ನೆನಪಿನ ನವಿಲುಗರಿ...
ಸುಮಾರು ಒಂದು ವಾರದ ಹಿಂದೆ ನನ್ನ Whats App ಗೆ
ಒಂದೆರಡು ಮೆಸೇಜುಗಳು ಬಂದಿದ್ದವು. ತುಂಬ ಉತ್ತಮ ಗುಣಮಟ್ಟದ ಸಂದೇಶಗಳು...ನಂಬರ್ ನೋಡಿದರೆ ಗುರುತು ಹಿಡಿಯಲಾಗಲಿಲ್ಲ.ಫೋಟೋ ಇರಲಿಲ್ಲ,ಬದಲಿಗೆ ಬೇರೇನೋ ಇತ್ತು.
ಅವರ ನಂಬರ್ ಕೂಡ ನನ್ನ ಲಿಸ್ಟನಲ್ಲಿ
ಇರಲಿಲ್ಲ.
" ದಯವಿಟ್ಟು ತಪ್ಪು ತಿಳಿಯಬೇಡಿ, ತಾವು ಯಾರು? ಪ್ರೊಫೈಲ್ ನಿಂದ ಗುರುತು ಸಿಗುತ್ತಿಲ್ಲ"-
ಎಂದು ಬರೆದೆ.
" ನಾನು S.N ಗುಬ್ಬಿ ಅಂತ.
ರಟ್ಟೀಹಳ್ಳಿಯ ಶ್ರೀ ಕುಮಾರೇಶ್ವರ ಮಾಧ್ಯಮಿಕ ಶಾಲೆಯ ೧೯೬೦-೬೪ ನೇ ಸಾಲಿನಲ್ಲಿ ನಿಮ್ಮ class mate. ನಿಮಗೆ ನೆನಪಾಗಲಿಕ್ಕಿಲ್ಲ ಏಕೆಂದರೆ ನಾನು ಸದಾ ' ಕೊನೆಯ ಬೆಂಚಿನ ವಿದ್ಯಾರ್ಥಿ' - ಎಂದು ಬರೆದು ಒಂದಿಬ್ಬರ
ಹೆಸರುಗಳನ್ನು ಉಲ್ಲೇಖಿಸಿದ್ದರು.
ತಕ್ಷಣ ನನ್ನ ಸಂಗ್ರಹದಲ್ಲಿದ್ದ ಫೋಟೋ
ಸಂಗ್ರಹಕ್ಕೆ ಹೋಗಿ ನಮ್ಮSSC annual day ದ ಫೋಟೋ ತೆಗೆದು
ನೋಡಿದೆ.ಶಿಕ್ಷಕರನ್ನು ಹೊರತುಪಡಿಸಿ ದರೆ ಎಲ್ಲರೂ 'ಚಿವ್ ಚಿವ್' ಗುಬ್ಬಿಗಳೇ-
ಸಂಪರ್ಕದಲ್ಲಿದ್ದ ಒಬ್ಬಿಬ್ಬರನ್ನು ಬಿಟ್ಟರೆ
ಯಾರೂ ಗುರುತೇ ಸಿಗಲಿಲ್ಲ. ಯಾಕೆಂದರೆ ಆಗ ಯಾರ ಬಳಿಯೂ camera ಗಳು ಇರುತ್ತಿರಲಿಲ್ಲ. ವಿಶೇಷವೇನಾದರೂ ಇದ್ದರೆ ಅವತ್ತೊಂದು ದಿನ ಶಾಲಾ ಮಂಡಳಿ photographer ನನ್ನು ಕರೆಸುತ್ತಿದ್ದರು. ಮೇಲಾಗಿ ನಮ್ಮದೇ ಎರಡನೇ batch...ಮೂರು ಕಾಲಿನ stand ಒಂದರ ಮೇಲೆ ಹೊತ್ತು ತಂದ camera ಇಟ್ಟು cameraman ಮುಖಕ್ಕೆ ಕರಿಬಟ್ಟೆ ಹಾಕಿಕೊಂಡು ಹತ್ತಾರು ಭಂಗಿಗಳಿಗೆ instructions ಕೊಟ್ಟು ,ಹತ್ತಾರು ಸಲ ಮುಖ ಹೊರಗೆ ಒಳಗೆ ಹಾಕಿ/ ತೆಗೆದು, pls one more ಆಂದಾಗ ಎಲ್ಲರೂ ಕಪಿಚೇಷ್ಟೆ ಮಾಡಿ ಚೀರಾಡುವುದೂ ಇತ್ತು. ಅಂಥ ಫೋಟೋಗಳಲ್ಲಿ ಮನುಷ್ಯರೇ ಕಾಣದಿದ್ದಾಗ ಮುಖ ಕಾಣುವುದನ್ನು
ಬಯಸುವುದಾದರೂ ಹೇಗೆ?
' ಸರಿ 'ಎಂದು ಅವರನ್ನು ಗುರುತಿಸುವ ಪಣದಿಂದ ಹಿಂದೆ ಬಂದು
ಅವರಿಗೊಂದು ಧನ್ಯವಾದ ಹೇಳಿ
ವಿರಮಿಸಿದೆ...
ಆದರೆ ಮನಸಿನ ಪುಟಗಳ ನಡುವಿನ ನವಿಲುಗರಿಗಳು ಅಗಾಧ ವೆಂಬಂತೆ ಬಿಚ್ಚಿಕೊಂಡಿದ್ದವು.' ಮರೆವು ನೋವುಗಳನ್ನು ಮರೆಸಿದರೆ,ನೆನಪು ಗಳು ಬದುಕಿನ ಸಂಧ್ಯಾಕಾಲದಲ್ಲಿ
' ಕಾಮನ ಬಿಲ್ಲುಗಳ ಕಮಾನು-'ಗಳನ್ನೇ
ಕಟ್ಟುತ್ತವೆ ನೋಡಿ.ಅವು ಬದುಕಿನ
ಬಣ್ಣಗಳು...
No comments:
Post a Comment