ಗಕ್ಕನೇ ನಿಂತೆ.ಅದೊಂದು Pre wedding photo Shoot...ಒಂದು ಹೆಣ ಹೂಳುವ ಕುಣಿ...ಅದರಲ್ಲಿ ಮದುವೆ ವೇಷ ಭೂಷಣಗಳೊಂದಿಗೆ
ಭಾವೀ ವಧು- ವರರು ಕೈ ಕೈಹಿಡಿದು/ ಕಣ್ಣುಮುಚ್ಚಿಕೊಂಡು ಮಲಗಿದ್ದಾರೆ.
" ಕೊನೆಯ ಉಸಿರಿರುವವರೆಗೂ ನಾವು ಒಬ್ಬರಿಗೊಬ್ಬರು ಬಿಟ್ಟಿರುವದಿಲ್ಲ ವೆಂಬ ಭಾವ ಪ್ರದರ್ಶನವಿರಬಹುದು.
ವಿಚಾರವೇನೋ ಉದಾತ್ತವೇ...ಆದರೆ ಹೇಳಿದ ರೀತಿಯಲ್ಲಿ ಸ್ವಲ್ಪ ಭಿನ್ನವಾಗಿ ದ್ದರೆ ಒಳ್ಳೆಯದಿತ್ತೇನೋ...
' ಬದಲಾವಣೆಯೊಂದೇ ಶಾಶ್ವತ'- ಎಂಬ ಮಾತಿದೆ.ಅದು ಆಗ ಬೇಕಾದ್ದೇ...ಆಗತಕ್ಕದ್ದೇ...Wedding Shoot ನಲ್ಲಿ ಆಕಾಶದಲ್ಲಿ ಹಾರಲಿ, ಸಾಗರದಲ್ಲಿ ತೇಲಲಿ...ಆದರೆ ಮಂಗಲಮಯ ಕಾರ್ಯಗಳ ಮೊದಲೇ
'ಶವದ ಕುಣಿ'- ಯಲ್ಲಿ...ತಲೆ ಝಾಡಿಸಿ, fb ಮುಚ್ಚಿ ಹೊರಬಂದೆ... ಆದರೆ ಒಳಹೊಕ್ಕದ್ದು ನಮ್ಮ ಕಾಲದ ಮದುವೆ ಯ ದಿನಗಳಿಗೆ...
ಆಗಿನ ಕಾಲದಲ್ಲಿ ಮದುವೆ ಎಂದರೆ ಕೌಟುಂಬಿಕ ಕಾರ್ಯಕ್ರಮವಲ್ಲ .ಊರಹಬ್ಬ...ನಾನು ,ನೀನು ಎನ್ನದೇ ಎಲ್ಲರದೂ ಒಳಗೊಳ್ಳುವಿಕೆ ಸ್ವಯಂಪ್ರೇರಿತವಾದದ್ದು. ಯಾರೂ ಯಾರಿಂದಲೂ ಹೇಳಿಸಿಕೊಳ್ಳದೇ ತಮ್ಮಿಂದ ಆದದ್ದನ್ನು ಮಾಡುತ್ತ, ತಿಳಿಯಲಾರದ್ದನ್ನು ತಿಳಿದವರಿಂದ ಕಲಿಯತ್ತ ಒಟ್ಟು ಕೆಲಸವನ್ನು ಪೂರೈಸುವದು.ಬೇರೆ ಬೇರೆ ವಯಸ್ಸಿನವರಿಗೆ ಬೇರೆ ಬೇರೆ ಕೆಲಸಗಳ ಜವಾಬ್ದಾರಿ. ಎಲ್ಲರಿಗೂ ಚಹ/ ತಿನಸಿನ
ವ್ಯವಸ್ಥೆಯಾದರೆ ಸಾಕು
No comments:
Post a Comment