ನನಗೆ..."
ಮೊದಲಿನಿಂದಲೂ ನನಗೆ ಡೈರಿ ಬರೆಯುವ ಚಟವಿತ್ತು.ಹಾಗಂತ ನಮ್ಮದು ಅತಿ ಬಣ್ಣ ಬಣ್ಣದ ಬದುಕು/ ಅಥವಾ ಕಣ್ಣು ಕುಕ್ಕುವ ಬಿಸಿನೆಸ್ ಇರುವ ಜೀವನವೇನೂ ಅಲ್ಲ.ಒಬ್ಬ ಸಾಮಾನ್ಯ ಶಿಕ್ಷಕಿಯ ಮೇಲಿನ ಅಭಿಮಾನಕ್ಕೋ/ ಪ್ರೀತಿ-ಗೌರವ ಅಂತಲೋ ನನ್ನ ವಿದ್ಯಾರ್ಥಿಗಳಲ್ಲಿ ಕೆಲವರು ಹೊಸವರ್ಷದಂದು ಡೈರಿಗಳನ್ನು ಕಾಣಿಕೆಯಾಗಿ ಕೊಡುತ್ತಿದ್ದರು.ಹೇಗೂ ಇದೆಯಲ್ಲ ಅಂತ ಪ್ರಾರಂಭಿಸಿ,ಶುರುವಾಗಿದೆಯಲ್ಲ ಅಂತ ಬರೆಯುತ್ತಹೋಗಿ,ಬರೆದದ್ದನ್ನೇಕೆ
ನಿಲ್ಲಿಸಬೇಕು ಎಂದು ಮುಂದುವರಿಸಿ,
ಅದೇ ಹವ್ಯಾಸವಾಗಿ ಬೆಳೆದದ್ದು ಸಹಜ.
ನಿವೃತ್ತಳಾಗಿ ಮನೆ ಬದುಕಿಗೆ ಒಗ್ಗಿಕೊಂಡ ಮೇಲೆ ಸೊರಗುತ್ತ ಹೋದ
ಆ ಹವ್ಯಾಸ ಇಲ್ಲವಾಗುವ ಭಯ ಹುಟ್ಟುವ ಮೊದಲೇ face book ಬಂದು ಅದಕ್ಕೆ ಮತ್ತೆ ಜೀವ ತುಂಬಿತು. ಕನ್ನಡ/ಇಂಗ್ಲಿಷ್ typing ಕಲಿತು/ practice ಇರಲಿ ಎಂದು ಬೇಕಾದ್ದು/ ಬೇಡದ್ದು ಕುಟ್ಟುತ್ತ ಹೋಗಿ 'ಹಾಡ್ಹಾಡ್ತ ರಾಗ' ಅಂದ ಹಾಗೆ ಒಂದು ಲಯ ಕಂಡು,ಅನೇಕ ಲಘು ಬರಹಗಳು ಸಂಗ್ರಹವಾಗಿ ' ನೀರಮೇಲೆ ಅಲೆಯ ಉಂಗುರ'- ಎಂಬ ಪುಸ್ತಕ ರೂಪದಲ್ಲಿ ಹೊರಬಂತು.
