಸಿದ ಎಲ್ಲರಿಗೂ ನಾನು
ಆಆಆಆಆಭಾರೀಈಈಈ..

No comments:
Post a Comment