ಎಲ್ಲರ ಮನೆ- ಮನಗಳಲ್ಲಿ ದೇಶಭಕ್ತಿಯ
ಜೋರಿತ್ತು ಅನಿಸುತ್ತದೆ. ನಮ್ಮಪ್ಪನನ್ನು
ನಾವು ನೋಡಿದ್ದು ಅಪ್ಪಟ ಖಾದಿಧಾರಿ ಯಾಗಿಯೇ,ಬಳಸುವ ಕರ್ಚೀಫಿನಿಂದ
ಹಿಡಿದು...ಮನೆಯ ಗೋಡೆಗಳ ಮೇಲೆ
ನೆಹರು/ಗಾಂಧಿ/ ಚಿತ್ತರಂಜದಾಸ್/
ರವೀಂದ್ರರ ದೊಡ್ಡ ದೊಡ್ಡ ಫೋಟೋಗಳು.ನಾನು ಆರುವರ್ಷದವ ಳಾಗಿ ಶಾಲೆಗೆ ಹೋಗತೊಡಗಿದಾಗಲೂ
ಎಲ್ಲೆಡೆ ಸ್ವಾತಂತ್ರ್ಯದ ಸವಿ/ಸಂಭ್ರಮದ
ಕಾವು ಹಾಗೇ ಇತ್ತು.
ದೇಶಭಕ್ತಿಯ ಯಾವುದೇ
ಸಂದರ್ಭ ಬರಲಿ, ಎಲ್ಲರಲ್ಲೂ ಭರಪೂರ್ ಜೋಶ್ ಎದ್ದು ಕಾಣುತ್ತಿತ್ತು.
ಬೆಳಗಿನಲ್ಲೇ ಎದ್ದು,ಶಾಲೆಗೆ ಹೋಗುವುದು,ಸಾಲು ಸಾಲಾಗಿ, ಜೈಕಾರಗಳನ್ನು ಕೂಗುತ್ತ 'ಊರಿನ ಪ್ರಮುಖ ಬೀದಿಗಳಲ್ಲಿ ಸುತ್ತುವುದು
ನಮಗೆಲ್ಲ ಖುಶಿಯ ಸಂಗತಿ.ಅದಕ್ಕೆ 'ಪ್ರಭಾತ ಫೇರಿ'- ಎಂದೇ ಹೆಸರು.
No comments:
Post a Comment