Saturday, 29 March 2025

     ಅಮ್ಮನ ಕೂಗಿಗೆ ನಸುಕಿನಲ್ಲೇ ಏಳೋದು/ ಬಾಗಿಲ ಹಸೆ/ ತೋರಣ/
ರಂಗೋಲಿ/ ಹೊಸ ಬಟ್ಟೆ ಹಾಕಿ ದುರ್ಗಾದೇವಿ ಗುಡಿಗೆ ಹೋಗೋದು/ ತುಂಬಿದ ಬಿಂದಿಗೆಯಲ್ಲಿ ಹೂವು/ ಮಾವು/ ಬೇವು ಸಮೇತ ದೇವಿಗೆ ಅರ್ಪಿಸಿ/ ಎಣ್ಣೆ ದೇವಿಗೆ ಹಚ್ಚಿ, ಅರ್ಧದಷ್ಟು ಮರಳಿ ತಂದು ನಮ್ಮ ಸ್ನಾನದ ನೀರಿಗೆ ಸೇರಿಸಿ ತಲೆಸ್ನಾನ ಮಾಡಿ/ ಹೊಸಬಟ್ಟೆ ಹಾಕಿ ಸಮೀಪದ
ದೇವ- ದೇವತೆಗಳು/ಗುರು- ಹಿರಿಯರು/ ಪಾಲಕರು ಎಲ್ಲರಿಗೂ
ನಮಸ್ಕರಿಸಿ,ಆಶೀರ್ವಾದ‌ ಪಡೆದು, ತಿಂಡಿ ಮುಗಿಸಿ,ಗೆಳತಿಯರ ಮನೆ ಸುತ್ತಾಡಿ, ಮಧ್ಯಾನ್ಹ ಹೋಳಿಗೆ ಉಂಡು/ಸಂಜೆ ತಿಳಿಯಲಿ/ ಬಿಡಲಿ
ಆಚಾರ್ಯರು ಓದುವ ಪಂಚಾಂಗ
ಪಠಣ ಕೇಳಿ...
    ‌‌‌‌          ಆಚರಿಸುತ್ತಿದ್ದ ಯುಗಾದಿ
ನೆನಪಾಗುತ್ತಿದೆ...
          ಹೊಸ ಸೀರೆಗಳನ್ನುಟ್ಟು ಪುಟ್ಟ ಮಕ್ಕಳನ್ನು ಬಗಲಿಗೇರಿಸಿ, ದೊಡ್ಡ ಮಕ್ಕಳಿಗೆ ಗದರುತ್ತ ಓಣಿ‌ಗಳಲ್ಲಿನ‌ ಮುತೈದೆಯರ ಸಾಲುಗಳು/ ಯಾರೇ ಹಿರಿಯರ ದರ್ಶನವಾಗಲೀ ಬಗ್ಗಿ ಮಾಡುವ ನಮಸ್ಕಾರ - ಆಶೀರ್ವಚನ ಗಳು ಇವನ್ನೆಲ್ಲ ನೋಡುತ್ತಾ ಕೇಳುತ್ತ ಸಾಗುವ ನಮ್ಮ ಗುಂಪುಗಳು... ನೆನಪಾಗುತ್ತಿವೆ...
     ‌        ಏನು ಮಾಡುತ್ತೇವೆ
ಯಾಕಾಗಿ  ಮಾಡುತ್ತೇವೆ, ಮಾಡದಿದ್ದರೆ 
ಏನು ಆಗುತ್ತದೆ, ಎಂಬುದಕ್ಕೆ
ಅಜ್ಜಿ ಹೇಳುವ ಕಥೆಗಳನ್ನು ನಂಬುತ್ತ
ಕಿಂಚಿತ್ತು ಮನದಲ್ಲಿ ಕಲ್ಮಷವಿಲ್ಲದೇ
ಕಳೆದ ದಿನಗಳು ಸುರುಳಿ ಸುರುಳಿ
ಬಿಚ್ಚಿಕೊಳ್ಳುತ್ತಿವೆ...
     ‌‌‌    ಆ ದಿನಗಳಿಗೆ ಜಾರಿ ಆನಂದಿಸುತ್ತಿದ್ದೇನೆ ..ಬಾಲ್ಕನಿಯಿಂದ...



No comments:

Post a Comment

      ಬದುಕಿನಲ್ಲಿ ನನ್ನ ಶಕ್ತಿ ಇದ್ದಷ್ಟು/ ನನಗೆ ತಿಳಿದಷ್ಟು/ನಾನು ಅಂದುಕೊಂಡ ದ್ದು ಮಾಡಬಹುದಾದದ್ದನ್ನು ಮಾಡಿ ಆಯಿತಾ- ಗೊತ್ತಿಲ್ಲ.ಆದರೆ ಈಗೀಗ  ಏನು ಮಾಡಬಹುದು? ಮತ್ತ...