" ನಾನು ಈ ಸಲ ಗಣೇಶನ ಹಬ್ಬಕ್ಕೆ
ಇರುವುದಿಲ್ಲ, ನನ್ನ ಈ ವರ್ಷದ PhD class ನ last session, Sept 16 ರಿಂದ 26 ವರೆಗೆ ಇದೆ.ನಾನು ಕೇರಳದಲ್ಲಿ ಇರುತ್ತೇನೆ,"- ಮಗಳೆಂದಾಗ
ಏನು ಹೇಳಬೇಕೋ ತಿಳಿಯಲಿಲ್ಲ. "ನೀನು ಇರುವುದಿಲ್ಲ ಎಂದರೆ ನಾನೂ ಅಲ್ಲೇ ಇದ್ದು ಏನಾದರೂ ಮಾಡಿಕೊಳ್ಳು ತ್ತೇನೆ ಅಮ್ಮ.ನಾನೂ ಮುಂದಿನ ತಿಂಗಳು ಬರುತ್ತೇನೆ"- ಇದು Madras IIT ಯಲ್ಲಿ ಓದುತ್ತಿರುವ ಅವಳ ಮಗನ / ನನ್ನ ಮೊಮ್ಮಗನ ಶರಾ... ಅಯ್ಯೋ ದೇವರೇ, ಇದ್ದ ನಾಲ್ವರಲ್ಲಿ ಇಬ್ಬರು ಎದ್ದು ಹೋದರೆ ಎಂಬ ಹಳಹಳಿಕೆ ಸುರುವಾಯಿತು. ಅಭ್ಯಾಸದಂಥ ಮುಖ್ಯ ವಿಷಯದಲ್ಲಿ ಯಾವ ರೀತಿಯ
ರಾಜಿಯೂ ಆಗುವ ಸಾಧ್ಯತೆಯಿಲ್ಲದೇ
ಎಲ್ಲರೂ ಅಸಹಾಯಕರಾಗಬೇಕಾಯಿ ತು.
ಗಣೇಶನಿಗೆ ವಿಘ್ನ ವಿನಾಶಕ
ಎಂಬ ಹೆಸರು ಸುಮ್ಮನೇ ಬಂದಿದೆಯೇ ?ಹಬ್ಬ ಕೇವಲ ಎರಡು ದಿನಗಳು ಬಾಕಿ ಇರುವಾಗ ಕೇರಳದಲ್ಲಿ ನಿಫಾ ವೈರಸ್ ಹಾವಳಿ ತೀರ ಹೆಚ್ಚಾಗಿ ಎಲ್ಲ ಶಾಲೆ
ಕಾಲೇಜುಗಳು ಬಂದಾಗಿ, ಕ್ಲಾಸುಗಳೆಲ್ಲ
Online ಆಗಬೇಕೆಂಬ ಕೋವಿಡ್ ಕಾಲದ ಪರಿಹಾರ ಘೋಷಿತವಾಯ್ತು. ಮಗಳು ಊರಿಗೆ ಹೋಗುವುದು cancel ಆಯ್ತು...ನೀನಿದ್ದರೆ ನಾನೂ
ಇವತ್ತೇ ಬರುತ್ತೇನೆ ಅಂದ ಮೊಮ್ಮಗ...
ಕೊನೆಯ ಕ್ಷಣದ climax ಧಿಡೀರನೇ
ಬದಲಾದದ್ದೇ ಮನೆಯ ವಾತಾವರಣ ದಲ್ಲಿ ವಿದ್ಯುತ್ ಸಂಚಾರವಾಗಿ ಇಂದಿನ
ಗಣೇಶನ ಹಬ್ಬ 'ದ್ವಿಗುಣ ಸಂತಸ'ದಲ್ಲಿ
ಸಂಪನ್ನವಾಯಿತು.ಯಥಾಪ್ರಕಾರ ಪಂಚ ಪಕ್ವಾನ್ನ( ಹೋಳಿಗೆ/ ಕಡುಬು/ ಮೋದಕ/ ಖೀರು/ ಪುರಿ) ಎಲ್ಲವೂ
ತಯಾರಾಗಿ ಗಣೇಶನೊಂದಿಗೆ ಭಕ್ಷಿಸಿ ನಾವೂ ಸಂಪ್ರೀತವಾದೆವು ಎನ್ನುವಲ್ಲಿಗೆ
ಈ ಕತೆ ಮುಗಿಯಿತು...
No comments:
Post a Comment