ಒಂದು ಫೋನು.ಬಂದು ನೋಡಿದೆ. ರೇಣುಕಾ ಮಾಡಿದ್ದರು- " ನಿಮ್ಮ face
book ನಲ್ಲಿ ನಿನ್ನಿನ post ನೋಡಿದೆ, ತುಂಬಾನೇ ಚನ್ನಾಗಿದೆ,ಅದನ್ನು public
ಮಾಡಿ please, ನಾನು ನನ್ನ ತಂಗಿ- ತಮ್ಮ ಇಬ್ಬರಿಗೂ ಓದಿ ಹೇಳಿದೆ, ಅವರಿಗೂ ಹಿಡಿಸಿತು...ಅದಕ್ಕೇ ಫೋನ್ ಹಚ್ಚಿದೆ"- ಎಂದರು.ಅವರ ತಮ್ಮ- ತಂಗಿಯರೊಂದಿಗೂ ಮಾತಾ ಯಿತು...ನನಗೆ ದಿಗಿಲಿನೊಂದಿಗೆ ಸಂತೋಷವಾಯಿತು.ನನ್ನ ಲೇಖನ ವನ್ನು ಮೆಚ್ಚಿದ್ದಕ್ಕಿಂತ ಬೆಳಿಗ್ಗೆ ಎದ್ದ ಕೂಡಲೇ ಇಂಥದೊಂದು ತಣ್ಪಿನ- ಸುಂದರವಾದ ಅನುಭವ ಒದಗಿದ್ದಕ್ಕೆ. Thanks ಹೇಳಿ ಮತ್ತೊಮ್ಮೆ post public ಮಾಡಿ - ಎಂದು ಹೇಳಿಸಿಕೊಂ
ಡು ಫೋನ್ ಕೆಳಗಿಟ್ಟೆ...ಒಂದು ಬಗೆಯ
ಗುಂಗು ಕೆಲಹೊತ್ತು...
ಒಬ್ಬರನ್ನು ಖುಶಿಗೊಳಿಸು ವುದು ಎಷ್ಟೊಂದು easy!!! - ಎನಿಸಿ ಬಿಟ್ಟಿತು ನನಗೆ...ನನ್ನ ಬರಹವೇನು? ಹೇಗೆ ನನಗೆ ಗೊತ್ತಿದೆ.ಹೆಚ್ಚಿನ ಪಾಂಡಿತ್ಯ ವಿಲ್ಲದ/ ಹೆಚ್ಚು ಆಳ- ಅಗಲವಿಲ್ಲದ ದಿನ ನಿತ್ಯದ ಬದುಕಿನ ಭಾವಗಳ ಅನು
ರಣನಗಳವು...ಯಾರೇ ಓದಲಿ ಸ್ವಲ್ಪವಾದರೂ relate ಮಾಡಿಕೊಳ್ಳ ಬಹುದಾದ ಸಾಮಾನ್ಯಾತಿ ಸಾಮಾನ್ಯ
ಘಟನೆಗಳು ಮಾತ್ರ.ಒಂದು ಕಾಲಘಟ್ಟ ದಲ್ಲಿ ಬಾಳಿ ಬದುಕಿದ ಮಂದಿಗೆ ತಮ್ಮದೇ ಅನಿಸಬಲ್ಲಂಥ ಘಟನಾವಳಿ ಗಳ ಸಾಲು- ಸಾಲು...ಎಲ್ಲವೂ ಕ್ರಿಕೆಟ್
ಕಾಮೆಂಟರಿಯಂತೆ ನೇರವಾಗಿ ತಲೆಯಿಂದ ' ತಲೆಮಾರಿಗೆ'- ಇದರಲ್ಲಿ
ಭಾಷಾ ಪ್ರೌಢಿಮೆಯಂಥ ಹೆಚ್ಚುಗಾರಿಕೆ
ಯಿಲ್ಲ.ಯಾವುದೇ ಕಾಲ್ಪನಿಕತೆ ಕೂಡ
ಇಲ್ಲ...ಆದರೆ ಬದುಕಿನ ಹಸಿಹಸಿ ಅನುಭವಗಳಿವೆ.ಓದಿದರೆ ಕೆಲಕಾಲ
ಮನದಲ್ಲಿಳಿಯುತ್ತವೆ ಎನ್ನಬಹುದು.
ದಿನನಿತ್ಯದ ಬದುಕಿನ ಬವಣೆ ಗಳಲ್ಲಿ ಮೊದಲು ಬರೆಯುತ್ತಿದ್ದುದನ್ನು
ಬಿಟ್ಟು ಚಡಪಡಿಸುತ್ತಿದ್ದವಳಿಗೆ retire
ಆಗುತ್ತಲೇ smart phone ಬಂದದ್ದು/ ಬೇಕಾದುದನ್ನು ಕಲಿಸಲು ಮೊಮ್ಮಕ್ಕ ಳು ಮನೆಯಲ್ಲೇ ಇನ್ನೂ ಇದ್ದುದು ವರವಾಗಿ ಏನೋ ಒಂದಿಷ್ಟು ಕಲಿತೆ/ ಕಲಿತದ್ದು ಉಳಿಸಿಕೊಳ್ಳುವ ಹಂಬಲ ದಿಂದ ಬರೆಯುತ್ತ ಹೋದೆ.ಅದನ್ನು
ನನ್ನ ತಮ್ಮ ತಾನೇ ಶ್ರಮ ಪಟ್ಟು ಪುಸ್ತಕ
ರೂಪದಲ್ಲಿ ತಂದಿಟ್ಟೇ ಹೋದ...ಅವನ
ನ್ನು ನೆನೆದೇ ಬರದೆದ್ದಲ್ಲ ಪುಸ್ತಕ ಮಾಡಿದೆನೇ ಹೊರತು ಅನ್ಯ ಭಾವವಿಲ್ಲ. ಯಾರಾದರೂ ಇಚ್ಛೆಪಟ್ಟರೆ
ಅವರಿಗೆ ಕೊಡುತ್ತೇನೆ - ಅಷ್ಟೇ...
ಈಗ ಅದೂ ಆಗುತ್ತಿಲ್ಲ... ಏನೋ ಅಷ್ಟಿಷ್ಟು ಮನಸ್ಸು ಬಂದಾಗ
ಗುರಿ- ಗರಿ ಎರಡೂ ಇಲ್ಲದ ಏನೋ
ಒಂದಿಷ್ಟು ಗೀಚುತ್ತೇನೆ ಅಷ್ಟೇ...
ನೋಡಿ ರೇಣುಕಾ,ಹಾಗೆಯೇ ನಿಮ್ಮದೊಂದು ಫೋನಿನ ಕಮಾಲನ್ನ...
No comments:
Post a Comment