ಈಗ ನನ್ನ ಅದರ ಸಖ್ಯ ಅವಿನಾಭಾವ ಸಂಬಂಧದಂತೆ.ಒಂದು ರೀತಿಯಲ್ಲಿ ನನ್ನ personal diary ಅನ್ನಬಹುದು.ಮನಸ್ಸಿನಲ್ಲಿ ಮೂಡಿ,
ತಲೆಯಲ್ಲಿ ವಿಚಾರರೂಪದಲ್ಲಿ ಬಂದು ವೈಯಕ್ತಿಕವಾಗಿ ಅನಿಸಿದ್ದನ್ನೂ ಸಹಿತ
ಅತಿ ವೈಯಕ್ತಿಕ ಅನ್ನಿಸದಂತೆ
generalise ಮಾಡಿ ದಾಖಲಿಸುವ ಕೆಲಸಕ್ಕೆ ಅಂಟಿಕೊಂಡೆ.ಪರಿಣಾಮ ನನ್ನ ಎರಡನೇ ಪುಸ್ತಕ ' ತುಂತುರು...ಇದು ನೀರಹಾಡು...' ಬಂತು. Face book ನಲ್ಲಿಯ ನನಗೆ ಸೇರಿದ/ ಇತರರಿಗೆ ಪ್ರಯೋಜನವಾಗುವ ಇತರರ post
ಗಳನ್ನೂ share ಮಾಡುವದು, ಮೆಚ್ಚಿದ ಇತರ ಭಾಷೆಯ ಕವನಗಳನ್ನು
ಕನ್ನಡಕ್ಕೆ ಭಾವಾನುವಾದ ಮಾಡುವದು
ಮುಂತಾದ ಚಟುವಟಿಕೆಗಳು ಈಗಲೂ ಜಾರಿಯಲ್ಲಿ ಇವೆ.
" ಎಲ್ಲ ಓದಲಿ ಎಂದು ನಾನು ಬರೆಯುವದಿಲ್ಲ, ಬರೆಯುವದು ಅನಿವಾರ್ಯ ಕರ್ಮ ನನಗೆ"- ಎನ್ನಬಹುದು.ಮೊದಲಿನಂತೆ ಜಾಸ್ತಿ ಹೊರಹೋಗುವದಿಲ್ಲ ಎಂಬುದೊಂದು
ಕಾರಣವಾದರೆ ಆದಾಗ/ ಆದಷ್ಟು/ ಆದಂತೆ ಬರೆಯುವದರ ರೂಢಿ ತಪ್ಪಬಾರದು,ಆ ಕಾರಣದಿಂದಲಾದರೂ
ಚಟುವಟಿಕೆಗಳಿಗೊಂದು 'ಗತಿ' ಇರಲಿ
ಎಂಬುದಷ್ಟೇ ನನ್ನ ಉದ್ದೇಶ.
ನಿನ್ನೆ ಧಾರವಾಡದ ಪೋಸ್ಟ
ಒಂದನ್ನು share ಮಾಡಿದ್ದೆ.ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್
ಬಜೆಟ್ ಮಂಡನೆಯ ಸಮಯದಲ್ಲಿ ಉಟ್ಟುಕೊಂಡದ್ದು ಧಾರವಾಡದ ಕಸೂತಿ ಸೀರೆ - ಎಂಬ ಸುದ್ದಿ ರಾಷ್ಟ್ರೀಯ
ಮಟ್ಟದಲ್ಲಿ ಸದ್ದು ಮಾಡಿದ ವೇಳೆಯಲ್ಲಿ
ಧಾರವಾಡದವಳಾದ ನಾನು ಸುಮ್ಮನೇ
ಕೂಡಲಾದೀತೇ?
ಇಂದು ಬೆಳಿಗ್ಗೆ ನನಗೆ ಬಂದ
ಮೊದಲ ಸಂದೇಶ ಆ ಸುದ್ದಿಯನ್ನು ಪ್ರಸಾರ ಮಾಡಿದ ವಾಹಿನಿಯವರದು.
ಇಷ್ಟು ಸರಳವಾಗಿ/ ಸುಲಭವಾಗಿ/
ಧನ್ಯವಾದಗಳು ಕೂಡಿಬೀಳುವದಾದರೆ
ಅವಕಾಶ ಯಾಕ್ರೀ ಬಿಟ್ಟು ಕೊಡಬೇಕು!? ನಮಗಂತೂ ಪ್ರಚಾರ ಗಿಟ್ಟಿಸಿಕೊಳ್ಳುವ ಭಾಗ್ಯವಿಲ್ಲ.ಪ್ರಚಾರ ವಾಹಿನಿಯ ಧನ್ಯವಾದಗಳಾದರೆ ಅದೇ
ಆದೀತು...
No comments:
Post a Comment