ಕೆಲವೊಮ್ಮೆ- ಮಾತು ಬೆಳ್ಳಿಯೂ ಅಲ್ಲ,
ಮೌನ ಬಂಗಾರವೂ ಅಲ್ಲ...
ಮದುವೆಯಾದ ಹೆಣ್ಣುಮಕ್ಕಳಿಗೆ
ಮದುವೆಯ ನಂತರದ ಐದುವರ್ಷಗಳ
ಕಾಲ ಶ್ರಾವಣ ಮಂಗಳವಾರಗಳಂದು- ಮಂಗಳ ಗೌರಿವ್ರತ- ಅಂತ ಇರುವುದು ಬಹುಶಃ ಎಲ್ಲರಿಗೂ ಗೊತ್ತು.ಹಾಗೆಯೇ ಕುಮಾರಿಯರಿಗೆ,ಅವರು'ದೊಡ್ಡವರಾಗುವುದಕ್ಕೂ- (mature)ಮೊದಲ ಐದುವರ್ಷಗಳ ಕಾಲ,,' ಮೌನಗೌರಿ ವ್ರತ'- ಅಂತ ಮಾಡುವುದು ನಮ್ಮ ಕಡೆ ಇತ್ತು.ಈಗಿಲ್ಲ ,ಮಾಘ ಮಾಸ ಪೂರ್ತಿ ಕುಮಾರಿಯರು ನಸುಕಿನಲ್ಲಿ ಎದ್ದು, ಕಡ್ಡಾಯ ತಲೆಸ್ನಾನ ಮಾಡಿ ಸೂರ್ಯೋದಯ/ಸೂರ್ಯಾಸ್ತದ ಹೊತ್ತಿಗೆ ಈ ಪೂಜೆ ಮಾಡಬೇಕು.ಆ ವೇಳೆಯಲ್ಲಿ ಮಾತನಾಡುವ ಹಾಗಿಲ್ಲ, ಕಟ್ಟು ನಿಟ್ಟಾಗಿ ಮೌನದಲ್ಲಿಯೇ ಪೂಜೆ ನಡೆಯಬೇಕು.ಪೂಜೆ ಮುಗಿಸಿ ಸೂರ್ಯನಿಗೆ ಅಕ್ಷತೆ ಹಾಕಿಯೇ ನಂತರ ಏನಾದರೂ ಆಹಾರ ಸೇವಿಸಬೇಕು. ಅಲ್ಲಿಯವರೆಗೂ ಎಲ್ಲ ವ್ಯವಹಾರವೂ ಕೈ ಸನ್ನೆ,ಬಾಯಿ ಸನ್ನೆ ಮುಖಾಂತರವೇ- ಅಪ್ಪಿ ತಪ್ಪಿ ಮಾತನಾಡಿದರೆ ಸಂಜೆಯ ವರೆಗೂ ಪೂರ್ತಿ ಉಪವಾಸವಿರುವು ದೇ ಪ್ರಾಯಶ್ಚಿತ್ತ...
ಈ ವ್ರತದ interesting ಭಾಗ
ಇದಲ್ಲ.ಇದರ ಮುಂದಿನದು.ಅವರನ್ನು
ಹೇಗಾದರೂ ಮಾತನಾಡಿಸಿ ಅವರು ನಿಯಮ ಮುರಿಯುವಂತೆ ಮಾಡಿ, ವ್ರತವನ್ನು ಮಾಡುವವರನ್ನು ಉಪವಾಸ ಬೀಳುವಂತೆ ಮಾಡಲು ಮನೆಯಲ್ಲಿ ಉಡಾಳ ಪಡೆಯೊಂದು ಸದಾಕಾಲವೂ ಸಿದ್ಧವಿರುತ್ತಿತ್ತು. ಅವರೊಂದಿಗೆ ಸೆಣೆಸಲು ಹುಡುಗಿಯ ರು ಸಾಕಷ್ಟು ಎಚ್ಚರವಿದ್ದರೂ ಆಗಾಗ ಒಮ್ಮೊಮ್ಮೆ ಬಲಿಬೀಳುವದೂ ಇತ್ತು. ಆಗ ಕಿರಿಯರ ಕುಣಿತ/ ಹಿರಿಯರ ಕೂಗಾಟವೂ ದಾಖಲು ಯೋಗ್ಯವೇ...
ಈಗ ಇದೆಲ್ಲ ನೆನಪಾಗಲು
ಮೊನ್ನೆ ಮೊನ್ನೆ ನಡೆದ ಉತ್ತರಭಾರತದ
'ಕನ್ಯಾಪೂಜೆ'ಯ ಚಿತ್ರಗಳು,ವೀಡಿಯೋ ಗಳು, ವರದಿಗಳು ಕಾರಣ...
ಅದಕ್ಕೂ ಮುಖ್ಯ ಕಾರಣವೆಂದರೆ ಇತ್ತೀಚೆಗೆ ಎಲ್ಲರ ಮನೆಗಳಲ್ಲಿ ಜನಗಳು ಕಡಿಮೆಯಾಗಿ/
ಇದ್ದವರು ವಿಪರೀತ busy ಯಾಗಿ/
ಹೆಚ್ಚಿನ ಮಕ್ಕಳು ವಿಪರೀತವಾಗಿ ಇಂಗ್ಲೀಷ್ ಮಯವಾಗಿದ್ದರಿಂದ ಹಿರಿಯರಿಗೆ ಮಾತನಾಡಬೇಕೆಂದರೂ ಜೊತೆಗಾರರಿಲ್ಲದೇ ' ಕಡ್ಡಾಯ ಮೌನವ್ರತ'ಕ್ಕೆ ಶರಣಾಗಬೇಕಾಗಿ ಬಂದಿರುವುದು ವಿಪರ್ಯಾಸ. ಅದೇ ಒಂದು ಸಮಸ್ಯೆಯೂ ಆಗಿ ಹಿರಿ- ಕಿರಿಯರೆನ್ನದೇ ಬಹಳಷ್ಟು ಜನ
ಮಾನಸಿಕವಾಗಿ ಕುಗ್ಗಿ ಹೋಗುತ್ತಿರುವು ದೂ ಎಲ್ಲರಿಗೂ ಗೊತ್ತಿರುವ ಮಾತೇ...
ಈ ಹಿಂಸಾತ್ಮಕ ' ಮೌನವ್ರತ'- ಭಂಗ
ಮಾಡಿ ಮೊದಲಿನ ಲವಲವಿಕೆಯನ್ನು
ಮರಳಿಸಲು ಆ ಮೊದಲಿನ ತುಂಟ,
ಹುಡುಗಾಟ ಪ್ರಿಯ ಮಕ್ಕಳ ದಂಡು
ಅರ್ಜಂಟಾಗಿ ಬೇಕಾಗಿದೆ...
No comments:
Post a Comment