Wednesday, 20 September 2023

    ‌‌     ಅದು ಬಹುಶಃ ಎಂಬತ್ತನೇ
ದಶಕದ ಕೊನೆಯ ಭಾಗ.ಮಣ್ಣಿನ ಒಲೆ
ಸ್ಟೋ-ಗಳಿಗೆ Expiry date ಹತ್ತಿರವಾಗಿ
ಗ್ಯಾಸ್/ ಒಲೆಗಳ ಪ್ರವೇಶವಾಗಿತ್ತು. ಆದರೂ ಜನರಿಗೆ ಏನೋ ಅಗೋಚರ ಭಯ. ಹೀಗಾಗಿ ಭಾರತ/ಹಿಂದುಸ್ತಾನ್
(HP)/ Indane ಮುಂತಾದ ಕಂಪನಿಗಳ ಒಡೆಯರು ಎಲ್ಲೆಡೆಗೆ ಹೋಗಿ ಅವುಗಳ ಬಳಕೆ/ ಸುರಕ್ಷಿತತೆ/
ಮಿತವ್ಯಯ ಕುರಿತು ಕಾರ್ಯಕ್ರಮ ಮಾಡುತ್ತಿದ್ದರು...ಹಾಗೇ ಒಂದು ಸಲ ನಮ್ಮ ಶಾಲೆಯಲ್ಲೂ ಅದು ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ quiz
ಕಾರ್ಯಕ್ರಮವಿರುತ್ತಿತ್ತು.ಗೆದ್ದವರಿಗೆ
ಸೂಕ್ತ ಬಹುಮಾನ ಘೋಷಣೆಯ ಪ್ರೋತ್ಸಾಹ ಬೇರೆ...ಗ್ಯಾಸನ್ನು ಉಳಿತಾಯ ಮಾಡುವ ಐದು ವಿಶೇಷ 
ಸೂಚನೆಗಳ ಮಾರ್ಗ ಸೂಚಿಗಳನ್ನು
ತಿಳಿಸುವ ಕಾರ್ಯಕ್ರಮವದು.
 * ಆದಷ್ಟೂ ದೊಡ್ಡ burner ಗಳನ್ನು
ಅನವಶ್ಯಕವಾಗಿ ಬಳಸಬೇಡಿ...
* ಒಮ್ಮೆ ಪದಾರ್ಥಗಳು ಕುದಿಯುವ point ತಲುಪಿದ ಮೇಲೆ ಬರ್ನರ್ ಸಂಪೂರ್ಣ sim ಗೆ ಹಾಕಿ... ಏನೂ ವ್ಯತ್ಯಾಸವಾಗುವುದಿಲ್ಲ.
* ಎತ್ತರದ ಪಾತ್ರೆಗಳಿಗಿಂತ ಅಗಲವಾದ ಪಾತ್ರೆಗಳನ್ನು ಬಳಸುವದರಿಂದ gas ಉಳಿಸಬಹುದು.ಹಾಗೆ ಮಾಡುವದ
ರಿಂದ  ಸಮಯ ಕೂಡ ಉಳಿಸಬಹು 
ದು. 
*Direct cooking ಗಿಂತ cooker ನ
ಬಳಕೆಯಲ್ಲಿ ಹೆಚ್ಚು ಅಡಿಗೆಗಳನ್ನು ಕಡಿಮೆ ಸಮಯದಲ್ಲಿ ಮಾಡಬಹುದು.
* ಅಡಿಗೆಗೆ ಮೊದಲೇ ಎಲ್ಲ ಅವಶ್ಯಕ
ಸಾಮಗ್ರಿಗಳನ್ನು ಸಿದ್ಧವಾಗಿಟ್ಟುಕೊಳ್ಳಿ, ಅಕ್ಕಿ/ ಬೇಳೆಗಳನ್ನು ಮೊದಲೇ ನೆನೆಸಿಡಿ
ಒಲೆ ಹೊತ್ತಿಸಿಟ್ಟು ಅತ್ತಿತ್ತ ತಡಕಾಡುವು ದರಿಂದ gas ಹೆಚ್ಚು ಪೋಲಾಗುತ್ತದೆ-
       ‌‌     ‌ಇಂಥವೇ ಐದು ಮುಖ್ಯ ಸಲಹೆಗಳೊಂದಿಗೆ ಚಿಕ್ಕ ಪುಟ್ಟವನ್ನೂ ಸೇರಿಸಿ ಒಂದು Session ಆಯ್ತು. ಮುಖ್ಯ ಹೇಳಬೇಕಾದ ವಿಷಯವೆಂದರೆ
ಅಂದು ಕೊನೆಯಲ್ಲಿ ಎಲ್ಲವನ್ನೂ  ಚಾಚೂ ತಪ್ಪದೇ ಪುನರುಚ್ಚರಿಸಿ ಗೆದ್ದು, parker pen/ Letter pad ವೊಂದ
ನ್ನು  ಬಹುಮಾನವಾಗಿ ಪಡೆದು
ಬೀಗಿದ್ದು ನಾನು...
                 ಇದ್ದ ಮೂರು ಮಕ್ಕಳ ಹೆಸರುಗಳನ್ನು ಆರು ನಮೂನೆಯಲ್ಲಿ ಕರೆದು ನಗೆಪಾಟಲಾಗುವ ನನಗೂ ಒಂದು ಕಾಲವಿತ್ತು...ಒಂದಿಷ್ಟು ನೆನಪಿನ ಶಕ್ತಿಯಿತ್ತು...ಒಮ್ಮೆ ಬಹುಮಾನವೂ
ಬಂದಿತ್ತು...
       Please , ನನ್ನನ್ನು ನಂಬಿ...

No comments:

Post a Comment

ನಾವು ಒಟ್ಟು ಏಳು ಜನ ಅಣ್ಣತಂಗಿ- ಅಕ್ಕ ತಮ್ಮಂದಿರು...ನಮ್ಮ ಮಕ್ಕಳೆಲ್ಲ ಸೇರಿದರೆ ಹತ್ತೊಂಬತ್ತು...ಅವರವು ಇಪ್ಪತ್ತೆಂಟು...ಕೆಲವರ್ಷಗಳ ಹಿಂದೆ ಮಕ್ಕಳ ದಿನಾಚರಣೆಯ ದಿನ ಆ ...